ಚಾಮರಾಜನಗರ: ಚಾಮರಾಜನಗರ ಆಷಾಢಮಾಸದಲ್ಲಿ ಜರುಗುವ ಚಾಮರಾಜೇಶ್ವರಸ್ವಾಮಿ ಜಾತ್ರೆ ಮಹೋತ್ಸವ ರಾಜ್ಯದಲ್ಲೇ ವಿಶಿಷ್ಟ ಪರಂಪರೆಯುಳ್ಳ ಆಚರಣೆಯಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಎ.ಎಂ.ನಾಗಮಲ್ಲಪ್ಪ ಹೇಳಿದರು.
ಆಷಾಢ ಮಾಸದಲ್ಲಿ ನಡೆದ ನಗರದ ಚಾಮರಾಜೇಶ್ವರ ಜಾತ್ರೆ ಮಹೋತ್ಸವದ ಅಂಗವಾಗಿ ನಗರದ ಚಾಮರಾಜೇಶ್ವರ ದೇವಾಯದ ಆವರಣದಲ್ಲಿ ಚೇತನಕಲಾವಾಹಿನಿ ವತಿಯಿಂದ ನಡೆದ ಆಷಾಢ ವೈಭವಗೀತಾಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚಾಮರಾಜನಗರ ಚಾಮರಾಜೇಶ್ವರ ದೇವಾಲಯಕ್ಕೆ ೨೫೦ ವರ್ಷಕ್ಕು ಹೆಚ್ಚಿನ ಇತಿಹಾಸವಿದ್ದು ಅಂದಿನಿಂದಲೂ ವಿಶೇಷವಾಗಿ ಆಷಾಢ ಮಾಸದಲ್ಲೇ ಜಾತ್ರಾ ಮಹೋತ್ಸವದೂಂದಿಗೆ ರಥೋತ್ಸವ ನಡೆಯುತ್ತಿರುವುದು ವಿಶೇಷ. ಹೊಸದಾಗಿ ಮದುವೆಯಾದ ನವವಧುವರರು ಆಷಾಢಮಾಸದಲ್ಲಿ ಪರಸ್ವರ ಮುಖ ನೋಡುವುದಕ್ಕೂ ನಿರ್ಬಂಧವಿರುತ್ತದೆ ಅದರೆ ನವವಧುವರರು ಈಜಾತ್ರೆಯಲ್ಲಿ ಚಾಮರಾಜೇಶ್ವರನಿಗೆ ಹಣ್ಣು ಧವನ ಎಸದುಮ.ಪರಸ್ವರ ಭಕ್ತಿ ಸಮರ್ಪಿಸುವ ಅವಕಾಶಸಿಗಲಿದೆ ಇದು ಈಜಾತ್ರೆಯ ವಿಶೇಷ ಎಂದರೆ ತಪ್ಪಾಗುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಎಸ್ ವೆಂಕಟನಾಗಪ್ಪಶೆಟ್ಟಿ ಬಾಬು ಮಾತನಾಡಿ ಇತಿಹಾಸ ಪರಂಪರೆಯುಳ್ಳ ಚಾಮರಾಜೇಶ್ವರ ಸ್ವಾಮಿ ರಥೋತ್ಸವ ನಗರದಲ್ಲಿ ಹಲವಾರು ವರ್ಷದಿಂದಲೂ ವಿಜೃಣಭಣೆಯಿಂದ ಜರುಗುತ್ತಿರುವುದು ನಮ್ಮ ಪುಣ್ಯ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಚಿನ್ನಮ್ಮ ಮಾತನಾಡಿ ಮಲೆ ಮಹದೇಶ್ವರ ಮಂಟೇಸ್ವಾಮಿ ಸಿದ್ದಪ್ಪಾಜಿಯಂತಹ ಮಹನೀಯರು ನಡೆದಾಡಿರುವ ನೆಲ ಚಾಮರಾಜನಗರ. ಶ್ರೀ ಚಾಮರಾಜೇಶ್ಬರ ರಥೋತ್ಸವದಂದು ಮಲೆಮಹದೇಶ್ವರಸ್ವಾಮಿ ಆಡಿಯೋಬಿಡುಗಡೆ ಮಾಡುವ ಮಹತ್ವದ ಕಾರ್ಯ ಕೈಗೂಂಡಿರುವ ಚೇತನಕಲಾವಾಹಿನಿ ಸಂಸ್ಥೆಯವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ,ಕೆ.ಎಂ.ವಿಶ್ವೇಶ್ವರಯ್ಯ ಮಾತನಾಡಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳಿಲ್ಲ ಆದರೂ ನಾವು ಮುಂಜಾಗೃತಾ ಕ್ರಮವಾಗಿ ಪರಸ್ವರ ಸಾಮಾಜಿಕ ಅಂತರ ಕಾಪಾಡಬೇಕು ತಪ್ಪದೇ ಎಲ್ಲರೂ ಮಾಸ್ಕ್ ಧರಿಸಬೇಕು ನಮ್ಮ ಜಿಲ್ಲೆ ಕೂರೊನಾ ಭಾರದಂತೆ ಎಚ್ಚರವಹಿಸಬೇಕು ಎಂದು ಮನವಿಮಾಡಿದರು
ಇದೇ ವೇಳೆ ಚಾಮರಾಜನಗರ ಶ್ರೀಚಾಮರಾಜೇಶ್ವರ ದೇವಾಯದ ಅರ್ಚಕರಾದ ರಾಮಕೃಷ್ಣ ಭಾರಧ್ವಾಜ್, ದೇವಸ್ಥಾನದ ಬಂಡಿಕಾದಪೇದಾರ್ ಮಹೇಶ್, ಚಾಮರಾಜನಗರ ಖಜಾನಿಇಲಾಖೆ ಎಲ್,ರಮೇಶ್ ಅವರನ್ನು ಸನ್ಮಾನಿಸಲಾಯಿತು. ಚೇತನ ಕಲಾವಾಹಿನಿ ಅಧ್ಯಕ್ಷ ರಾಜಪ್ಪ ಸಂತೇಮರಹಳ್ಳಿ ರೇಷ್ಮ ಇಲಾಖೆ ರವಿಕುಮಾರ್ ಕಲಾವಿದರಾದ ಬಿ.ಬಸವರಾಜು ಎಂ.ಮಂಜುನಾಥ್ ಮನೋಜ್ ವೆಂಕೆಟೇಶ್‌ಬಾಬು ಸೇರಿದಂತೆ ಇತರರು ಹಾಜರಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಿಂದ ಬಿ.ಎಸ್.ಲತಾಪುಟ್ಟಸ್ವಾಮಿ ರವರ ತಂಡ ದಿಂದ ಆಷಾಢ ವೈಭವ ಗೀತಾಗಾಯನ ಕಾರ್ಯಕ್ರಮ ನಡೆಯಿತು.
