??

ಮೈಸೂರು: ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಮೈಸೂರು ನಗರ ಘಟಕ ವತಿಯಿಂದ ವಿದ್ಯಾರಣ್ಯಪುರಂನ ವಾಣಿ ವಿದ್ಯಾಮಂದಿರ ಶಾಲೆಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ(ಮಾ.೧೨) ಮಹಿಳಾ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಮೈಸೂರು ನಗರ ಘಟಕದ ಅಧ್ಯಕ್ಷ ಮನೋಜ್.ಎನ್ ಮಾತನಾಡಿ, ಸಾಧಕರನ್ನು ಕರೆತಂದು ಗೌರವಿಸವುದು ಸಹಜ, ಆದರೆ ಭವಿಷ್ಯದ ಸಾಧಕರನ್ನು ರೂಪಿಸುವ ಶಿಕ್ಷಕರಿಗೆ ಅವರ ವಿದ್ಯಾರ್ಥಿಗಳ ಮುಂದೆ ಗೌರವ ಸಮರ್ಪಣೆ ಮಾಡುವುದರ ಮೂಲಕ, ಅಪರೂಪದ ಗೌರವ ಸಮರ್ಪಣೆ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
ಶಾಲಾ ಮಹಿಳಾ ಶಿಕ್ಷಕರಾದ ಯಶೋಧಾ, ಭವಾನಿ, ಶೈಲಜಾ, ವಿಜಯಲಕ್ಷ್ಮೀ, ಜ್ಯೋತಿ, ನಿಷಾ ಅವರನ್ನು ಗೌರವ ಪೂರ್ವಕವಾಗಿ ಸ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಾಂಶುಪಾಲ ಪರಶುರಾಮೇಗೌಡ, ಶಿಕ್ಷಕ ರಾಘವೇಂದ್ರರಾವ್ ಅವರನ್ನು ಸನ್ಮಾನಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಮಗ್ರಿಗಳೊಂದಿಗೆ ಸಿಹಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ರಜತ್.ಆರ್, ಅಜ್ಞಾನ್, ರೇಖಾ, ಯಶಸ್ವಿನಿ, ಚಂದನ, ದರ್ಶನ್, ಮಂಜುನಾಥ್.ಎನ್, ಗೌತಮ್ ಸಿಂಗ್, ಆಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.