ಮೈಸೂರು ರಂಗಾಯಣದ ಸಾಧನೆ ಅಪಾರ: ಎಸ್.ಟಿ.ಸೋಮಶೇಖರ್
ರಂಗಭೂಮಿ ಸೇರಿದಂತೆ ಎಲ್ಲ ತರಹದ ಕಲೆಗಳಿಗೆ ಸರ್ಕಾರಗಳು ಪ್ರೋತ್ಸಾಹ ನೀಡುತ್ತಲೇ ಬಂದಿವೆ. ಅನೇಕ ಪ್ರಾಧಿಕಾರಗಳನ್ನು ರಚಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. 1989ರಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಂಗಾಯಣವನ್ನು ಅಸ್ತಿತ್ವಕ್ಕೆ ತರಲಾಯಿತು. ಇದು ಖ್ಯಾತ ರಂಗತಜ್ಞರು, ಪದ್ಮಶ್ರೀ ಪುರಸ್ಕೃತರೂ ಆಗಿರುವ ದಿ. ಬಿ.ವಿ.ಕಾರಂತರ…
