ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಪುಟ್ಟಣ್ಣ ಕಣಗಾಲ್ ಗ್ರಾಮದಲ್ಲಿ ಭೂತಾಯಿ ರೈತ ಉತ್ಪಾದಕ ಸಂಸ್ಥೆಯ ಕಚೇರಿ ಆವರಣದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ತೆಂಗು ಬೆಳೆ ಅಭಿವೃದ್ಧಿ ತರಬೇತಿ ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಳೆದ 45 ವರ್ಷಗಳಿಂದ ಶೇಕಡಾ 80 ರಷ್ಟು ರೈತರು ತಂಬಾಕು ಬೆಳೆಯುತ್ತಿದು ಮಣ್ಣು ಸಾರಾಂಶ ಕಳೆದುಕೊಳ್ಳುತ್ತಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದ್ದು ಆದಾಯ ತರುವಂಥ ತೋಟಗಾರಿಕೆ ಬೆಳೆಗಳಿಗೆ ಹಾಗು ರೇಷ್ಮೆಗೆ ರೈತರು ಹೆಚ್ಚು ಒತ್ತು ನೀಡಬೇಕು. ಬೆಟ್ಟದಪುರ, ರಾವಂದೂರು ,ಕಸಬಾ ಹೋಬಳಿಯಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನ ತಂದು ರೈತ ಉತ್ಪಾದಕ ಸಂಸ್ಥೆಗಳನ್ನು ಹುಟ್ಟು ಹಾಕಲಾಗುವುದು ಎಂದರು. ದೇಶದಲ್ಲಿ ಜನಸಂಖ್ಯೆ ಹೆಚ್ಚಳದಿಂದ ಎಲ್ಲರಿಗೂ ಸರ್ಕಾರಿ ಉದ್ಯೋಗ ನೀಡಲು ಕಷ್ಟವಾಗುತ್ತದೆ ಯುವಕರು ಸ್ವ – ಉದ್ಯೋಗ ಮಾಡಿ ಸ್ವಾವಲಂಬಿಗಳಾಗಬೇಕು. ಇದೇ ಸಂದರ್ಭದಲ್ಲಿ ರೈತರಿಗೆ ಉಚಿತವಾಗಿ ನೀರಿನಲ್ಲಿ ಕರಗುವ ರಸಗೊಬ್ಬರ ವಿತರಣೆ ಮಾಡಿದರು.
ಮೈಸೂರು ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಕೆ. ರುದ್ರೇಶ್ ಮಾತನಾಡಿ ರೈತ ಉತ್ಪಾದಕರು ಉದ್ಯಮಿಗಳು ಆಗಬೇಕು ಎಂಬ ಉದ್ದೇಶದಿಂದ ಸರ್ಕಾರವು ಕಂಪೆನಿ ಆಕ್ಟ್ ನಲ್ಲಿ 1ಸಾವಿರ ರೈತರನ್ನೊಳಗೊಂಡ ಸಂಸ್ಥೆಗಳನ್ನು ಹುಟ್ಟು ಹಾಕುತ್ತಿದೆ. ಸರ್ಕಾರದ ವತಿಯಿಂದ ಸಂಸ್ಥೆಗೆ ಬಲವರ್ಧನೆಗೊಳ್ಳಲು ಸಹಾಯಧನ ನೀಡಲಾಗುವುದು.
ಮೈಸೂರು ತೋಟಗಾರಿಕಾ ಮಹಾವಿದ್ಯಾಲಯದ ವಿಜ್ಞಾನಿ ಡಾಕ್ಟರ್ ಸಿದ್ಧಪ್ಪ ಮಾತನಾಡಿ, ಅಡಿಕೆ ಹಾಗೂ ತೆಂಗು ಬೆಳೆಗಳಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ ಮಾಡಿದಾಗ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ .ರೈತರು ಹೆಚ್ಚು ಇಳುವರಿ ಪಡೆಯಬೇಕಾದರೆ ತೆಂಗಿನ ಗಿಡಗಳನ್ನು ಖರೀದಿ ಮಾಡುವಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗುರುತು ಮಾಡಿದ ಸಂಸ್ಥೆಗಳಲ್ಲಿ ತೆಂಗಿನ ಗಿಡಗಳನ್ನು ಖರೀದಿ ಮಾಡಬೇಕು. ಗ್ರಾಮಾಂತರ ಪ್ರದೇಶದ ಹಳ್ಳಿಗಳಲ್ಲಿ ಖಾಸಗಿ ವಾಹನಗಳಲ್ಲಿ ತಂದಂಥ ತೆಂಗಿನ ಗಿಡಗಳನ್ನು ಖರೀದಿ ಮಾಡಿ ಮೋಸ ಹೋಗಬೇಡಿ ಅದಕ್ಕೆ ಸರಿಯಾದ ರೀತಿಯಲ್ಲಿ ಪರಾಗಸ್ಪರ್ಶ ಮಾಡಿರುವುದಿಲ್ಲ ಎಂದು ತಿಳಿಸಿದರು.
ಪಿರಿಯಾಪಟ್ಟಣ ಸಹಾಯಕ ಕೃಷಿ ನಿರ್ದೇಶಕ ವೈ .ಪ್ರಸಾದ್ ಮಾತನಾಡಿ, ರೈತರು ಬೆಳೆದ ಹಣ್ಣು ತರಕಾರಿಗಳನ್ನು ಒಟ್ಟಿಗೆ ಮಾರಾಟ ಮಾಡಲು ಉತ್ತಮ ರೀತಿಯಲ್ಲಿ ಪ್ಯಾಕೆಟ್ ಮಾಡಿ ಮೌಲ್ಯವರ್ಧನೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ತೋಟಗಾರಿಕೆ ಉಪ ನಿರ್ದೇಶಕ ಕೆ. ರುದ್ರೇಶ್ . ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಭಾರತಿ. ತಾಂತ್ರಿಕ ಅಧಿಕಾರಿ ಪ್ರಸಾದ್ ,ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಶಂಕರಲಿಂಗಪ್ಪ , ಚೈತ್ರ ,ಶ್ರೀಧರ್ ,ಟಿ.ಎಸ್ ,ಕಣಗಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಮಾರ್ ಶಟ್ಟಿ ,ಸಹಾಯಕ ಕೃಷಿ ನಿರ್ದೇಶಕ ವೈ ಪ್ರಸಾದ್, ಮಾಂಡಲೇಜ್ ಇಂಡಿಯಾ ಫುಡ್ ಲಿಮಿಟೆಡ್ ವ್ಯವಸ್ಥಾಪಕ ಜಿ. ಶಿವಕುಮಾರ್ ,ಕಣಗಾಲ್ ಭೂತಾಯಿ ರೈತ ಕಂಪೆನಿ ಲಿಮಿಟೆಡ್ ನ ಅಧ್ಯಕ್ಷ ಅಡಗೂರು ಸುಪ್ರೀತ್ ,ಕಾರ್ಯದರ್ಶಿ ವೆಂಕಟೇಶ್ ,ನಿರ್ದೇಶಕರಾದ ಶ್ರೀ ದೊರೆ ,ಆಂಜನೇಯ , ಮಹದೇವ್ , ನಂಜುಂಡಸ್ವಾಮಿ, ಪುಟ್ಟರಾಜು, ಅರುಣ್ ಅರಸ್, ರಾಮೇಗೌಡ , ಕೊಣಸೂರು ಆನಂದ್, ಸುಬ್ರಹ್ಮಣ್ಯ, ಮಂಜುನಾಥ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಹದೇವ್, ಹನುಮಂತ ಮುಖಂಡರಾದ ಮೋಹನ್ ರಾಜ್ ,ಕೃಷ್ಣಮೂರ್ತಿ ರೈತರು ಹಾಜರಿದ್ದರು.