Author: mahesh.mys

ಕರ್ನಾಟಕದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾಧನೆ”

ಮೈಸೂರು: ಇತ್ತೀಚಿಗೆ ಮಲೇಷ್ಯಾದ ಜೋಹ ಬಾರುವಿನಲ್ಲಿ (Johor Bahru) ನಡೆದ ಸ್ಟೂಡೆಂಟ್ ಒಲಿಂಪಿಕ್ ಇಂಟರ್ನ್ಯಾಷನಲ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮೈಸೂರಿನ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ವಿದ್ಯಾನಂದ ಕಶ್ಯಪ್ ಶಟಲ್ ಬ್ಯಾಡ್ಮಿಂಟನ್ನಲ್ಲಿ ಗಮನಾರ್ಹ ಗೆಲವು ಸಾಧಿಸಿ, ಚಿನ್ನದ ಪದಕ ಗೆದ್ದಿದ್ದಾರೆ,…

ರಾಜಸ್ಥಾನದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು , ಮೋದಿಯವರು ಮೂರನೇ ಅವಧಿಗೆ ಫ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅಮಿತ ಶಾ

ಜನಸಮೂಹದ ನಾಡಿಮಿಡಿತವನ್ನು ಅರಿಯುವ ತಮ್ಮ ಅಸಾಮಾನ್ಯ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವ ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾರವರು, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಜನರು ಗೆಹ್ಲೋಟ್‌ರ “3D” ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇತ್ತೀಚೆಗೆ ರಾಜಸ್ಥಾನದಲ್ಲಿ ಬೃಹತ್…

ಮಹಾಪುರಾಣ, ಉಪ ಪುರಾಣ ಎಂಬಂತೆ ಅನೇಕಾರು ಪುರಾಣಗಳು ನಮ್ಮಲ್ಲಿ ಇವೆ: ಡಾ.ಬಿಬೇಕ್ ಡೆಬ್ರಾಯ್ ಮೈಸೂರು ಸಾಹಿತ್ಯ ಸಂಭ್ರಮಕ್ಕೆ ಚಾಲನೆ

ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಮೈಸೂರು ಲಿಟರರಿ ಫೋರಂ ಚಾರಿಟೆಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ನಿಂದ ಆಯೋಜಿಸಿಲಾಗಿದ್ದ ಮೈಸೂರು ಸಾಹಿತ್ಯ ಸಂಭ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್, ಸಾಹಿತಿ ಡಾ.ಚಂದ್ರಶೇಖರ ಕಂಬಾರ,…

20 ಲಕ್ಷ ಕೋಟಿ ಹಗರಣದಲ್ಲಿ ಭಾಗಿಯಾಗಿರುವ 20 ಪಕ್ಷಗಳ ಬೆಂಬಲದೊಂದಿಗೆ ಪ್ರಧಾನಿಯಾಗುವ ನಿತೀಶ್ ಕುಮಾರ್ ಕನಸು ಎಂದಿಗೂ ನನಸಾಗುವುದಿಲ್ಲ : ಅಮಿತ್ ಶಾ

ಬಿಹಾರದ ಕಾರ್ಯಕ್ರಮವೊಂದರಲ್ಲಿ ಗೃಹ ಸಚಿವ ಅಮಿತ್ ಶಾ, ಅನುಕೂಲಕ್ಕೆ ತಕ್ಕಂತೆ ನಿಷ್ಠೆಯನ್ನು ಬದಲಾಯಿಸಿಕೊಳ್ಳುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು, “ಪಲ್ಟು ಬಾಬು,” ಎಂದು ಕರೆದು, 20 ಲಕ್ಷ ಕೋಟಿ ರೂಪಾಯಿಗಳ ಹಗರಣಗಳಿಗೆ ಕಾರಣವಾಗಿರುವ 20 ಭ್ರಷ್ಟ ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ…

ಮೈಸೂರಿನಲ್ಲಿ ನೂತನ ಶಾಖೆ ದಿ. ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ- ಆಪರೇಟಿವ್ ಸೊಸೈಟಿ

ಮೈಸೂರಿನ ಜಯನಗರದಲ್ಲಿ ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ- ಆಪರೇಟಿವ್ ಸೊಸೈಟಿ ಮೈಸೂರು ಶಾಖೆಯನ್ನು ಶಾಸಕ ಜಿ.ಟಿ.ದೇವೆಗೌಡ ಉದ್ಘಾಸಿದರು. ಎಂ.ಡಿ..ಎ ಮಾಜಿ ಅಧ್ಯಕ್ಷ.ಹೆಚ್.ವಿ.ರಾಜೀವ್,ಪ್ರಸನ್ನ, ಕುಮಾರ್, ಬಿ.ಎಚ್.ಕೃಷ್ಣ ರೆಡ್ಡಿ,ಇದ್ದರು

ಪ್ರತಿಪಕ್ಷಗಳ ಸಭೆಯ ಕುರಿತು ವ್ಯಂಗ್ಯವಾಡುತ್ತಾ, ಮೋದಿಯವರು 300ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದ ಅಮಿತ್ ಶಾ

ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯು ಕೇವಲ ಒಂದು “ಫೋಟೋ ಸೆಷನ್” ಎಂದ ಶಾ, ಅವರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, 300 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ನರೇಂದ್ರ ಮೋದಿಯವರ ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗುವುದು ಪೂರ್ವನಿರ್ಧರಿತವಾಗಿದೆ ಎಂದು ಹೇಳಿದರು. “ಇಂದು, ಪಾಟ್ನಾದಲ್ಲಿ…

ಮಹಮ್ಮದ್ ಬಿನ್ ತುಘಲಕ್’ನ ಎಡವಟ್ಟಿನ ಯೋಜನೆಗಳು ಮತ್ತೆ ಬಂದಂತಿವೆ.

ಎ.ವಿ ಸ್ಮಿತ್ ಚರಿತ್ರೆಕಾರನ ಮಾತು; “ಆತ ಪರಸ್ಪರ ವಿರುದ್ಧ ಗುಣಗಳ ಆಶ್ಚರ್ಯಕರ ಸಮಾವೇಶ”. ಈ ಹೇಳಿಕೆ ಮಹಮ್ಮದ್ ಬಿನ್ ತುಘಲಕ್’ನ ವ್ಯಕ್ತಿತ್ವ ಕುರಿತದ್ದು. ಹೌದು ಆತ ಘನ ವಿದ್ವಾಂಸ, ಧಾರ್ಮಿಕ ನೀತಿಗಳ ಉದಾರಿ. ಇನ್ನೊಂದೆಡೆ ‘ಈಶ್ವರಿ ಪ್ರಸಾದ್’ ತಿಳಿಸಿದಂತೆ; “ಮಧ್ಯಯುಗದಲ್ಲಿ ಕಿರೀಟ…

ನಾಡಪ್ರಭು ಕೆಂಪೇಗೌಡ ದೊರೆಜೂನ್ ೨೭:ಜಯಂತ್ಯುತ್ಸವ ಆಚರಣೆ ನಿಮಿತ್ತ ಲೇಖನ

೧೬ನೇ ಶತಮಾನದಲ್ಲಿ ದಕ್ಷಿಣ ಭಾರತದ ಚಕ್ರಾಧಿಪತಿ ಕನ್ನಡ ಸಾಮ್ರಾಜ್ಯ ರಮಾರಮಣ ವಿಜಯನಗರ ಮಹಾರಾಜ ಶ್ರೀಕೃಷ್ಣದೇವರಾಯರ ಭವಿತವ್ಯ ಆಡಳಿತ ವಿಜೃಂಭಿಸಿತ್ತು. ನಾಡು-ನುಡಿ ನೆಲ-ಜಲ ಜನ-ಮನ ಕವಿ-ಕಲಾವಿದ ಮಹಿಳೆ-ಮಕ್ಕಳು ಬೆಳೆ-ಬಂಗಾರ ಆದಿಯಾಗಿ ಇಡೀ ಸಾಮ್ರಾಜ್ಯವು ಶಾಂತಿ ನೆಮ್ಮದಿ ಸಮೃದ್ಧಿ ಮುಂತಾದವುಗಳಿಂದ ತುಂಬಿತುಳುಕಿತ್ತು. ದೇಶ-ವಿದೇಶದ ಪ್ರವಾಸಿಗರು…

ಗರ್ಭಾಶಯದ ಕ್ಯಾನ್ಸರ್ ಹೊಂದಿದ್ದ ಮಹಿಳೆಗೆ ಯಶಸ್ವಿ ಚಿಕಿತ್ಸೆ

ಮೈಸೂರು : ಮಹಿಳೆಯರ ಉದರದರ್ಶಕ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಪ್ರಸೂತಿ ಹಾಗೂ ಸ್ತ್ರೀರೋಗ ಕ್ಷೇತ್ರದ ಹಿರಿಯ ಸಲಹಾತಜ್ಞರಾದ ಡಾ. ಮಧುರ ಫಾಟಕ್ ಅವರ ನೇತೃತ್ವದ ತಂಡವು ಮೈಸೂರಿನ ಮದರ್‌ಹುಡ್ ಹಾಸ್ಪಿಟಲ್‌ನ ಹಿರಿಯ ಕ್ಯಾನ್ಸರ್ ಶಸ್ತ್ರಕ್ರಿಯಾ ಸಲಹಾ ತಜ್ಞರಾದ ಡಾ. ಜಯಕಾರ್ತಿಕ್ ವೈ.…

ಕನ್ನಡ ವಿಶ್ವಕೋಶ ಮಾನವ ಡಾ. ಹಾ.ತಿ ಕೃಷ್ಣೇಗೌಡರು” – ಸಿಪಿಕೆ.

*- ಚಿದ್ರೂಪ ಅಂತಃಕರಣ* “ರಾಷ್ಟ್ರಕವಿ ಕುವೆಂಪು ಅವರು ಸಾರಿದ ವಿಶ್ವಮಾನವ, ನನ್ನ ವಿದ್ಯಾರ್ಥಿ ಮತ್ತು ಸಹೋದ್ಯೋಗಿ ಮಿತ್ರರಾದ ಹಾ.ತಿ ಕೃಷ್ಣೇಗೌಡರು ಹೌದಲ್ಲವೋ ಗೊತ್ತಿಲ್ಲ ಆದರೆ ಖಂಡಿತವಾಗಿ ಅವರೊಬ್ಬ ವಿಶ್ವಕೋಶಮಾನವರಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದೊರೆತದ್ದು ಸ್ಮರಣೀಯ ದಾಖಲೆ‌ ಹಾಗೂ ಕನ್ನಡಿಗರಾದ ನಮ್ಮೆಲ್ಲರ…

ಆಧುನಿಕವಾಗಲಿರುವ ಅಗ್ನಿಶಾಮಕ ಸೇವೆ , ನಗರಗಳು ಪ್ರವಾಹ ಸಮಸ್ಯೆಯಿಂದ ಮುಕ್ತವಾಗಲಿವೆ, 8000 ಕೋಟಿ ಮೌಲ್ಯದ 3 ಯೋಜನೆಗಳನ್ನು ಘೋಷಿಸಿದ ಅಮಿತ್ ಶಾ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಂಗಳವಾರ ದೇಶದಲ್ಲಿ ವಿಪತ್ತು ನಿರ್ವಹಣೆಯನ್ನು ಬಲಪಡಿಸಲು ರೂ 8000 ಕೋಟಿ ಮೌಲ್ಯದ ಮೂರು ಪ್ರಮುಖ ಯೋಜನೆಗಳನ್ನು ಘೋಷಿಸಿದರು, ಅವುಗಳೆಂದರೆ – (1) ರಾಜ್ಯಗಳಲ್ಲಿ ಅಗ್ನಿಶಾಮಕ ಸೇವೆಯನ್ನು ವಿಸ್ತರಿಸಲು ಮತ್ತು ಆಧುನೀಕರಿಸಲು…

ವಸುಂಧರಾದೇವಿ

ದಿನಾಂಕ ೧೬ನೇ ಆಗಸ್ಟ್ ೧೯೩೯ರಂದು ಬ್ರಿಟಿಷ್ ಇಂಡಿಯಾದ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಇಂದಿನ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕಾರವಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಹೆಣ್ಣು ಮಗುವಿನ ಹೆಸರು ವಸುಂಧರಾದೇವಿ. ಇವರ ತಂದೆ ಬಿಸಿನೆಸ್‌ಮನ್ ತಾಯಿ ಗೃಹಿಣಿ. ವ್ಯಾಪಾರದಲ್ಲಿ ಬಹಳ ನಷ್ಟ…

ಮೋದಿಯವರು 2024ರಲ್ಲಿ ಭಾರಿ ಬಹುಮತದೊಂದಿಗೆ, ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ: ಅಮಿತ್ ಶಾ

ಈ ಬಾರಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದು, ಮೋದಿಯವರು ಮೂರನೇ ಅವಧಿಗೆ ಖಂಡಿತ ಪ್ರಧಾನಿಯಾಗುತ್ತಾರೆ: ಶಾ ದಾರ್ಶನಿಕರು ವರ್ತಮಾನವನ್ನು ಭವಿಷ್ಯದ ತಯಾರಿಯಲ್ಲಿ ಕಳೆಯುತ್ತಾರೆ. ಬಿಜೆಪಿಯ ಪ್ರಮುಖ ಚುನಾವಣಾ ಪ್ರಚಾರಕ ಅಮಿತ್ ಶಾ ಅವರು ನಿಜ ದಾರ್ಶನಿಕರಂತೆ, ಸಾರ್ವತ್ರಿಕ ಚುನಾವಣೆಗೆ ಸುಮಾರು…

ನಾಲ್ಕು ತಲೆಮಾರಿನ ಕಾಂಗ್ರೆಸ್ ಆಡಳಿತಕ್ಕಿಂತ, ಮೋದಿಯವರ ಒಂಬತ್ತು ವರ್ಷಗಳ ಆಡಳಿತ ಬಡವರಿಗೆ ಹೆಚ್ಚಿನ ಒಳಿತನ್ನು ಮಾಡಿದೆ: ಅಮಿತ್ ಶಾ

ಕೇಂದ್ರದ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಬಡತನವನ್ನು ನಿವಾರಿಸುವಲ್ಲಿ ವಿಫಲವಾಗಿವೆ ಎಂದು ಕಟುವಾಗಿ ವಾಗ್ದಾಳಿ ನಡೆಸಿದ ಗೃಹ ಸಚಿವ ಅಮಿತ್ ಶಾ, ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಬಡವರಿಗೆ ಹಿಂದಿನ ನಾಲ್ಕು ತಲೆಮಾರಿನ ಕಾಂಗ್ರೆಸ್ ಆಡಳಿತಕ್ಕಿಂತ ಹೆಚ್ಚಿನ…

ಮೆಂಥೋಪ್ಲಸ್ ಡಬ್ಬಿ ನುಂಗಿ ಉಸಿರುಗಟ್ಟಿ ಮಗು ಸಾವು

ಬಳ್ಳಾರಿ ಜೂ 10 : ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ನಿನ್ನೆ ಮಗುವೊಂದು ಮೆಂಥೋಪ್ಲಸ್ ಡಬ್ಬಿ ನುಂಗಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ನಡೆದಿದೆ. ಕಂಪ್ಲಿ ಪಟ್ಟಣದ 5ನೇ ವಾರ್ಡ್ ಇಂದಿರಾನಗರದ ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿಗೆ ವಿವಾಹವಾಗಿ 10 ವರ್ಷಗಳ ನಂತರ…