ಚಾಮರಾಜನಗರ: ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಚಾಮರಾಜನಗರ ನೂತನ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ನಗರಕ್ಕೆ ಆಗಮಿಸಿದರು.
ನಗರದ ಶ್ರೀ ಕೊಳದ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಸಚಿವರು ಪೂಜೆ ಸಲ್ಲಿಸಿದರು. ಉಸ್ತುವಾರಿ ಸಚಿವರು ಆಗಮಿಸುತ್ತಿದ್ದಂತೆ ಸಡಗರ ಸಂಭ್ರಮದಿಂದ ಸ್ವಾಗತಿಸಲಾಯಿತು. ನಗರಸಭೆ ಅಧ್ಯಕ್ಷರಾದ ಸಿ.ಎಂ ಆಶಾ ನಟರಾಜು ಸೇರಿದಂತೆ ನಗರಸಭಾ ಸದಸ್ಯರು, ಇತರೆ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
