ಕೆಂಗಾಕಿ ಗ್ರಾಮದಲ್ಲಿ ಆತ್ಮನಿರ್ಭರತೆ ಕುರಿತ ಉಪನ್ಯಾಸ ಕಾರ್ಯಕ್ರಮ
ಚಾಮರಾಜನಗರ: ಕೇಂದ್ರಸರಕಾರ ಜಾರಿಗೆ ತಂದಿರುವ ಆತ್ಮನಿರ್ಭರ ಯೋಜನೆಯಡಿ ಸಮರ್ಥ ಹಾಗೂ ಸ್ಪರ್ಧಾತ್ಮಕ ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ೨೦ ಲಕ್ಷ ಕೋಟಿ ರೂ. ಗಳನ್ನು ನೀಡುವ ಮೂಲಕ ಆತ್ಮನಿರ್ಭರತೆ ಪರಿಕಲ್ಪನೆಯನ್ನು ಪುನರುತ್ಥಾನ ಗೊಳಿಸಿದೆ ಎಂದು ಕೇಂದ್ರ ಪರಿಹಾರ ಸಮಿತಿ ರಾಜ್ಯಾಧ್ಯಕ್ಷ ಎಂ.ರಾಮಚಂದ್ರ ತಿಳಿಸಿದರು.

ತಾಲೂಕಿನ ಹರವೆ ಹೋಬಳಿ ವ್ಯಾಪ್ತಿಯ ಕೆಂಗಾಕಿ ಗ್ರಾಮದಲ್ಲಿ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ರಂಗ ವಾಹಿನಿ ಹಾಗೂ ಚಾಮರಾಜನಗರ ಸೇವಾಭಾರತಿ ಕಾಲೇಜು ಎನ್‌ಎಸ್‌ಎಸ್ ವಿಭಾಗದ ಸಹಯೋಗದಲ್ಲಿ ನಡೆದ ‘ಯುವಕರು ಮತ್ತು ಆತ್ಮ ನಿರ್ಭರತೆ ಉಪನ್ಯಾಸ ಕಾರ್ಯಕ್ರಮವನ್ನು ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿನ ನಿರುಧ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಆತ್ಮನಿರ್ಭರ ಭಾರತ್ ಯೋಜನೆ ಜಾರಿಮಾಡಿದ್ದಾರೆ. ಹಳ್ಳಿಯ ಸುತ್ತಮುತ್ತವಿರುವ ಸ್ಥಳೀಯ ಸಂಪನ್ಮೂಲಗಳನ್ನು ಆಧಾರವಾಗಿಟ್ಟುಕೊಂಡು, ಗುಡಿಕೈಗಾರಿಕೆಗಳ ನಿರ್ಮಾಣದ ಮೂಲಕ ನೂರಾರು ಜನರಿಗೆ ಉದ್ಯೋಗ ನೀಡಿ, ಅವರನ್ನು ಸ್ವಾವಲಂಬಿಯಾಗಿಸುವುದು ಯೋಜನೆ ಉದ್ದೇಶ ಎಂದು ತಿಳಿಸಿದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿಂತಕ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಳ್ಳುತ್ತಿದ್ದ ವೈದ್ಯಕೀಯ ಕ್ಷೇತ್ರ ಬಾಹ್ಯಾಕಾಶ ತಂತ್ರಜ್ಞಾನ ಕೈಗಾರಿಕೆಗಳಲ್ಲಿ ಅಪರಿಮಿತವಾದ ಸಾಧನೆಯನ್ನು ಸಾಧಿಸಿ, ಸ್ವಾವಲಂಬಿ ಭಾರತದ ನಿರ್ಮಾಣವಾಗಿದೆ,
ಗ್ರಾಮ ಭಾರತವನ್ನು ಸಶಕ್ತಿ ಗೊಳಿಸುವ ಮೂಲಕ ಜನರಲ್ಲಿ ಆತ್ಮವಿಶ್ವಾಸ, ಪರಿಶ್ರಮದ ಶ್ರೇ?ತೆ, ರಾಷ್ಟ್ರನಿ?, ಗ್ರಂಥಗಳ ಪುನರ್ ಅಭಿವ್ಯಕ್ತಿ, ಸಂಶೋಧನೆ ಹಾಗೂ ಹೊಸ ಜ್ಞಾನದ ಸೃಷ್ಟಿಯನ್ನು ಮಾಡುವ ಮೂಲಕ ಯುವಕರು ಸ್ವಾವಲಂಬನೆಯ ಹಾದಿಯಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು
ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಎಚ್.ಎಸ್. ಗಂಗಾಧರ್ ಮಾತನಾಡಿ, ಸರಳ ಅರ್ಥ ಸ್ವಾವಲಂಬಿ ಭಾರತ. ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಎಲ್ಲಾ ಕ್ಷೇತ್ರಗಳಲ್ಲಿ ರೂಪಿಸಿ ಜಗತ್ತಿನ ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುವ ಎಲ್ಲಾ ಅವಕಾಶಗಳು ಆತ್ಮನಿರ್ಭರತೆಯಲ್ಲಿದೆ, ತಂತ್ರಜ್ಞಾನ, ಕೃಷಿ, ಕೈಗಾರಿಕೆ ಆಹಾರ ,ಮಿಲಿಟರಿ ಶಕ್ತಿ ,ಆಡಳಿತ ಚುನಾವಣೆ ಶಿಕ್ಷಣ ಆರೋಗ್ಯ, ವೈದ್ಯಕೀಯ, ಬಾಹ್ಯಾಕಾಶ, ಕ್ಷೇತ್ರಗಳಲ್ಲಿಯೂ ಸ್ವಾವಲಂಬನೆಯ ಚಿಂತನೆ ಮಾಡುವ ಸಕಾಲ ಇಂದಿನ ಯುವಶಕ್ತಿಯಲ್ಲಿ ರೂಪುಗೊಳ್ಳಬೇಕಿದೆ ಎಂದರು.
ರಂಗ ವಾಹಿನಿ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ ಮಾತನಾಡಿ, ಆತ್ಮ ನಿರ್ಭರತೆ ಭಾರತದ ಉನ್ನತಿಗಾಗಿ, ಆರ್ಥಿಕಾಭಿವೃದ್ಧಿಯ ದೃಷ್ಟಿಕೋನದ ಹಿನ್ನೆಲೆಯಲ್ಲಿ ರೂಪಿತವಾದ ಯೋಜನೆಯಾಗಿದೆ ಎಂದರು.
ಇದೇವೇಳೆ ಸಿ.ಎಂ. ನರಸಿಂಹಮೂರ್ತಿ ಜನಪದ ಹಾಡುಗಳನ್ನು ಹಾಡುವ ಮೂಲಕ ಜನರ ಗಮನಸೆಳೆದರು.
ಸಮಾರಂಭದ ಅಧ್ಯಕ್ಷತೆಯನ್ನು ಸೇವಾಭಾರತಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಿರ್ಮಲಾ ವಹಿಸಿದ್ದರು.
ಎನ್‌ಎಸ್‌ಎಸ್ ಶಿಬಿರಾಧಿಕಾರಿ ರವಿಕುಮಾರ್ ವಿದ್ಯಾರ್ಥಿ ಮುಖಂಡರಾದ ಶ್ರೀನಿಧಿ ಮತ್ತು ಶ್ರೀಶ ಹಾಜರಿದ್ದರು.
