ಬಿಜೆಪಿ ರಾಜ್ಯ ಉಪಾಧ್ಯಕ್ಷ ಯೂತ್ ಐಕಾನ್ ಬಿ ವೈ ವಿಜಯೇಂದ್ರ ರವರ ಜನ್ಮದಿನಾಚರಣೆ ಅಂಗವಾಗಿ
ಬಿ ವೈ ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಸಾಯಿಬಾಬಾ ಮಂದಿರ ಮುಂಭಾಗ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಆನಂತರ ನಿರಾಶಿತರಿಗೆ 100ಕಂಬಳಿ ಹಾಗೂ 500ಮಾಸ್ಕ್ ವಿತರಿಸಿ ಮಹಾಮಾರಿ ಕೂರೋನಾ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ವಿಶೇಷವಾಗಿ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್ ವಿ ರಾಜೀವ್ ಮಾತನಾಡಿ
ಬಿ ಎಸ್ ಯಡಿಯೂರಪ್ಪನವರ ಮಗ ಬಿ ವೈ ವಿಜಯೇಂದ್ರ ಯೂತ್ ಐಕಾನ್ ವಿಜೇಂದ್ರ ರವರ ಹುಟ್ಟುಹಬ್ಬವನ್ನು ನಿರ್ಗತಿಕರಿಗೆ ಕಂಬಳಿ ರಗ್ಗು ವಿತರಣೆ ಮಾಡುವ ಮೂಲಕ ವಿಶೇಷವಾಗಿ ಕಾರ್ಯಕ್ರಮವನ್ನು ಆಚರಣೆ ಮಾಡುತ್ತಿದ್ದೇವೆ ಮುಂಬರುವ ಚಳಿಗಾಲದಲ್ಲಿ ಕರೋನಾ ಅವಳಿ ಹೆಚ್ಚಾಗುವ ಸಾಧ್ಯತೆಯಿದ್ದು ಚಳಿಗಾಲದಲ್ಲಿ ನಿರ್ಗತಿಕರು ತುಂಬಾ ಕಷ್ಟ ಪಡುವ ಸಂದರ್ಭ ಆದ್ದರಿಂದ ಕಂಬಳಿ ವಿತರಣೆ ಮಾಡುವ ಮೂಲಕ ಬಿ ವೈ ವಿಜಯೇಂದ್ರ ಅವರ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದೇವೆ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಜನ್ಮದಿನಾಚರಣೆ ಆಡಂಬರ ವಾಗಿರುತ್ತದೆ ಆದರೆ ಈ ಸಂಘಟನೆ ಅವರ ಹೆಸರಿನಲ್ಲೇ ವಿಶೇಷವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಅವರು ಸ್ವತಃ ವಕೀಲರಾದ ವಿಜಯೇಂದ್ರರವರು ತುಂಬ ಹತ್ತಿರದಿಂದ ನಾನು ನೋಡಿದ್ದೇನೆ ಅವರ ಚಾಣಾಕ್ಯತನ ಸಂಘಟಿತ ಹೋರಾಟ ರಾಜ್ಯದ ಜನತೆ ಜೊತೆಗೆ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡು ಚುನಾವಣೆಗಳಲ್ಲಿ ಗೆಲುವು ತಂದುಕೊಡುತ್ತಾ ರಾಜ್ಯದ ಭರವಸೆಯ ನಾಯಕನೆಂದು ಬಿಂಬಿತವಾಗಿರುವ ಬಿ ವೈ ವಿಜಯೇಂದ್ರ ರವರು ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುತ್ತ ಬಂದಿದ್ದಾರೆ ಈ ಸಂದರ್ಭದಲ್ಲಿ ಮುಂದಿನ ಭರವಸೆಯ ನಾಯಕ ನಮ್ಮ ನಾಯಕ ವಿಜಯೇಂದ್ರ ರವರ ಆಯುರಾರೋಗ್ಯದಿಂದ ಇನ್ನೂ ಹೆಚ್ಚಿನದಾಗಿ ಜನ ಸೇವೆ ಮಾಡಲು ತಾಯಿ ಚಾಮುಂಡೇಶ್ವರಿ ಹೆಚ್ಚಿನದಾಗಿ ಅವಕಾಶ ಕೊಡಬೇಕೆಂದು ಬೇಡಿಕೊಳ್ಳುತ್ತೇನೆ
ನಂತರ ಮಾತನಾಡಿದ ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಮಾತನಾಡಿ ಬಿ ವೈ ವಿಜಯೇಂದ್ರ ಯಡಿಯೂರಪ್ಪನವರು ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯಾದ್ಯಂತ ಸಂಚರಿಸಿ ಸಂಕಷ್ಟದಲ್ಲಿರುವ ಜನಗಳಿಗೆ ಉಚಿತ ಆಹಾರ ಕಿಟ್ ಹಾಗೂ ಔಷಧಿಗಳನ್ನು ಮತ್ತು ಅದನ್ನು ವಿಶೇಷ ಮೈಸೂರಿನಲ್ಲಿ ಉಚಿತವಾಗಿ 2ಜೋಡಿಗಳಿಗೆ ಸಂಪೂರ್ಣ ಖರ್ಚು ವೆಚ್ಚ ಬಿ ವೈ ವಿಜಯೇಂದ್ರ ಅಭಿಮಾನಿ ಬಳಗದ ವತಿಯಿಂದ ವಿವಾಹ ಮಾಡಿಸುವ ಮೂಲಕ ವಿಶೇಷ ಕಾಳಜಿ ವಹಿಸಿದರು ಹಾಗೆ ಬಡ ಕುಟುಂಬಗಳಿಗೆ ವಿದ್ಯುತ್ ಬಿಲ್ ಬಡ ಕುಟುಂಬದ ಮನೆ ಬಾಡಿಗೆ ವಿತರಿಸುವ ಮೂಲಕ ಸಂದರ್ಭದಲ್ಲಿ ನಿರಂತರವಾಗಿ ಸಾಮಾಜಿಕ ಸೇವೆ ಮಾಡುತ್ತಾ ಬಂದಿರುವುದು ಶ್ಲಾಘನೀಯ ,
ವಿಭಿನ್ನ ರಾಜಕಾರಣಿ ಎಂದು ಬಿಂಬಿಸಿಕೊಂಡಿದ್ದರು
ರಾಜ್ಯದಲ್ಲಿ ಯೂತ್ ಐಕಾನ್ ಎಂದೇ ಬಿಂಬಿತರಾಗಿರುವ ವಿಜೇಂದ್ರ ಯಡಿಯೂರಪ್ಪನವರು ಯುವಕರ ಕಣ್ಮಣಿ ರಾಜ್ಯದ ಬಡ ಜನರ ಆಶಾಕಿರಣ ಮುಂದಿನ ಮುಖ್ಯಮಂತ್ರಿ ಇವರ ಹುಟ್ಟುಹಬ್ಬದಂದು ತಾಯಿ ಚಾಮುಂಡೇಶ್ವರಿ ಆಯುರಾರೋಗ್ಯವನ್ನು ನೀಡಿ ಹೆಚ್ಚಿನದಾಗಿ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಭಗವಂತನಲ್ಲಿ ಪ್ರಾರ್ಥಿಸಿ ಕೊಳ್ಳಲಾಯಿತು
ನಂತರ ಮಾತನಾಡಿದ ಬಿ ವೈ ವಿಜಯೇಂದ್ರ ಅಭಿಮಾನಿ ಬಳಗದ ಸದಸ್ಯರು ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ ಮಾತನಾಡಿ
ಬಿ ವೈ ವಿಜಯೇಂದ್ರ ಅಭಿಮಾನಿ ಬಳಗದ ಸದಸ್ಯರು ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮಿದೇವಿ ಮಾತನಾಡಿ
ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಆದರೂ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಒಳಿತು’
‘ಜನರು ಕಡ್ಡಾಯವಾಗಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಇಂತಹ ಜಾಗೃತಿ ಕಾರ್ಯಕ್ರಮವು ಜನರಲ್ಲಿ ತಿಳಿವಳಿಕೆ ಮೂಡಿಸಲು ನೆರವಾಗಲಿವೆ’ ಹಾಗಾಗಿ
500 ಮಾಸ್ಕ್ ವಿತರಣೆ ಮಾಡುವ ಮೂಲಕ ಅದರ ಬಳಕೆಯ ಅಗತ್ಯತೆ ತಿಳಿಸುವ ಕೆಲಸ ಮಾಡಿದೆ’ ಎಂದರು.
ಇದೇ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್ ವಿ ರಾಜೀವ್ ,ಸಮಾಜ ಸೇವಕರಾದ ಡಿ ಟಿ ಪ್ರಕಾಶ್, ಮಾಜಿ ಮಹಾಪೌರರಾದ ಎಸ್ ಸಂದೇಶ್ ಸ್ವಾಮಿ ,ಬಿಜೆಪಿ ಮುಖಂಡರಾದ ಯಶಸ್ವಿನಿ ಸೋಮಶೇಖರ್ ,ನಗರ ಪಾಲಿಕಾ ಸದಸ್ಯರಾದ ಬಿ ವಿ ಮಂಜುನಾಥ್,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಜಿಸರದ ಲಕ್ಷ್ಮಿದೇವಿ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ಮಧು ಎನ್ ,ಸುಚೀಂದ್ರ ,ಚಕ್ರಪಾಣಿ, ಜಯಪ್ಪ , ಕೃಷ್ಣ ಎಸ್ ಪಿ ,ಸೋಮು , ಪ್ರಶಾಂತ್ ,ಹಾಗೂ ಇನ್ನಿತರರು ಹಾಜರಿದ್ದರು