ಪಾದ ಚಾರಿ ರಸ್ತೆಯ ಆಕ್ರಮಿಸಿಕೊಂಡಿರವ ದ್ವಿಚಕ್ರ ವಾಹನಗಳು ಮೈಸೂರು ನಗರದ ಸಿದ್ದಪಸಿಗ್ನಲ್ (ನಂಜುಮಳಿಗೆ)ಲಕ್ಷ್ಮಿಪುರಂ ಹೊಂದಿಕೊಂಡಂತೆ ಮದ್ಯೆ ಇರುವ ಕೆನರಾ ಬ್ಯಾಂಕ್ ಗೆ ಬರುವ ಗ್ರಾಹಕರು ತಮ್ಮ ದ್ವಿಚಕ್ರ ವಾಹನ ಅಲ್ಲಿಯೇ ನಿಲ್ಲಿಸಿರವದರಿಂದ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ಪರದಾಡುವಂತಾಗಿದೆ.
ಕೆನರಾ ಬ್ಯಾಂಕ್ ಬರುವ ಗ್ರಾಹಕರು. ಬ್ಯಾಂಕ್ ಒಳಗೆ ಸ್ಥಳ ಇದ್ದರು ಅಲ್ಲಿನ ಸಿಬ್ಬಂದಿ ಗೇಟ್ ತೆರೆಯದ ಕಾರಣ ಇಲ್ಲಿನ ರಸ್ತೆ ತುಂಬಾ ಕಿರಿದಾಗಿದ್ದು ಕಿರಿದಾದ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ನಾಗರೀಕರು ನಿತ್ಯ ಎದುರಿಸುತ್ತಿರುವ ಗೋಳು ಕೇಳುವವರಿಲ್ಲ ದಿನ ನಿತ್ಯ ಸುಮಾರು 200 300 ಕ್ಕು ಹೆಚ್ಚು ಬಸ್ ಸಂಚರಿಸುವುದರಿಂದ ಜಾಗ ಆಗಿರುವದರಿಂದ ಸಣ್ಣ ಪುಟ್ಟ ಅಪಘಾತ ಗಳು ಇಲ್ಲಿ ಹಾಗಿವೆ ಎಂದು ಅಲ್ಲಿನ ಸಾರ್ವಜನಿಕರು ಹೇಳಿದ್ದಾರೆ.
ಕೆಲವರು ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಹೋಗುವುದರಿಂದ ವಾಹನ ಸಂಚಾರಕ್ಕೆ ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ. ಅಕ್ಕ ಪಕ್ಕ ಶಾಲಾ ಕಾಲೇಜು ವಿದ್ಯಾರ್ಥಿಗಳು ಇರುವದರಿಂದ ಎಚ್ ಡಿ ಕೋಟೆ ಶ್ರಿ ರಾಂಪುರ . ಮತ್ತು ಜೆ.ಪೀ. ನಗರ ಬಸ್ ಸಂಚಾರ ತುಂಬಾನೇ ಇರುವದರಿಂದ ಸಂಚರಿಸಲು ಸಾಧ್ಯವಾಗದಷ್ಟು ಟ್ರಾಫಿಕ್‌ ಜಾಮ್‌ ಆಗುತ್ತದೆ.
ಹತ್ತಿರ ದಲ್ಲಿ ಆಸ್ಪತ್ರೆ ಇರುವದರಿಂದ ತುರ್ತು ಚಿಕಿತ್ಸೆಗೆ ರೋಗಿಗಳನ್ನು ಕರೆತರಲು ಆಂಬ್ಯುಲೆನ್ಸ್‌ ವಾಹನ ಕೂಡ ಸಂಚರಿಸಲು ಬಹಳ ತಲೆ ನೋವು ಆಗಿದೆ.
ವರದಿ : ಮಹೇಶ್ ನಾಯಕ್

By admin