
ಚಾಮರಾಜನಗರ: ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಬಿಳಿಗಿರಿರಂಗನಬೆಟ್ಟದಲ್ಲಿಂದು ವಿವಿಧ ಶಾಲೆಗಳ ನೂರಾರು ಮಕ್ಕಳಿಂದ ಜಾಗೃತಿ ನಡಿಗೆ ಹಾಗೂ ನುರಿತ ದಂತ ವೈದ್ಯರಿಂದ ಬಾಯಿ ಆರೋಗ್ಯ ಕುರಿತ ಉಪನ್ಯಾಸ ಮತ್ತು ಬಾಯಿ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಹಾಗೂ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಬಿ.ಆರ್. ಹಿಲ್ಸ್ ನಲ್ಲಿ ಆಯೋಜಿಸಲಾಗಿದ್ದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಬಾಯಿ ಆರೋಗ್ಯ ಯೋಜನೆಯ ವಿಭಾಗೀಯ ನೋಡಲ್ ಅಧಿಕಾರಿ ಡಾ. ಸತ್ಯಪ್ರಕಾಶ್ ದೋನ್ಗಡೆ ಅವರು ಉದ್ಘಾಟಿಸಿದರು.
ಬಳಿಕ ವಿಜಿಕೆಕೆ ಶಾಲೆಯ ಆಟದ ಮೈದಾನದಲ್ಲಿ ಶಾಲೆಯ ಮಕ್ಕಳಿಗಾಗಿ ಬಾಯಿ ಆರೋಗ್ಯ ಕುರಿತ ಉಪನ್ಯಾಸ ಹಾಗು ಸಾಮೂಹಿಕ ಹಲ್ಲು ಉಜ್ಜುವ ಕಾರ್ಯಕ್ರಮ ಹಾಗೂ ಬಾಯಿ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯಿತು. ೩೦೦ ಕ್ಕೂ ಹೆಚ್ಚು ಮಕ್ಕಳು ಸಾಮೂಹಿಕ ಹಲ್ಲು ಉಜ್ಜುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಾಯಿ ಆರೋಗ್ಯ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ. ಪ್ರಿಯದರ್ಶಿನಿ ಅವರು ಮಕ್ಕಳಿಗೆ ತಂಬಾಕು ಸೇವನೆಯ ದು?ರಿಣಾಮ ಮತ್ತು ತಂಬಾಕಿನಿಂದಾಗಿ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಹಾಗೂ ಸರಿಯಾದ ರೀತಿಯಲ್ಲಿ ಹಲ್ಲು ಉಜ್ಜುವ ಬಗೆ ಮತ್ತು ಬಾಯಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ವಿವರಿಸಿದರು. ಮಕ್ಕಳಿಗೆ ಬಾಯಿ ಆರೋಗ್ಯ ತಪಾಸಣೆಯನ್ನು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈದ್ಯರ ತಂಡ ನಡೆಸಿತು.
ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಸಂಸ್ಥೆಯ ಆರೋಗ್ಯ ಸಿಬ್ಬಂದಿ, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹಿರಿಯ ದಂತ ವೈದ್ಯ ತಜ್ಞರಾದ ಡಾ. ಅಮಿತ್ ಹಾಗೂ ವೈದ್ಯರ ತಂಡ, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಮತ್ತು ಮೊರಾರ್ಜಿ ದೇಸಾಯಿ ಶಾಲೆಯ ಶಿಕ್ಷಕರು, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೊಸಪೋಡುವಿನಿಂದ ತಂಬಾಕು ಬಳಕೆಯ ವಿರುದ್ಧದ ಘೋ?ಣೆಗಳೊಂದಿಗೆ ಆರಂಭಗೊಂಡ ವಿಜಿಕೆಕೆ ಹಾಗೂ ಮೊರಾರ್ಜಿ ದೇಸಾಯಿ ಶಾಲಾ ಮಕ್ಕಳ ಜಾಗೃತಿ ಜಾಥ ಎರಕನಗದ್ದೆವರೆಗೂ ಸಾಗಿ ಬಿ.ಆರ್.ಹಿಲ್ಸ್ ನ ಪ್ರವೇಶ ದ್ವಾರದಲ್ಲಿ ಪ್ಲಾಸ್ಟಿಕ್ ನಿ?ಧ ಹಾಗೂ ತಂಬಾಕು ಸೇವನೆ ನಿಷಿದ್ಧ ಸೂಚನಾ ಫಲಕವನ್ನು ನೆಡುವ ಮೂಲಕ ಅಂತ್ಯಗೊಂಡಿತು.
