ಮೊದಲ ವರ್ಷ ಪೂರೈಸಿ ಮಹತ್ತರ ಮೈಲಿಗಲ್ಲುಗಳನ್ನು ಸಾಧಿಸಿದ ಐಇಎಕ್ಸ್‍ಗ್ರೀನ್ ಮಾರ್ಕೆಟ್
ಮೊದಲ ವರ್ಷದಲ್ಲಿ ಗ್ರೀನ್‍ಟರ್ಮ್-ಅಹೆಡ್ ಮಾರ್ಕೆಟ್ ಸುಮಾರು 100 ಭಾಗೀದಾರ ಬೇಸ್‍ದೊಂದಿಗೆ ಪ್ರತಿ ಯೂನಿಟ್‍ಗೆ ರೂ. 3.75 ಸರಾಸರಿ ದರದಲ್ಲಿ 2744 mU ವಾಲ್ಯೂಮ್ ವ್ಯಾಪಾರ ಮಾಡಿದೆ.
ಈ ಸಂದರ್ಭದಲ್ಲಿ, ವಿನಿಮಯವುತನ್ನ ಮೊದಲ ವರ್ಷದಲ್ಲಿ ಸೌರಶಕ್ತಿ ವರ್ಗದಲ್ಲಿ1267 Mu ವಾಲ್ಯೂಮ್ ಒಳಗೊಂಡ ನವೀಕರಿಸಬಹುದಾದ ಶಕ್ತಿಯನ್ನೂ, ಸೌರೇತರ ವರ್ಗದಲ್ಲಿ 1477 mu ಸೇರಿ ಒಟ್ಟಾರೆಯಾಗಿ, 2744muವಾಲ್ಯೂಮ್‍ಗಳ ವಹಿವಾಟು ನಡೆಸಿದೆ ಎಂದು ಘೋಷಿಸಲು ಹರ್ಷಿಸುತ್ತದೆ. ಮಾರುಕಟ್ಟೆಯು ಮೊದಲ ವರ್ಷದಲ್ಲಿ, ಪ್ರತಿ ಯೂನಿಟ್‍ಗೆ ರೂ.3.48 ಸರಾಸರಿ ಸೌರದರ ಮತ್ತು ಪ್ರತಿ ಯೂನಿಟ್‍ಗೆರೂ. 4.06 ಸರಾಸರಿ ಸೌರೇತರ ದರದೊಂದಿಗೆ ರೂ.3.75 ಸರಾಸರಿ ದರ ಶೋಧಿಸಿತ್ತು.
ಗ್ರೀನ್ ಮಾರ್ಕೆಟ್(ಹಸಿರು ಮಾರುಕಟ್ಟೆ) ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡಿದ್ದು ಅಲ್ಪಾವಧಿಯಲ್ಲೇ ಹತ್ತಿರ ಹತ್ತಿರ 100 ಪ್ರಬಲವಾದ ಭಾಗೀದಾರ ಬೇಸ್ ತಲುಪಿದೆ. ಚೌಧರಿ ಪವರ್, ಭಿಲಂಗಾಣ ಹೈಡ್ರೋ ಪವರ್, ಆಂಪ್ಲಸ್‍ಗ್ರೀನ್, ಆದಾನಿ ಸೋಲಾರ್ ಮತ್ತು ಎಮ್‍ಆರ್‍ಎನ್ ಕೇನ್ ಪವರ್‍ನಂತಹ ನವೀಕರಿಸಬಹುದಾದ ವಿದ್ಯುತ್ ಉತ್ಪಾದಕ ಸಂಸ್ಥೆಗಳು ಒಳಗೊಂಡಂತೆ, ಕರ್ನಾಟಕ, ತೆಲಂಗಾಣ, ತಮಿಳುನಾಡು ಮತ್ತು ಹಿಮಾಚಲದಿಂದ ವಿತರಣಾ ಸಂಸ್ಥೆಗಳು ಮಾರಾಟ ಬದಿಯಲ್ಲಿರುವ ಪ್ರಮುಖ ಭಾಗೀದಾರರಾಗಿದ್ದಾರೆ. ಮತ್ತೊಂದೆಡೆ, ವೇದಾಂತ, ಸೈಲ್, ಜಿಂದಾಲ್ ಸ್ಟೀಲ್, ಟಾಟಾ ಸ್ಟೀಲ್‍ನಂತಹ ಕೈಗಾರಿಕಾ ಬಳಕೆದಾರರ ಜೊತೆಗೆ, ಸಿಇಎಸ್‍ಸಿ, ಹರಿಯಾಣ, ಡಿಎನ್‍ಹೆಚ್, ಟಾಟಾ ಪವರ್ ಕಂಪನಿ ಮತ್ತು ಡಿವಿಸಿಯಂತಹ ವಿತರಣಾ ಸಂಸ್ಥೆಗಳು ಖರೀದಿದಾರರ ಬದಿಯಲ್ಲಿರುವ ಪ್ರಮುಖ ಭಾಗೀದಾರರಾಗಿದ್ದಾರೆ.
ಮೊದಲ ವರ್ಷದಲ್ಲಿ ಪವರ್ ಕಂಪನಿ ಕರ್ನಾಟಕ ಲಿಮಿಟೆಡ್ l ಹಸಿರು ಮಾರುಕಟ್ಟೆಯಲ್ಲಿ ಅಗ್ರ ಮಾರಾಟಗಾರ ಸಂಸ್ಥೆಯಾಗಿ ಹೊರಹೊಮ್ಮಿದ್ದರೆ, ವೇದಾಂತ ಲಿಮಿಟೆಡ್ ಅಗ್ರ ಖರೀದಿದಾರ ಸಂಸ್ಥೆಯಾಗಿ ಹೊರಹೊಮ್ಮಿದೆ.
ಸೆಪ್ಟೆಂಬರ್ 1, 2020ರಂದು ವಿದ್ಯುತ್ ಹಾಗು ಹೊಸ ಹಾಗು ನವೀಕರಿಸಬಹುದಾದ ಶಕ್ತಿಯ ಸನ್ಮಾನ್ಯ ಸಚಿವರಾದ ಶ್ರೀ ಆರ್.ಕೆ. ಸಿಂಗ್ ಅವರು ಔಪಚಾರಿಕವಾಗಿ ಆರಂಭಿಸಿದ ಹಸಿರು ಮಾರುಕಟ್ಟೆಯು ಸ್ಪರ್ಧಾತ್ಮಕ ಬೆಲೆಗಳು, ಪಾರದರ್ಶಕ ಹಾಗು ಬದಲಾಯಿಸಬಹುದಾದ ಸ್ವಾಧೀನತೆ, ಹಾಗು ಖರೀದಿದಾರರಿಗೆ ಪಾವತಿ ಭದ್ರತೆಯಂತಹ ಪ್ರಬಲ ಮೌಲ್ಯ ಕೊಡುಗೆಗಳನ್ನು ಒದಗಿಸುತ್ತಿದೆ. ಹೆಚ್ಚುವರಿ ನವೀಕರಿಸಬಹುದಾದ ಶಕ್ತಿ ಇರುವ ಹಸಿರುಶಕ್ತಿ ಉತ್ಪಾದಕರು ಹಾಗು ವಿತರಣಾ ಘಟಕಗಳು ಈಗ, ತಮ್ಮ ಹೆಚ್ಚುವರಿ ಶಕ್ತಿಯನ್ನು ಇತರ ಕೊರತೆ ಇರುವ ಸಂಸ್ಥೆಗಳಿಗೆ ಮಾರಾಟ ಮಾಡಿ, ಅವುಗಳು ಒಂದು ಸಂಯೋಜಿತ ರೀತಿಯಲ್ಲಿ ತಮ್ಮ ಶಕ್ತಿ ಮತ್ತು ಆರ್‍ಪಿಒ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕೆ ಮಾರುಕಟ್ಟೆಯಲ್ಲಿ ಭಾಗವಹಿಸುತ್ತಿವೆ. ಆರ್‍ಇ ಸಂಯೋಜನಾ ಸವಾಲುಗಳನ್ನು ಪೂರೈಸುವಲ್ಲಿ ಮಾರುಕಟ್ಟೆಯು ಮಹಾನ್ ಸಮವರ್ತಿಯಾಗಿದೆ.