ಮೈಸೂರು ಆಷಾಢ ಶುಕ್ರವಾರದ ಅಂಗವಾಗಿ ನಗರದಸಿದ್ದಪ್ಪ ವೃತ್ತ ಹಾಗೂ ಸುಣ್ಣದಕೇರಿ ನಿವಾಸಿಗಳು ಹಾಗೂ ಅಂಗಡಿ ಮಾಲಿಕರು ಜೊತೆಗೂಡಿ ತಾಯಿ ಚಾಮುಂಡೇಶ್ವರಿ ಕೊನೆ ಆಷಾಡ ಶುಕ್ರವಾರ ಮೊದಲ ಬಾರಿಗೆ ಅದ್ದೂರಿಯಾಗಿ ಆಚರಿಸಿದರು.

ಇದೆ ಸಂದರ್ಭದಲ್ಲಿ ಮಾತನಾಡಿದ ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಮಹೇಶ್ ನಾಯಕ್ ಅವರು ಕಳೆದ ಬಾರಿ ನಾವು ಹಬ್ಬ ಆಚರಿಸದೆ ನಮ್ಮ ನಮ್ಮ ಮನೆಯಲ್ಲಿ ಆಚರಣೆ ಮಾಡಲಾಗುತ್ತಿದ್ದು ಈಗ ತಾಯಿ ಚಾಮುಂಡೇಶ್ವರಿ ಅಶ್ರೀವಾದದಿಂದ ಕರೋನ ಇಲ್ಲದೇ ನಾವು ಒಟ್ಟಾಗಿ ಹಬ್ಬ ಆಚರಣೆ ಮಾಡುತ್ತಿದ್ದು ಸಂತಸದ ತಂದಿದ್ದು ದೇಶದಲ್ಲಿ ಒಳ್ಳೆ ಮಳೆ ಬೆಳೆಯಾಗುತಿದ್ದು ದೇವಿಯ ಕೃಪೆ ನಮಗೆ ಇದ್ದೆ ಇರುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.ಇದೆ ಸಂದರ್ಭದಲ್ಲಿ ವಿಶೇಷ ಪೂಜೆ ಪುನಸ್ಕಾರ ನೆರವೇರಿತು ಸರದಿ ಸಾಲಿನಲ್ಲಿ ಬಂದು ಅಪಾರ ಸಂಖ್ಯೆಯ ಭಕ್ತರು ಬಂದು ಪ್ರಸಾದ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ದೊರೆ,ಚಂದ್ರು,ಕೃಷ್ಣ, ರಂಜನ್ ರೇಡಿಯಂ, ಮಣಿ, ಚೇತು, ಸುನಿಲ್,ಮುಂತಾದವರು ಉಪಸ್ಥಿತರಿದ್ದರು.