ವರದಿ : ಮಹೇಶ್ ನಾಯಕ್

ಮೈಸೂರು ಮಾ 27 ಖೇಲೋ ಮಾಸ್ಟರ್ ಗೇಮ್ಸ್ ಫೌಂಡೇಷನ್ ಮೈಸೂರು ವತಿಯಿಂದ ರಾಜ್ಯಮಟ್ಟದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ 3 ನೇ ಕರ್ನಾಟಕ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ (ರಿ) ರವರು ಉಡುಪಿಯಲ್ಲಿ ಮಾರ್ಚ್ 12, 13, 2022 ರಂದು ಆಯೋಜಿಸಿದ್ದ ರಾಜ್ಯಮಟ್ಟದ ಹಿರಿಯರ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮೈಸೂರಿನ ಮೈಸೂರು ಮಾಸ್ಟರ್ಸ್ ಅಥ್ಲೆಟಿಕ್ಸ್ ಟೀಮ್ ನಿಂದ ಸುಮಾರು 21 ಮಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಭಾಗಗಳಲ್ಲಿ ಒಟ್ಟು 75 ಕ್ಕೂ ಹೆಚ್ಚು ಪದಕಗಳನ್ನು ಪಡೆದ ಪದಕಗಳಿಸಿದ ಕ್ರೀಡಾಪಟುಗಳಿಗೆ ಇಂದು ಮೈಸೂರಿನ ಮಾನಸ ಗಂಗೋತ್ರಿ ಒಳಾಂಗಣ ಕ್ರೀಡಾಂಗಣಾದಲ್ಲಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ನಗರ ಪಾಲಿಕೆ ಸದಸ್ಯೆ ಪ್ರಮೀಳಾಭರತ್ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿವುದರಿಂದ್ದ ಆರೋಗ್ಯ ಕಾಪಡುವಲ್ಲಿ ಮಹತ್ವ ಪಾತ್ರ ವಹಿಸುತ್ತದೆ.ಯಾವುದೇ ಕ್ರೀಡೆಗಳಾಗಲೀ. ಕರಾಟೆ, ರೋಬಾಲ್, ಅಥ್ಲೆಟಿಕ್ಸ್ ಕುಸ್ತಿ ಮುಂತಾದ ಕ್ರೀಡೆಗಳಲ್ಲಿ ಕ್ರೀಡೆಯಲ್ಲಿ ನಾವು ತೊಡಗಿಸಿಕೊಂಡಾಗ ಅದರ ಆರೋಗ್ಯದ ಪ್ರತಿಫಲ ಸಿಗಲಿದೆ. ನಾವು ನಮ್ಮ ದೇಶ ಆರೋಗ್ಯವಂತರಾಗಿ ನಾವು ಕಾಪಾಡಿಕೊಳ್ಳಬಹುದು.ಪ್ರತಿಭೆ ಎಲ್ಲಾರಲ್ಲು ಇರುತ್ತದೆ ಅದನ್ನು ನಾವು ಪ್ರತಿರೂಪಕ್ಕೆ ತರಬೇಕು ಅಷ್ಟೆ. ನಾನು ನಮ್ಮ ವಾರ್ಡ್ ಜನತೆಗೆ ಆರೋಗ್ಯದ ಬಗ್ಗೆ ಕ್ರೀಡಾ ಚಟುವಟಿಕೆ ಬಗ್ಗೆ ತಿಳಿಸಿ ಆರೋಗ್ಯವಂತರಾಗಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಹಾಗೂ ಕ್ರೀಡಾ ಪಟುಗಳಿಗೆ ಹೆಚ್ಚು ಪ್ರೋತ್ಸಹ ಸಹಾಯ ನೀಡಬೇಕು. ರಾಜ್ಯ ಮಟ್ಟದಲ್ಲಿ ಪ್ರದರ್ಶನ ನೀಡಿರುವ 20 ಕ್ರೀಡಾಪಟುಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಸುವರ್ಣಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ್,ಎಸ್ ಮಾತನಾಡಿ ತಾಲ್ಲೂಕಿನಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಹೊರಹೊಮ್ಮಬೇಕು, ಅವರಿಗೆ ಸೂಕ್ತ ವೇದಿಕೆ, ಪೆÇ್ರೀತ್ಸಾಹ ಮತ್ತು ಉತ್ತೇಜನ ನೀಡಿ ಹುರಿದುಂಬಿಸುವ ಕೆಲಸವನ್ನು ಮಾಡಬೇಕು ಮುಂದಿನ ದಿನಗಳಲ್ಲಿ ಒಲಂಪಿಕ್ಸನಲ್ಲಿ ಭಾರತ ಪ್ರಥಮ ಸ್ಥಾನ ಪಟ್ಟಿಯಲ್ಲಿ ಇರಬೇಕು. ಆದರಿಂದ್ದ ಕ್ರೀಡಾಪಟುಗಳು ದಿನ ನಿತ್ಯ ತರಬೇತಿ ತೆಗೆದುಕೊಳ್ಳಬೇಕು. ಸರ್ಕಾರದವರು ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳಿಗೆ ಸರ್ಕಾರದಿಂದ್ದ ಸಂಪೂರ್ಣ ಸವಲತ್ತು ನೀಡಬೇಕು. ನೀಡಿದಾಗ ಮಾತ್ರ ನಮ್ಮಲ್ಲಿ ಕ್ರೀಡಾಪಟುಗಳು ಆಸಕ್ತಿ ತೋರುತ್ತಾರೆ. ರಾಜ್ಯ ಮಟ್ಟ ಅನ್ನುವುದಕ್ಕಿಂತ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಪೋಲಿಸ್ ಹಾಗೂ ಅಂತಾರಾಷ್ಟ್ರೀಯ ಹಿರಿಯ ಕ್ರೀಡಾಪಟು ಚಂದ್ರಶೇಖರ್,ಮಾತನಾಡಿ ಹೆಲ್ತ್ ಈಸ್ ಬೆಸ್ಟ್ ಫಿಟನೆಸ್ ಎಲ್ಲಾರಿಗೂ ಇರಬೇಕು.ಒಬ್ಬ ಕ್ರೀಡಾಪಟು ನಿಜವಾಗಲು ಯಾವ ರೀತಿ ಪರಿಶ್ರಮ ಪಡಬೇಕು ಅಂದರೆ ನಿಜವಾಗಲು ಅದು ಕಬ್ಬಿಣದ ಕಡಲೆ ಇದ್ದ ಹಾಗೆ ಯಾರು ಕಷ್ಟ ಪಟ್ಟು ಶ್ರಮದಿಂದ್ದ ಪಾಲ್ಗೂಲುತ್ತಾರೆ. ಅವರಿಗೆ ಮುಂದಿನ ದಿನ ಉತ್ತಮ ಪ್ರತಿಫಲ ಸಿಗಲಿದೆ ಎಂದು ಕ್ರೀಡಾಪಟುಗಳಿಗೆ ಸ್ಪೂರ್ತಿತುಂಬಿದರು.

ಪದಕಗಳಿಸಿದ 21 ಮಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿವರ

1.ಶ್ರೀ ರವಿ ಟಿ.ಎಸ್. 4 ಚಿನ್ನದ ಪದಕ, 1 ಬೆಳ್ಳಿಯ ಪದಕ,2.ಚಂದ್ರಶೇಖರ ಎಂ.ಪಿ. 1 ಚಿನ್ನ 1 ಬೆಳ್ಳಿ ಪದಕ,3.ಡಾ.ಸಂದೀಪ್ ಕೆ.ಟಿ. 1 ಬೆಳ್ಳಿಯ ಪದಕ,4.ಪ್ರಿಯಾಂಕ ಜಿ 1 ಚಿನ್ನದ ಪದಕ 1 ಬೆಳ್ಳಿಯ ಪದಕ 1 ಕಂಚಿನ ಪದಕ,5.ಅರ್ಪಿತಾ ಎಸ್ ಕೆ 3 ಚಿನ್ನದ ಪದಕ 1 ಬೆಳ್ಳಿಯ ಪದಕ 1 ಕಂಚಿನ ಪದಕ,6.ಸುಬ್ಬಲಕ್ಷ್ಮಿ ಟಿ ಎಸ್ 1 ಚಿನ್ನದ ಪದಕ 2 ಬೆಳ್ಳಿಯ ಪದಕ, 7.ಮಂಜ ಎಂ.ಎ. 3 ಬೆಳ್ಳಿ ಪದಕ,8.ಅರುಣ 4 ಚಿನ್ನದ ಪದಕ, 9.ಉಮೇಶ್ ಎಂ.ಪಿ. 1 ಚಿನ್ನದ ಪದಕ 1 ಬೆಳ್ಳಿ ಪದಕ, 10.ರಾಜೇಶ್ವರಿ 2 ಕಂಚಿನ ಪದಕ,11.ಗಣಪತಿ ಜಕಾತಿ 1 ಚಿನ್ನದ ಪದಕ 2 ಬೆಳ್ಳಿಯ ಪದಕ 1 ಕಂಚಿನ ಪದಕ, 12.ವನಿತಾ ಕುಮಾರಿ 2 ಬೆಳ್ಳಿಯ ಪದಕ 1 ಕಂಚಿನ ಪದಕ,13.ಸುನಿತಾ 3 ಕಂಚಿನ ಪದಕ,14.ರಚನಾ ಶಿವಕುಮಾರ್ 3 ಚಿನ್ನದ ಪದಕ 1 ಬೆಳ್ಳಿಯ ಪದಕ 1 ಕಂಚಿನ ಪದಕ, 15.ಜ್ಯೋತಿ ಎಸ್ 2 ಬೆಳ್ಳಿಯ ಪದಕ 2 ಕಂಚಿನ ಪದಕ 16.ಪ್ರಮೀಳಾ ಭರತ್ 5 ಬೆಳ್ಳಿಯ ಪದಕ,17.ಚರಣ್ 1 ಚಿನ್ನದ ಪದಕ 3 ಬೆಳ್ಳಿಯ ಪದಕ 1 ಕಂಚಿನ ಪದಕ,18.ಗಿರೀಶ್ ಎಲ್.ಸಿ. 2 ಚಿನ್ನದ ಪದಕ 3 ಬೆಳ್ಳಿಯ ಪದಕ,19.ಚೇತನ್ ಕುಮಾರ್ 3 ಚಿನ್ನದ ಪದಕ 2 ಬೆಳ್ಳಿಯ ಪದಕ,20.ಅಶ್ವಿನಿ ಬೋಜೆಗೌಡ 2 ಬೆಳ್ಳ ಪದಕ, 21. ನಾಗೇಂದ್ರ 2 ಚಿನ್ನದ ಪದಕ 1 ಬೆಳ್ಳಿ ಪದಕ 1 ಕಂಚಿನ ಪದಕ, ಪಡೆದಿರುತ್ತಾರೆ ಇವರೆಲ್ಲರೂ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ, ಮುಂಬರುವ ರಾಷ್ಟ್ರೀಯ ಮಾಸ್ಟರ್ ಅಥ್ಲೇಟಿಕ್ ಕ್ರೀಡಾಕೂಟವು 2022 ರ ಮೇ ತಿಂಗಳಿನಲ್ಲಿ ಕೇರಳದಲ್ಲಿ ನಡೆಯಲಿದ್ದು ಈ ಕ್ರೀಡಾಕೂಟದಲ್ಲಿ ಎಲ್ಲಾ ವಿಜೇತರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಮಂಜುನಾಥ್,ಬಿಆರ್.ಆರಾಧ್ಯ, ರವಿ.ಟಿ.ಎಸ್,ಪ್ರಭುಶಂಕರ್, ಶ್ರೀಕಾಂತ್, ಸಾಗರ್, ರಾಜೇಶ್ವರಿ, ಮುಂತಾದವರು ಹಾಜರಿದ್ದರು.