ಚಾಮರಾಜನಗರ: ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮಿಕರಣ ಸಮಿತಿ ಸಭೆ ನಡೆಯಿತು.
ಇದೇವೇಳೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ತಾಲೂಕಿನ ಹರವೆ ಹೋಬಳಿಯ ವೀರನಪುರ, ಬಡಗಲಪುರ, ಹರದನಹಳ್ಳಿ ಹೋಬಳಿ ವ್ಯಾಪ್ತಿಯ ಯಣಗುಂಬ, ಹೊನ್ನಹಳ್ಳಿ, ಅರಕಲವಾಡಿ, ಕಸಬಾ ಹೋಬಳಿಯ ಶಿವಪುರ ಗ್ರಾಮಗಳ ೧೦ ಮಂದಿ ಫಲಾನುಭ ವಿಗಳಿಗೆ ಬಗರ್ ಹುಕುಂ ಸಾಗುವಳಿ ಚೀಟಿಗಳನ್ನು ವಿತರಿಸಿದರು,
ನಂತರ ಅವರು ಮಾತನಾಡಿ, ಬಗರ್ ಹುಕುಂ ಸಾಗುವಳಿ ಬಾಕಿಯಿರುವ ಕಡತಗಳನ್ನು ಈಗಾಗಲೇ ಪರಿಶೀಲನೆ ನಡೆಸಲಾಗಿದೆ, ಪ್ರಸ್ತುತ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮರುಪರಿಶೀಲಿಸಿ, ಹಣಕಟ್ಟದ ಫಲಾನುಭವಿಗಳಿಗೆ ಹಣಕಟ್ಟುವಂತೆ ಅಧಿಕಾರಿಗಳು ಸೂಚನೆ ನೀಡಬೇಕು,
ಈಗಾಗಲೇ ಹಣಪಾವತಿಸಿರುವ ಫಲಾನುಭವಿಗಳಿಗೆ ಸಾಗುವಳಿಪತ್ರ ವಿತರಣೆಗೆ ಕ್ರಮ ವಹಿಸ ಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು
ಈಗ ಸಾಗುವಳಿ ಪತ್ರ ಚೀಟಿ ಪಡೆದಿರುವ ಫಲಾನುಭವಿಗಳು ತಮ್ಮ ಜಮೀನಿನಲ್ಲಿ ಉತ್ತಮ ಕೃಷಿಚಟುವಟಿಕೆ ಕೈಗೊಳ್ಳಬೇಕು, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸಕಾಲದಲ್ಲಿ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾ ಗಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಬಗರ್ ಹುಕುಂ ಸಾಗುವಳಿ ಸಮಿತಿಸದಸ್ಯರಾದ ವೀರಭದ್ರಸ್ವಾಮಿ, ವಡ್ಡರಳ್ಳಿ ಶೇಖರಪ್ಪ, ಮಹೇಶ್ವರಿ, ಸುಬ್ಬೇಗೌಡ, ತಹಸೀಲ್ದಾರ್ ಚಿದಾನಂದ ಗುರುಸ್ವಾಮಿ, ಹೋಬಳಿಮಟ್ಟದ ರಾಜಸ್ವ ನಿರೀಕ್ಷಕರು, ಶಿರಸ್ತೇದಾರರು ಹಾಜರಿದ್ದರು.