ಕನ್ನಡ ರಾಜ್ಯೋತ್ಸವ ಅಂಗವಾಗಿ ಸುವರ್ಣಬೆಳಕು ಫೌಂಡೇಷನ್ ವತಿಯಿಂದ ಇಂದು ಅಚರಿಸಲಾಯಿತು. ಮೈಸೂರಿನ ಕಲ್ಯಾಣಗಿರಿ ನಗರದ ನಿವಾಸಿ ಅಕ್ಬರ್ ಸಾಧನೆ ಗುರುತಿಸಿ ಇವರಿಗೆ ಸುವರ್ಣ ಬೆಳುಕು ಫೌಂಡೇಷನ್ ಅಧ್ಯಕ್ಷ ಮಹೇಶ್ ನಾಯಕ್ ರವರು ಸುಣ್ಣದಕೇರಿಯಲ್ಲಿರುವ ತಮ್ಮ ಕಚೇರಿ ಬಳಿ ಗೌರವ ಸನ್ಮಾನ ಮಾಡಿದರು. ಇವರು ಹಲವಾರು ವರ್ಷಗಳಿಂದ ಕಲ್ಯಾಣಗಿರಿ ನಗರದ ಮೊಹಲ್ಲಾದಲ್ಲಿ ಸ್ವಚ್ಚತೆಗೆ ದಿನ ನಿತ್ಯ ಒಂದು ತಾಸು ಸ್ವಚ್ಚತೆಗೆ ದಿನ ನಿತ್ಯ ಮೀಸಲಿಟ್ಟಿದ್ದು ಇದನ್ನು ಗುರತಿಸಿ ಕನ್ನಡ ರಾಜ್ಯೋತ್ಸವದಂದು ಸುವರ್ಣಬೆಳಕು ಪ್ರಶಸ್ತಿ ನೀಡಿದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಸನ್ಮಾನಿತರಾದ ಅಕ್ಬರ್ ರವರು ಕಸ ಮುಕ್ತ ಕರ್ನಾಟಕ ಆಗದಿದ್ದರೂ ಕಸ ಮುಕ್ತ ಕಲ್ಯಾಣಗಿರಿ ನಗರ ಮಾಡಬೇಕು ಎಂಬ ಛಲಹೊಂದಿದ್ದು. ಇದಕ್ಕಾಗಿಯೇ ನಾನು ದಿನ ನಿತ್ಯ ಒಂದು ತಾಸು ಚಳಿ, ಮಳೆ ಎನ್ನದೆ ತಾನು ವಾಸ ಮಾಡುತ್ತಿರುವ ನಗರದ ರಸ್ತೆ ಬದಿಗಳಲ್ಲಿ ಸ್ವಚ್ಛತೆಗೆ ಮೀಸಲಿಡುತ್ತಿದ್ದೇನೆ.ಯಾರು ಏನೇ ಹೇಳಿದರೂ ಇವರು ಮುಜುಗರವಿಲ್ಲದೆ ಮೋರಿಯ ಸ್ವಚ್ಚತೆಯಾಗಿರಬಹುದು, ಕಸದ ಸಮಸ್ಯೆಯಾಗಿರಲಿ ನಾನು ಕೆಲಸ ಮುಗಿಸಿ ಹೊರಟು ಹೋಗುತ್ತೇನೆ. ಸಾರ್ವಜನಿಕರಿಗೆ ಸ್ವಚ್ಛತೆ ಪಾಠ ಹಾಗೂ ಪರಿಸರದ ಜಾಗೃತಿ ಬಗ್ಗೆ ಮಕ್ಕಳಿಗೆ ಅಲ್ಲಿನ ನಿವಾಸಿಗಳಿಗೆ ಜಾಗೃತಿ ಮೂಡಿಸವ ಕೆಲಸಮಾಡುತ್ತಿದ್ದೇನೆ.ಆದರಿಂದ್ದ ನನ್ನನ್ನು ಗುರುತಿಸಿ ಸನ್ಮಾನ ಮಾಡಿದ ಸುವರ್ಣ ಬೆಳಕು ಫೌಂಡೇಷನ್ ರವರಿಗೆ ಅಬಾರಿಯಾಗಿರುತ್ತೇನೆ.ಎಂದುಅಭಿಪ್ರಾಯಪಟ್ಟರು.
ಚಿತ್ರದಲ್ಲಿ ಮಹೇಶ್‌ನಾಯಕ್,ಬಾಲು,ಬಸವರಾಜು,ಶಫೀ,ಆದಿಲ್,ಮುಂತಾದವರು ಉಪಸ್ಥಿತರಿದ್ದರು.