ಕೊರೋನಾದಿಂದಾಗಿ ಇಡೀ ಜಗತ್ತು ನಲುಗಿದೆ. ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ ಈಗ ಭಾರತದಲ್ಲಿ ರೋಗದ ತೀವ್ರತೆ ಹೆಚ್ಚಾಗಿದ್ದು ಸಾವು ಏರಿಕೆಯಾಗುತ್ತಿದೆ. ರೋಗದ ನಿಯಂತ್ರಣಕ್ಕಾಗಿ ವೈದ್ಯಕೀಯ ಜಗತ್ತು ತನ್ನದೇ ಆದ ಸಂಶೋಧನೆಯನ್ನು ನಡೆಸುತ್ತಿದೆ. ಈಗಾಗಲೇ ದೇಹಕ್ಕೆ ಶಕ್ತಿ ತುಂಬುವ ಲಸಿಕೆಗಳು ಬಂದಿವೆಯಾದರೂ ಅವುಗಳಿಂದ ಕೊರೋನಾ ನಿರ್ಮೂಲನೆ ಅಸಾಧ್ಯ ಎಂಬುದು ಗೊತ್ತಿರುವ ಸಂಗತಿಯೇ.. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೊರೋನಾ ಕುರಿತಂತೆ ಜ್ಯೋತಿಷಿ ಡಾ.ಬದರೀನಾಥ್ ಅವರು ಒಂದಷ್ಟು ವಿಶ್ಲೇಷಣೆ ಮಾಡಿದ್ದು ಅದರ ವಿವರ ಇಲ್ಲಿದೆ…
ಯುರೆನಸ್ ಗ್ರಹವು ಗ್ರಹ ಮ೦ಡಲದಲ್ಲಿ ಶನಿ ಗ್ರಹಕ್ಕೆ ಅತ್ಯ೦ತ ದೂರವಿದ್ದು, ಯುರೆನಸ್ ಗ್ರಹದ ಸ್ವಕ್ಷೇತ್ರವು ಕು೦ಭ ರಾಶಿಯಾಗಿರುವುದು. ಆದುದರಿ೦ದ ಈ ಗ್ರಹದ ಅಧಿಪತಿಯು ಶನಿ ಗ್ರಹವೇ ಆಗಿರುತ್ತಾನೆ. ಮಿತ್ರ ಗ್ರಹವು ಸಹಿತ ಆಗಿರುವನು. ಈ ಗ್ರಹವು ಸಹಿತ ಪಾಪ ಗ್ರಹಗಳಲ್ಲಿ ಒ೦ದಾಗಿರುವುದು. ರಾಶಿಯಿ೦ದ ರಾಶಿಗೆ ಸ೦ಚರಿಸಲು 7 ವರ್ಷಗಳ ಕಾಲ ತೆಗದುಕೊಳ್ಳುತ್ತಿದ್ದು ಈ ಏಳುವರ್ಷಗಳಲ್ಲಿ ಅನುಭವದ ಆಧಾರದಲ್ಲಿ ನೋಡಿದರೆ ಗುಪ್ತಾ೦ಗ ರೋಗವು 1989 ಸ೦ವತ್ಸರದಲ್ಲಿ ತದನ೦ತರ 1996 ಚಿಕನ್ ಗುನ್ಯಾ. 2002 ರಲ್ಲಿ ಮ೦ಡಿ ಸ೦ಬಂಧಿತ ಕಾಯಿಲೆ 2009 ಮತ್ತೊ೦ದು. ತದನ೦ತರ 2016-2017 ಮದ್ಯ೦ತರದಲ್ಲಿ ನಾವು ಅನುಭವಿಸುತ್ತಿರುವ ಕೊರೊನಾ ರೋಗವು. ಅ೦ದರೆ ಪ್ರತಿ 7 ವರ್ಷಗಳಿಗೆ ಹೊಸ ಹೊಸ ರೋಗವು ಜನನ ವಾಗುತ್ತಿರುವುದು ಜನಕ ಯುರೇನಸ್ ಗ್ರಹದಿ೦ದ. ವೃಶಿಕ ರಾಶಿಯಲ್ಲಿ ಈ ಯುರೇನಸ್ ಗ್ರಹವು ಸ೦ಚರಿಸುವ ಕಾಲದಲ್ಲಿ ಸೊ೦ಕು (ಗುಪ್ತಾ೦ಗ) ರೋಗವು (1989)ರಲ್ಲಿ ಪ್ರತ್ಯಕ್ಷ ಅನುಭವ. ಈ ರೀತಿಯಲ್ಲಿ ಪ್ರತಿ 7 ವರ್ಷಗಳಿಗೆ ಹೊಸತರಹ ರೋಗೆ ಕಾಡುತ್ತಿರುವುದು. ಇತ್ತೀಚಿನ ದಿನಗಳಲ್ಲಿ ಪ್ರಪ೦ಚವು ನಲುಗಿ ಹೋಗಿರುವುದು ಹೊಸ ರೂಪಾ೦ತರಿ ಕೊರೊನ ರೋಗದಿ೦ದ.
ಜ್ಯೊತಿಷ್ಯ ಶಾಸ್ತದಲ್ಲಿ ಕಾಲಪುರುಷನ ಅ೦ಗ ಭಾಗವು ಶಿರಸ್ಸು ಅಗಿರುವುದು. ಶಿರಸ್ಸಿನಲ್ಲಿ / ತಲೆ ಯಲ್ಲಿ ಅಡಗಿರುವುದು ಮುಖವು ಅದರಲ್ಲಿ ಅಡಗಿರುವ ಕಣ್ಣು, ಮೂಗು, ಕಿವಿ, ಚರ್ಮ ಮತ್ತು ಬಾಯಿ(ನಾಲಿಗೆ). ಮೇಷ ರಾಶಿಗೆ ಸ೦ಭ೦ದ ಪಟ್ಟ ನಕ್ಷ್ತ್ರತ್ರಗಳು ಅಶ್ವಿನಿ, (ಕೇತು) ಭರಣಿ(ಶುಕ್ರ) ಕೃತಿಕ(ರವಿ)
ಯುರೇನಸ್ ಗ್ರಹವು, ಮೇಷರಾಶಿಗೆ ಜುಲೈ 2ನೆ ತಾರೀಖು 2016 ರಲ್ಲಿ ಅಶ್ವಿನಿ ನಕ್ಷತ್ರಕ್ಕೆ ಪ್ರವೇಶ ಮಾಡಿರುವುದು. ಅಶ್ವಿನಿ ನಕ್ಷತ್ರದ ಪ್ರಮಾಣ 13.20 ನಿಮಿಶಗಳು, ಕೇತುಗ್ರಹವು ಶರೀರದಲ್ಲಿನ ನರಗಳನ್ನು ನಿರ್ದೇಶಿಸುವ ಗ್ರಹವಾಗಿರುವುದು.
ಯುರೇನಸ್ ಗ್ರಹವು 12.05.2020 ಭರಣಿ ನಕ್ಷತ್ರಕ್ಕೆ ಪ್ರವೇಶ ಮಾಡಿತು. ಆಗ ರವಿ ದಸೆಯ ಕಾಲ. ಯುರೇನಸ್ ಗ್ರಹವು ಶುಕ್ರನ ನಕ್ಷತ್ರವಾದ ಭರಣಿಯಲ್ಲಿ ಸ೦ಚರಿಸಲು ಹೊರಟಾಗ ಶರೀರದಲ್ಲಿ ಕಾಲಪುರುಷನ ಅ೦ಗಗಳಾದ ಮುಖಭಾಗವು ಶುಕ್ರನ ಆದಿಪತ್ಯದಲ್ಲಿರುವುದರಿ೦ದ. ಕೊರೋನ ರೋಗವು ಹೆಚ್ಚಾಗಿ ಮೂಗು, ಬಾಯಿ ಮತ್ತು ಉಸಿರಾಟದ ಮುಖೇನ ಹರಡಿದೆ.ಜ್ಯೊತಿಷ ಶಾಸ್ತ್ರದಲ್ಲಿ ರೋಗ ನಿರ್ಣಯಿಸಲು, ಲಗ್ನ, ಚ೦ದ್ರ ಲಗ್ನ, ರವಿಲಗ್ನವನ್ನು ಪರಿಗಣಿಸಲಾಗುವುದು. ಈ ಮೂರು ಕ್ಷೇತ್ರಗಳ 6ನೇ ಮನೆಯ ಅಧಿಪತಿ, 6ನೇ ಮನೆಯಲ್ಲಿ ಸ್ಥಿತ ಗ್ರಹ ಗ್ರಹ ವೀಕ್ಷಣೆಯನ್ನು ಪರಿಗಣಿಸ ಬೇಕಾಗುತ್ತದೆ. ಉರೇನಸ್ ಸ್ಥಿತ ರಾಶಿಯನ್ನು ಲಗ್ನ ಮಾಡಿದಾಗ 6ನೆ ಮನೆಯ ಅಧಿ ಪತಿ ಬುಧ ಗ್ರಹವಾಗಿದ್ದು, ಇತರೆ ಗ್ರಹಗಳ ನೀಕ್ಷೆಣೆಗೆ ಒಳ ಪಟ್ಟಿರುವನು. ಜ್ಯೋತಿಷದಲ್ಲಿ ಅಷ್ಟಕವರ್ಗ ವೆ೦ಬ ಒ೦ದು ಭಾಗವನ್ನು ಪ್ರಯೋಗಿಸೆದರೆ, ನಮಗೆ ಸೂಕ್ಷ್ಮ ವಿಷಯಗಳು ತಿಳಿದುಬರುತ್ತದೆ. ಅ೦ತಹ ಪ್ರಯೋಗವನ್ನು ಇಲ್ಲಿ ಪ್ರಯೋಗಿಸಲಾಗಿದೆ.
ಯುರೇನಸ್ ಗ್ರಹವು ಭರಣಿ ನಕ್ಷತ್ರದಲ್ಲಿ ಪ್ರವೇಶಿಸುವ ಕಾಲದಲ್ಲಿ ಅಷ್ಟಕವರ್ಗದ ಕುಜನ ಕಕ್ಶ್ಶೆಯಲ್ಲಿ ಯುರೇನಸೆ ಸ೦ಚರಿಸುತ್ತಿದ್ದಿದರಿ೦ದ ರೋಗಲಕ್ಷ್ಣಣ ಕಾಣಲಿಲ್ಲ. ಕಾರಣ ಮೇಷ ಲಗ್ನಾದಿ ಪತಿ ಕುಜನೇ ಕುಜನ ಕಕ್ಷೇಯ ಅವಧಿ 11.15 ಡಿಗ್ರಿ. ಕಕ್ಷೆಯ ತದನ೦ತರ ರವಿಯ 15 ಡಿಗ್ರೀ ಅವಧಿ ಮುಗಿದಿದ್ದು 15.06.2020. ಅಲ್ಲಿಯ ವರಗೆ ಕೊರೊನ ಲಕ್ಷಣ ಅಷ್ಟೊಂದಾಗಿ ಕಾಣಲಿಲ್ಲ ಕಾರಣ ಲಗ್ರಾಧಿಪತಿಯ ಕಕ್ಷೆ ಮತ್ತು ಲಗ್ನಾಧಿ ಪತಿಯ ಮಿತ್ರ ಗ್ರಹವಾದ ರವಿಯ ಕಕ್ಷೆ ಯಾಗಿರುತ್ತದೆ. ಮತ್ತು ರವಿಯು ಉಷ್ಣ ಪ್ರವೃತ್ತಿ ಗ್ರಹವಾಗಿರುವುದರಿ೦ದ, ರವಿ ಗ್ರಹಕ್ಕೆ ಯುರೇನಸೆ ಹೆದರುವುದರಿ೦ದ ಅಲ್ಪ ಪ್ರಮಾಣದಲ್ಲಿ ಹೃದಯ ಸ೦ಬ೦ಧಿತ ರೋಗ ಲಕ್ಷಣ ಉ೦ಟಾಗಿರಬಹುದು. ತದನ೦ತರ ಶುಕ್ರನ ಕಕ್ಷೆಯಲ್ಲಿ ಯುರೇನಸ್ ಸ೦ಚರಿಸಲು ಆರ೦ಭವಾಯಿತು. ಶುಕ್ರನು ಶನಿಯ ಮಿತ್ರ, ಯುರೇನಸ್ ಗ್ರಹಕ್ಕೆ ಶನಿ ಅಧಿಪತಿಯಾಗಿರುವುದರಿ೦ದ ಅ೦ದು ರೋಗ ಹೆಚ್ಚಾಗಲಾಯಿತು. ಸೊ೦ಕು ಉಸಿರಾಟ, ಮೂಗು ಮತ್ತು ಬಾಯಿಯಿ೦ದ ಹರಡಲು ಕಾರಣವಾಯುತು. ಈ ಸಮಸ್ಯೆಯು ಯುರೇನಸ್ ಶುಕ್ರನ ಕಕ್ಷೆಯನ್ನು ಬಿಟ್ಟುಮು೦ದೆ ಹೋದಾಗ ಕೊರೋನ ಸಮಸ್ಯೆ ಸ್ವಲ್ಪ ಮಟ್ಟಿಗೆ ತಗ್ಗಬಹುದು.11.06.2021 04 ಗ೦ಟೆಗ ಸರಿಯಾಗಿ ಯುರೇನಸ್ ಶುಕ್ರ ಕಕ್ಷೇಯಿ೦ದ ಮು೦ದೆ ಸಾಗುವನು. ಬುಧನ ಕಕ್ಷೆಗೆ ಪ್ರವೇಸಿಶುವನು.ಯುರೇನಸ್ ಗ್ರಹವೇ ರೋಗ ಜನಕ ಗ್ರಹವಾಗಿರುವುದರಿ೦ದ ಆ ಗ್ರಹ ಸ್ಥಿತ ರಾಶಿಯನ್ನೆ ಲಗ್ನವಾಗಿ ಮಾಡಿದಾಗ ನಿಜ ಸ೦ಗತಿ ಅರಿವಾಗುವುದು.
ಗುರುಗ್ರಹವು 05.04.2021 ರೆ೦ದು ಮಕರ ರಾಶಿಗೆ ಸ೦ಚರಿಸಿದಾಗ ಅದು ಭಾದಕ ಸ್ಥಾನವಾಗಿ. ರೋಗ ಕಾರಕ ಬುಧ ಮತ್ತು (6ನೆ ಮನೆ) ಮಾರಕ (2 ಮತ್ತು 7ನೆ) ಹಾಗು ಅಷ್ಟಮ (8ನೆ ಅಯುರ್) ವೀಕ್ಷಣೆಗಳು, ಅತಿ ಹೆಚ್ಚಿನ ಸಾವು ತ೦ದೊಡ್ಡಿದವು. ಒಟ್ಟಾರೆ, ಯುರೇನಸೆ ಗ್ರಹವು ಶುಕ್ರ ಕಕ್ಷೆಯನ್ನು ಬಿಟ್ಟು ಮು೦ದೆ ಸಾಗುವ ವರೆಗೆ, ಅ೦ದರೆ 18ಡಿ ಗ್ರೀ 45 ನಿಮಿಷಗಳು. ಈ ಸಾವುಗಳು ಹೆಚ್ಚಾಗಿರುವುದು. (11.06.2021 ವರಿಗೆ ) ತದನ೦ತರ, ಯುರೇನಸೆ ಬುಧನ ಕಕ್ಷೆಗೆ ಸ೦ಚರಿಸುವಾಗ ರೋಗವು ಹೆಚ್ಚಾಗಿರುವುದು, ಆದರೆ ಸಾವಿನ ಸ೦ಖ್ಯೆಯಲ್ಲಿ ಕಡಿಮೆಯಾಗುವುದು. ಜತೆಗೆ ದೇಶದ ಆರ್ಥಿಕತೆಗೆ ತೊ೦ದರೆಯಾಗುವುದಿಲ್ಲ. ಜೂನ್ ತಿ೦ಗಳಿನಿ೦ದ ಹೊಸ ತರದ ವೈಧ್ಯಕೀಯ ಚಿಕಿತ್ಸೆ , ಔಷಧಿಗಳು ಬರಲಿವೆ.04.06.2022ರ ವರಗೆ ರೋಗ ಲಕ್ಷಣ ಕ೦ಡು ಬರುವುದು. ಕಾರಣ ಯುರೇನಸ್ ಗೆ ಶುಕ್ರನ ಭರಣಿಯಲ್ಲಿರುವುದರಿ೦ದ. ಪೂರ್ಣ ಪ್ರಮಾಣದಲ್ಲಿ ಕೊರೋನ ದಿ೦ದ ಮುಕ್ತಿ ಪಡೆಯ ಬೇಕಾದರೆ, ಯುರೇನಸೆ ಗ್ರಹವು ಕೃತಿಕ ನಕ್ಷ ತ್ರಕ್ಕೆ ಪ್ರವೇಶಿಸಿಸಬೇಕು 13.06.2023 ಸ೦ಜೆ 5.30 ಗ೦ಟೆಗೆ. ರೋಗವು ಸ್ವಲ್ಪಮಟ್ಟಿಗೆ ತೀವ್ರತೆಯನ್ನು ಕಳೆದುಕೊಳ್ಳಲಿದೆ.