ಕೆ.ಆರ್.ಪೇಟೆ: ಕೊರೋನಾ ಸಂಕಷ್ಟದಲ್ಲಿ ಸಮಯದಲ್ಲಿ ಸಂಘ ಸಂಸ್ಥೆಗಳು ಸೇರಿದಂತೆ ಹಲವು ಸಂಘಟನೆಗಳು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದು ಅದರಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ತಾಲೂಕಿನ ಬಾಳೆ ಬೆಳೆಯುವ ರೈತರಿಂದ ನೇರವಾಗಿ ಬಾಳೆಹಣ್ಣನ್ನು ಖರೀದಿಸಿ ಗೊನೆ ಸಹಿತ ಕೊರೋನಾ ವಾರಿಯರ್ಸ್ ಗಳಿಗೆ ಹಂಚುವ ಮೂಲಕ ಗಮನಸೆಳೆದಿದ್ದಾರೆ.
ಈಗಾಗಲೇ ಕೋರೋನಾ ವಾರಿಯರ್ಸ್ ಗಳಾದ ಆರೋಗ್ಯ ಇಲಾಖೆಯ ನೌಕರರು, ಪೊಲೀಸ್ ಇಲಾಖೆ ನೌಕರರು, ಕಂದಾಯ ಇಲಾಖೆಯ ನೌಕರರು ಹಾಗೂ ಪತ್ರಕರ್ತರಿಗೆ ಬಾಳೆ ಹಣ್ಣಿನ ಗೊನೆಗಳನ್ನು ನೇರವಾಗಿ ನೀಡಲಾಗುತ್ತಿದೆ.
ಈ ಕಾರ್ಯವನ್ನು ಶ್ಲಾಘಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್ ಅವರು ಬ್ಯಾಂಕ್ ವತಿಯಿಂದ ಕೊರೋನಾ ಸೋಂಕಿತರಿಗೆ ಪ್ರೋತ್ಸಾಹ ತುಂಬುತ್ತಿರುವ ಗ್ರಾಮೀಣ ಬ್ಯಾಂಕ್ ಸೇವೆ ಶ್ಲಾಘನೀಯ. ಇದೇ ರೀತಿ ಎಲ್ಲಾ ಸಂಘ ಸಂಸ್ಥೆಗಳು ಕೋರೋನಾ ವಾರಿಯರ್ಸ್ ಗಳಿಗೆ ಮಾಸ್ಕುಗಳು, ಸ್ಯಾನಿಟೈಸರ್ ಗಳು, ಪೌಷ್ಟಿಕ ಹಣ್ಣುಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಕೊರೋನಾ ಮಹಾಮಾರಿಯ ವಿರುದ್ಧ ಹೋರಾಟ ಮಾಡಲು ಶಕ್ತಿ ತುಂಬಬೇಕು ಎಂದು ಅವರು ಸಲಹೆ ನೀಡಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಾದ ಸಮೀರ್ ಹುನಗುಂದ್ ಅವರು ಮಾತನಾಡಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಅನಂತ.ಸಿ.ಹೆಗ್ಗಡೆಯವರ ಸಲಹೆಯ ಮೇರೆಗೆ ರೈತರಿಗೆ ಲಾಕ್ ಡೌನ್ ಹಿನ್ನೆಲೆ ನೆರವಾಗುವ ಹಿತದೃಷ್ಟಿಯಿಂದ ರೈತರಿಂದ ನೇರವಾಗಿ ಬಾಳೆಯ ಹಣ್ಣಿನ ಗೊನೆಗಳನ್ನು ಖರೀದಿಸಿ ಅದನ್ನು ತಾಲೂಕಿನಲ್ಲಿ ಕೊರೋನಾ ವಾರಿಯರ್ಸ್ ಆಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರಿಗೆ ಹಂಚಿಕೆ ಮಾಡುವ ಮೂಲಕ ಕೋರೋನಾ ಸಂಕ?ವನ್ನು ಬ್ಯಾಂಕ್ ಹಂಚಿಕೊಳ್ಳಲು ಮುಂದಾಗಿದೆ ಮುಂದಿನ ದಿನಗಳಲ್ಲಿ ವೈದ್ಯರ ಸಲಹೆಯಂತೆ ಮಾಸ್ಕುಗಳು ಮತ್ತು ಸ್ಯಾನಿಟೈಸರ್ ಗಳನ್ನು ನೀಡಲು ಬ್ಯಾಂಕ್ ಅಗತ್ಯ ಕ್ರಮ ವಹಿಸಲಿದೆ ಎಂದು ಭರವಸೆ ನೀಡಿದರು

By admin