ಲವ್ ಮಾಕ್ಟೇಲ್ ೨ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮ ಶರಟಾನ್ ಹೋಟೆಲ್ ನಲ್ಲಿ ನಡೆಯಿತು.   ಕ್ರೇಜಿಸ್ಟಾರ್  ರವಿಚಂದ್ರನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. 

ಡಾರ್ಲಿಂಗ್ ಕೃಷ್ಣ ಹಾಗೂ ನಾಯಕಿಯರು ಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಂಡರು. ನಾಯಕಿ ರೇಚಲ್ ಡೇವಿಡ್ ಮಾತನಾಡಿ ಮಲಯಾಳಂ ಹುಡುಗಿಯನ್ನು ಹೇಗೆ ಸ್ವೀಕರಿಸ್ತಾರೋ ಅನ್ನೋ ಭಯ ಇದೆ. ಚಿತ್ರದಲ್ಲಿ ಸಿಹಿ ಎಂಬ ಪಾತ್ರ ಮಾಡಿದ್ದೇನೆ. ಹುಡುಗಿಯ‌ ದೃಷ್ಟಿಕೋನದಲ್ಲಿ ನಡೆವ ಕಥೆ ನನ್ನ ಭಾಗದಲ್ಲಿದೆ ಎಂದರು. ಮತ್ತೊಬ್ಬ ನಟಿ ಅಮೃತಾ ಅಯ್ಯಂಗಾರ್ ಮಾತನಾಡುತ್ತ ನನ್ನ ಸಿನಿಮಾ ಬದುಕಿಗೆ ತಿರುವು ಕೊಟ್ಟ ಪಾತ್ರ. ನೆಗೆಟಿವ್ ಇಮೇಜ್ ಬರುವ ಸಾಧ್ಯತೆ ಇತ್ತು. ಸೂಕ್ಷ್ಮ ವಾಗಿ‌ ನಿಭಾಯಿಸಿದ್ದಾರೆ ಎಂದರು.


‌ ಚಿತ್ರದ ನಿರ್ಮಾಪಕಿ ಮಿಲನಾ ನಾಗರಾಜ್ ಮಾತನಾಡಿ ಲವ್ ಮಾಕ್ ಟೇಲ್ ಸಿನಿಮಾ ಬಂದಾಗ ರವಿ ಸಾರ್ ಕಡೆಯಿಂದ ಕಾಲ್ ಬಂದಿತ್ತು. ನಾನು‌ ಫ್ರೀಸ್ ಆಗಿದ್ದೆ. ಅವ್ರು ನೀನು ಕೃಷ್ಣನ‌ ಲವ್ವರಾ ಅಂತ ಕೇಳಿ ಸಿನಿಮಾ ಬಗ್ಗೆ ಉತ್ತಮ‌ ಮಾತಾಡಿದ್ರು. ಟ್ರೈಲರ್‌೩ ಮಿಲಿಯನ್ ದಾಟಿದೆ, ಅಲ್ಲದೆ ಪ್ರೀಮಿಯರ್ ಷೋ ಟಿಕೆಟ್ ಪೂರ್ತಿ ಸೋಲ್ಡ್ ಔಟ್ ಆಗಿದ್ದು ಖುಷಿಯಾಗಿದೆ ಎಂದರು..


ನಾಯಕ, ನಿರ್ದೇಶಕ ಕೃಷ್ಣ ಮಾತನಾಡಿ, ಮಿಲನಾಗೋಸ್ಕರ ಶುರು ಮಾಡಿದ್ದ‌‌ ಚಿತ್ರ. ಮೇಕಪ್ ಮ್ಯಾನ್, ಫೈಟ್‌ಮಾಸ್ಟರ್  ಇರಲಿಲ್ಲ. ದಿನಾ 25 ಸಾವಿರದಲ್ಲಿ ಶೂಟಿಂಗ್ ಮಾಡ್ತಿದ್ದೆ. ಕೊನೆಗೂ ಸಕ್ಸಸ್ ಅಂತ ಸಿಕ್ತು. ಮಲ್ಟಿಪ್ಲೆಕ್ಸ್ ಹೌಸ್ ಫುಲ್ ಆದಾಗ ನನ್ನ ಶ್ರಮಕ್ಕೆ ದೇವರು ಫಲ‌ ಕೊಟ್ಟಿದ್ದ. ಎಂದು ನಡೆ್ಉ ಬಂದ ಹಾದಿಯನ್ನು ನೆನೆದರು. ನಟ ವಿಚಂದ್ರನ್, ಮಾತನಾಡಿ. ಲವರ್, ತನ್ನ ಲವರ್ ಗೋಸ್ಕರ ಮಾಡಿದ ಸಿನಿಮಾವಿದು. ನಿಧಿ ಎನ್ನುವ ಹೆಸರು ‌ ದೊಡ್ಡ ನಿಧಿ ಕೊಟ್ಡಿದೆ.ಲವ್ ನಲ್ಲಿ ಮತ್ತಿದೆ. ಅದು‌ ಲವ್ ಮಾಕ್ ಟೆಲ್ ನಲ್ಲಿದೆ. ಪ್ರೇಮಲೋಕ ಬಂದಾಗ ನಾನೂ ಸ್ಟ್ರಗಲ್ ಮಾಡಿದ್ದೆ. ಸಿನಿಮಾ ನೂರುದಿನ ಆದಮೇಲೆ ಸಕ್ಸಸ್ ಕಂಡೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಭಿಲಾಷ್ , ಖುಷಿ, ರಚನಾ ಇಂದರ್, ರವಿ ಸೀತಾರಾಮನ್,ಸುಷ್ಮಾ, ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ ಹಾಗೂ ಚಿತ್ರತಂಡ ಹಾಜರಿತ್ತು.