ಆರ್.ಬಿ.ಐ ಕಾಂಪೌಂಡ್ ನೆಗೆದು ಒಳ ಬಂದು ಗಂಧದ ಮರಗಳನ್ನು ಕತ್ತರಿಸುತ್ತಿದ್ದಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿರುವ ಘಟನೆ ಮೇಟಗಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜ.13 ರಂದು ರಾತ್ರಿ ಮೈಸೂರು ನಗರದ ಬೆಲವತ್ತ ರಿಂಗ್ ರಸ್ತೆಯ ಪಕ್ಕದಲ್ಲಿರುವ ಭಾರತೀಯ ನೋಟು ಮುದ್ರಣ ಘಟಕದ ಕಾಂಪೌಂಡ್‍ನಿಂದ ಒಳಗೆ ನುಸಳಿ ಅಲ್ಲಿರುವ ಕಾಡಿನೊಳಗೆ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಡಿದು ಕಳ್ಳತನ ಮಾಡಲು ಬಂದಿದ್ದ ಶ್ರೀಗಂಧದ ಕಳ್ಳರಾದ ಮೈಸೂರು ತಾಲ್ಲೂಕು ಇಲವಾಲ ಹೋಬಳಿ, ಕಮ್ರಳ್ಳಿ ಗ್ರಾಮದ ನಿವಾಸಿ ರಘು ಬಿನ್ ಕೃಷ್ಣಪ್ಪ, 46 ವರ್ಷ, ಮೈಸೂರು ತಾಲ್ಲೂಕು ಇಲವಾಲ ಹೋಬಳಿ, ಕಮ್ರಳ್ಳಿ ಗ್ರಾಮದ ನಿವಾಸಿ ಮಂಜುನಾಥ @ ಮಂಜು ಬಿನ್ ಲೇಟ್ ದೇವರಾಜು, 22 ವರ್ಷ ಇವÀರನ್ನು ಆರ್.ಬಿ.ಐ ಭದ್ರತಾ ಸಿಬ್ಬಂದಿಗಳ ಮಾಹಿತಿ ಮೇರೆಗೆ ಮೇಟಗಳ್ಳಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಇವರುಗಳು ಜ. 8ರಂದು ಆರ್.ಬಿ.ಐ ಕಾಂಪೌಂಡ್‍ನಿಂದ ಒಳಗೆ ನೆಗೆದು ಹೋಗಿ ಅಲ್ಲಿ ಒಂದು ಶ್ರೀಗಂಧದ ಮರವನ್ನು ಕಡಿದುಕೊಂಡು ಅದನ್ನು ಮೈಸೂರು ಲಷ್ಕರ್ ಮೊಹಲ್ಲಾ ಕಾಂತರಾಜ ಪಾರ್ಕ್ 21ನೇ ಕ್ರಾಸ್‍ನಲ್ಲಿನ ನಿವಾಸಿ ಮಕ್ಬುಲ್ ಷರೀಫ್ ಬಿನ್ ಲೇಟ್ ಮೊಹಿದ್ದೀನ್ ಷರೀಪ್, 58 ವರ್ಷ, ಎಂಬುವನಿಗೆ ಮಾರಾಟ ಮಾಡಿ ನಂತರ ಪುನಃ ಜ.13ರಂದು ರಾತ್ರಿ ಇದೇ ಆರ್.ಬಿ.ಐ ಕಾಂಪೌಂಡ್ ನೆಗೆದು ಒಳ ಬಂದು ಗಂಧದ ಮರಗಳನ್ನು ಕತ್ತರಿಸುತ್ತಿದ್ದಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿರುತ್ತಾರೆ.
ಇವರಿಂದ ಶ್ರೀಗಂಧದ ತುಂಡುಗಳು, ಮಚ್ಚು, ಕೊಡಲಿ, ಗರಗಸ, ಮತ್ತು ಬೈಕ್ ಅನ್ನು ವಶ ಪಡೆದು ಕೊಂಡಿರುತ್ತಾರೆ. 3ನೇ ಆರೋಪಿ ಮಕ್ಬುಲ್ ಷರೀಫನು ಸುಮಾರು ವರ್ಷಗಳಿಂದ ಶ್ರೀಗಂಧವನ್ನು ಅಕ್ರಮವಾಗಿ ಖರೀದಿಸುವ ಕೆಲಸ ಮಾಡಿಕೊಂಡಿದ್ದು ಕೆಲವು ಜನ ಗಂಧದ ಕಳ್ಳರಿಗೆ ಕಳ್ಳತನ ಮಾಡಲು ಬೇಕಾದ ಮಚ್ಚು, ಗರಗಸ, ಟಾರ್ಚ್‍ಗಳನ್ನು ಸಹ ಒದಗಿಸುತ್ತಿದ್ದನು.

ಈತನ ಮನೆಯ ಮೇಲೆ ಜ. 15ರಂದು ದಾಳಿ ಮಾಡಿ ಈತನನ್ನು ವಶಕ್ಕೆ ಪಡೆದ ಮೇಟಗಳ್ಳಿ ಪೊಲೀಸರು ಈತನು ಬೇರೆ, ಬೇರೆಯವರಿಂದ ಮತ್ತು ಆರೋಪಿ ರಘು ಹಾಗೂ ಮಂಜುನಾಥ್‍ನಿಂದ ಅಕ್ರಮವಾಗಿ ಖರೀದಿಸಿದ್ದ 33. 1/2 ಕೆ.ಜಿ ಶ್ರೀಗಂಧ, 3 ಮಚ್ಚುಗಳು, 1 ಕೊಡಲಿ, 3 ಗರಗಸ ಹಾಗೂ 2ಟಾರ್ಚ್‍ಗಳನ್ನು ವಶಕ್ಕೆ ಪಡಿಸಿಕೊಂಡಿರುತ್ತಾರೆ. ಆರೋಪಿ ಮಕ್ಬುಲ್ ಷರೀಫ್‍ನು ಬೇರೆಯವರಿಂದ ಖರೀದಿ ಮಾಡುತ್ತಿದ್ದ ಶ್ರೀಗಂಧವನ್ನು ಯಾರಿಗೆ ಮಾರಾಟ ಮಾಡುತ್ತಿದ್ದನೆಂಬ ಬಗ್ಗೆ ವಿಚಾರಿಸಲಾಗಿ, ಈತನು ಕಲ್ಯಾಣಗಿರಿ ನಗರದ ವಾಸಿ ಸೈಯದ್ ಗೌಸ್ ಮೊಹಿದ್ದೀನ್ ಬಿನ್ ಲೇಟ್ ಸೈಯದ್ ಫಕ್ರುದ್ದೀನ್, 50 ವರ್ಷ ಡಾ. ರಾಜ್‍ಕುಮಾರ್ ಮುಖ್ಯ ರಸ್ತೆ, ಕಲ್ಯಾಣಗಿರಿ ನಗರ, ಮೈಸೂರು ನಗರ ಎಂಬುವರಿಗೆ ಮಾರಾಟ ಮಾಡುತ್ತಿದ್ದೆ ಎಂದು ತಿಳಿಸಿದ್ದ ಮೇರೆಗೆ ಸೈಯದ್ ಗೌಸ್ ಮೊಹಿದ್ದೀನ್ ಮನೆಯ ಮೇಲೆ ಜ. 16ರಂದು ದಾಳಿ ಮಾಡಿ ಆತನನ್ನು ವಶಕ್ಕೆ ಪಡೆದು ಆತನ ಮನೆಯಲ್ಲಿದ್ದ 190 ಕೆ.ಜಿ ಶ್ರೀಗಂಧದ ತುಂಡುಗಳು, ತೂಕದ ಯಂತ್ರ, ಇತ್ಯಾದಿಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಸೈಯದ್ ಗೌಸ್ ಮೊಹಿದ್ದೀನ್ ಚಾಳಿ ಬಿದ್ದ ಅಪರಾಧಿಯಾಗಿದ್ದು ಈತನ ವಿರುದ್ದ ಇದೆ ರೀತಿಯಲ್ಲಿ ಕಳ್ಳತನ ಮಾಡಿದ್ದ ಗಂಧದ ಮಾಲನ್ನು ಸ್ವೀಕರಿಸಿದ್ದಕ್ಕಾಗಿ ವಿರಾಜ್ ಪೇಟೆ ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ 2019ನೇ ಸಾಲಿನಲ್ಲಿ ಪ್ರಕರಣ ದಾಖಲಾಗಿದ್ದು 2020ನೇ ಸಾಲಿನಲ್ಲಿ 84 ದಿನಗಳ ಕಾಲ ಮಡಿಕೇರಿ ಕೇಂದ್ರ ಕಾರಾಗೃಹದಲ್ಲಿದ್ದನು.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ ರವರಾದ ಗೀತಪ್ರಸನ್ನ, ನರಸಿಂಹರಾಜ ವಿಭಾಗದ ಎ.ಸಿ.ಪಿ ಶಿವಶಂಕರ್ ರವರ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಎ. ಮಲ್ಲೇಶ್, ಪಿ.ಎಸ್.ಐ ವಿಶ್ವನಾಥ್. ಕೆ, ಮತ್ತು ನಾಗರಾಜ್ ನಾಯಕ್, ಸಿಬ್ಬಂದಿಗಳಾದ ಪೊನ್ನಪ್ಪ. ಮಧುಕುಮಾರ್. ಹೆಚ್.ಪಿ. ದಿವಾಕರ್. ಕೃಷ್ಣ. ಹೆಚ್.ಬಿ, ರಾಜೇಶ್. ಹೆಚ್.ವಿ, ಪ್ರಶಾಂತ್‍ಕುಮಾರ್, ಸಿ. ಬಸವರಾಜು, ಶ್ರೀಶೈಲ ಹುಗ್ಗಿ, ಲಿಖಿತ್ ಆರ್. ಚೇತನ್. ಆಶಾ, ಪ್ರಕಾಶ್. ಜಿ. ಚಂದ್ರಕಾಂತ್ ತಳವಾರ್, ಮಣಿ ರವರುಗಳು ಮತ್ತು ಎ.ಸಿ.ಪಿ ನರಸಿಂಹರಾಜ ವಿಭಾಗದ ವಿಶೇಷ ತಂಡದ ಸಿಬ್ಬಂದಿಗಳಾದ, ಅನಿಲ್ ಶಂಕಪಾಲ್, ಲಿಂಗರಾಜಪ್ಪ, ರಮೇಶ್, ಸುರೇಶ್, ಕಾಂತರಾಜು, ಜೀವನ್, ಹನುಮಂತ ಕಲ್ಲೇದ್, ಗೌರಿಶಂಕರ್ ರವರುಗಳು ಮಾಡಿರುತ್ತಾರೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ಮುಂದುವರೆದಿರುತ್ತದೆ. ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ. ಚಂದ್ರಗುಪ್ತ. ಐ.ಪಿ.ಎಸ್. ರವರು ಪ್ರಶಂಶಿಸಿರುತ್ತಾರೆ.

By admin