ಯೋಗ ಪಟು ಎನ್ ಅನಂತರವರಿಗೆ ಶ್ರೇಷ್ಠ ಸಾಧಕ ಪ್ರಶಸ್ತಿ ಪ್ರದಾನ
ಶ್ರೀವೀರ ಮದಕರಿ ನಾಯಕ ಯುವ ಬಳಗದ ವತಿಯಿಂದ ದಿನಾಂಕ ಇಂದು ಸಂಜೆ ೬ ಗಂಟೆಗೆ ನಾರಾಯಣ ಶಾಸ್ತಿç ರಸ್ತೆಯಲ್ಲಿರುವ ನಕ್ಷತ್ರ ಕಾಂಪ್ಲೆಕ್ಸ್ ಬಳಿ ಶ್ರೇಷ್ಠ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಹಾಗು ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಮೈಸೂರು ಪೇಂಟ್ಸ್ ವಾರ್ನಿಷ್ ಅಧ್ಯಕ್ಷರಾದ ಶ್ರೀ ಫಣೀಶ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮಡ್ಡೀಕೆರೆ ಗೋಪಾಲ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಯುವ ಮುಖಂಡರಾದ ಶ್ರೀ ಎಂ. ಎನ್. ನವೀನ್ ಕುಮಾರ್, ಸುಯೋಗ್ ಆಸ್ಪತ್ರೆ ಅಧ್ಯಕ್ಷರಾದ ಡಾ. ಎಸ್.ಪಿ. ಯೋಗಣ್ಣ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಸಾಹಿತ್ಯ, ಯೋಗ ಹಾಗೂ ಪತ್ತಿಕಾ ರಂಗದಲ್ಲಿ ವಿಶಿಷ್ಟ ಸಾಧನೆಗೈದಿರುವ ಶ್ರೀ ಎನ್ ಅನಂತ್‌ರವರಿಗೆ ಶ್ರೇಷ್ಠ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.