ಕನ್ನಡ ಬೆಳ್ಳಿತೆರೆ ಕ್ಲ್ಯಾಪ್-೭ ದ್ರೋಣಾಚಾರ್ಯ ಜಿ.ವಿ.ಅಯ್ಯರ್
ಗಣಪತಿ ವೆಂಕಟರಮಣ ಅಯ್ಯರ್ ಹಳೇ ಮೈಸೂರು ರಾಜ್ಯದ ದಕ್ಷಿಣಕಾಶಿ ನಂಜನಗೂಡಲ್ಲಿ ಸಂಪ್ರದಾಯಸ್ಥ ವಿಪ್ರ ಕುಟುಂಬದಲ್ಲಿ ದಿ.೩.೯.೧೯೧೭ರಂದು ಜನಿಸಿದರು. ಶಾಲೆಯ ವಿದ್ಯಾಭ್ಯಾಸದಲ್ಲಿ, ಗುರುಕುಲದ ಸಂಸ್ಕೃತ-ಸಂಗೀತದಲ್ಲಿ ಜಾಣನಾಗಿದ್ದ ಜಿ.ವಿ.ಅಯ್ಯರ್ ಬಾಲ್ಯದಲ್ಲೆ ಸಂಗೀತ, ಸಂಸ್ಕೃತಭಾಷೆಯ ಪಾಂಡಿತ್ಯ ಗಳಿಸಿದ್ದರು. ಇವರು, ನಾಟಕ-ಸಿನಿಮ ರಂಗಕ್ಕೆ ಆಗಮಿಸಿದ್ದೆ ಅನಿರೀಕ್ಷಿತ, ಆಕಸ್ಮಿಕ?…
