ದಿನಾಂಕ 03 ರಂದು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಕಾನೂನು ಅರಿವು ಮತ್ತು ಕೋವಿಡ್-19 ಕುರಿತು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಅಪರಾಧ ತಡೆ ಮಾಸಾಚರಣೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನ್ಯಾಯಾಧೀಶರು, ವೈಧ್ಯರು ಮತ್ತು ಇನ್ಸ್ಪೆಕ್ಟರ್ ಮಾತನಾಡಿ
ಅಪರಾಧಗಳನ್ನು ತಡೆಗಟ್ಟಲು ಮತ್ತು ಪತ್ತೆ ಮಾಡಲು ಸಾರ್ವಜನಿಕರ ಸಹಕಾರ, ಕಾನೂನುಗಳ ಪರಿಪಾಲನೆ, ಲೋಕ್ ಅದಲಾತ್‍ನ ಸದುಪಯೋಗ, ಸಿವಿಲ್ ವ್ಯಾಜ್ಯಗಳಲ್ಲಿ ಹೊಂದಾಣಿಕೆಯಿಂದ ಬಗೆಹರಿಸಿಕೊಳ್ಳುವುದು
ಸೇರಿಂದತೆ ಕೋವಿಡ್-19 ತಡೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆಯೂ ಸಹ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಇದೇ ವೇಳೆ, ಜೆ.ಸಿ ಟೆಕ್ ಗಾರ್ಮೆಂಟ್ಸ್;ನ ಚೆನ್ನಪ್ಪಾಜಿ ರವರು ಕಾರ್ಯಕ್ರಮದಲ್ಲಿ
ಭಾಗವಹಿಸಿದ್ದ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್;ಗಳನ್ನು ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರತಿನಿಧಿಯಾಗಿ ನ್ಯಾಯಾಧೀಶರಾದ ಶ್ರೀಮತಿ ವಿಧ್ಯಾ ಕೆ, 3ನೇ ಸಿಜೆಎಂ & ಜೆಎಂಎಫ್;ಸಿ ನ್ಯಾಯಾಲಯ, ಮೈಸೂರು ರವರು, ಕೆ.ಆರ್.ಆಸ್ಪತ್ರೆಯ
ವೈಧ್ಯರುಗಳಾದ ಡಾ.ಗುರುರಾಜ್ ಮತ್ತು ಡಾ.ಹಿರ್ಷಿಣಿ, ಮೇಟಗಳ್ಳಿ ಠಾಣೆಯ ಇನ್ಸ್‍ಪೆಕ್ಟರ್ ಎ. ಮಲ್ಲೇಶ್, ವಕೀಲರಾದ ನಾಗರಾಜು, ಜೆ.ಸಿ ಟೆಕ್ ಗಾರ್ಮೆಂಟ್ಸ್ ಮೈಸೂರಿನ ಚೆನ್ನಪ್ಪಾಜಿ ರವರು ಭಾಗಿಯಾಗಿದ್ದರು.