ಸಕ್ಕರೆ ಕಾಯಿಲೆ ಬಗ್ಗೆ ಅರಿವು ನಿಯಂತ್ರಣಕ್ಕೆ ಸಹಕಾರಿ- ಮಾಜಿ ಶಾಸಕ ಎಂ.ಕೆ. ಸೋಮಶೇಖರ್
ಸಕ್ಕರೆ ಕಾಯಿಲೆ ಬಗೆಗಿನ ಅರಿವು ಆದರೆ ನಿಯಂತ್ರಣದಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂದು ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅಭಿಪ್ರಾಯಪಟ್ಟರು.ಅವರು ಇಂದು ಬೆಳಗ್ಗೆ ರಾಮಕೃಷ್ಣ ನಗರದ  ಸುಯೋಗ್ ಡಯಾಬಿಟಿಕ್ ಹೆಲ್ತ್ ಕ್ಲಬ್ ಸುಯೋಗ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಿದ್ದ  ಸಕ್ಕರೆ ಕಾಯಿಲೆ ನಿಯಂತ್ರಣದ ಬಗ್ಗೆ ಅರಿವಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಸಕ್ಕರೆ ಕಾಯಿಲೆಯು ಇಂದು ವ್ಯಾಪಕವಾಗಿ ಹರಡುತ್ತಿದ್ದು, ಸುಯೋಗ್ ಆಸ್ಪತ್ರೆ ಕೈಗೊಂಡಿರುವ ಕಾರ್ಯಕ್ರಮಗಳು ಜನೋಪಯೋಗಿಯಾಗಿವೆ ಎಂದು ಅವರು ಶ್ಲಾಘಿಸಿದರು.


ಸುಯೋಗ ಆಸ್ಪತ್ರೆಯು ಸಕ್ಕರೆ ಕಾಯಿಲೆ ರೋಗಿಗಳ ಸಂಘವನ್ನು ಸ್ಥಾಪಿಸಿ ರೋಗಿಗಳಿಗೆ ಉಚಿತ ಸಲಹೆ ಹಾಗೂ ಕಡಿಮೆ ದರದಲ್ಲಿ ಜನರಿಕ್ ಔಷಧಿಗಳನ್ನು ವಿತರಿಸುತ್ತಿರುವುದು ಪ್ರಶಂಸನೀಯ ಎಂದರು. ಕೊರೋನಾ ಎರಡನೇ ಅಲೆ ಸಂದರ್ಭದಲ್ಲಿಯೂ ಸುಯೋಗ ಆಸ್ಪತ್ರೆಯು ನಿರ್ವಹಿಸಿರುವ ಸೇವೆಯಿಂದ ನೂರಾರು ರೋಗಿಗಳ ಜೀವಹಾನಿ ತಪ್ಪಿದೆ ಎಂದರು.ಸುಯೋಗ್ ಆಸ್ಪತ್ರೆಯ ಆಹಾರ ತಜ್ಞೆ ಅನುಷಾ ಮಾತನಾಡಿ, ಸಕ್ಕರೆ ಕಾಯಿಲೆ ರೋಗಿಗಳು ಎಲ್ಲವನ್ನು ಸೇವಿಸಬಹುದು, ಆದರೆ ಮಿತಿ ಇರಬೇಕು ಎಂದರಲ್ಲದೇ ಸಕ್ಕರೆ ಕಾಯಿಲೆ ರೋಗಿಗಳು ಅನುಸರಿಸಬೇಕಾದ ಆಹಾರ ವಿಧಾನಗಳ ಬಗ್ಗೆ ವಿವರಿಸಿದರು.

ಇದೇ ಸಂದರ್ಭ ಸಕ್ಕರೆ ಕಾಯಿಲೆ ರೋಗಿಗಳ ಪ್ರಶ್ನೆಗಳಿಗೆ ಸಕ್ಕರೆ ಕಾಯಿಲೆ ತಜ್ಞ ವೈದ್ಯ ಡಾ.ಎಸ್. ಪಿ. ಯೋಗಣ್ಣ ಉತ್ತರ ನೀಡಿದರಲ್ಲದೆ ಸೇವಿಸುವ ಆಹಾರ, ವ್ಯಾಯಾಮ, ಧೂಮಪಾನ, ಮದ್ಯಪಾನ ರಹಿತ ಬದುಕು ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

. ಚಿತ್ರದಲ್ಲಿ ಸುಯೋಗ ಆಸ್ಪತ್ರೆ ಅಧ್ಯಕ್ಷ ರಾದ ಡಾ. ಎಸ್. ಪಿ. ಯೋಗಣ್ಣ, ಸುಯೋಗ್ ಡಯಾಬಿಟಿಕ್ ಹೆಲ್ತ್ ಕ್ಲಬ್ ಅಧ್ಯಕ್ಷ ಶ್ರೀ ನಂಜಪ್ಪ ಹಾಗೂ ಕಾರ್ಯಾಧ್ಯಕ್ಷ ಶ್ರೀ ಹೆಚ್ಎಸ್ ರಮೇಶ್ ಚಂದ್ರ  ಅವರುಗಳನ್ನೂ ಕಾಣಬಹುದು