ಮೈಸೂರು : ಜೂ 10 ಇತ್ತೀಚಿಗೆ ನೆಡೆದ ಹೈದರಬಾದ್ ಗಾಚಿಬೋಲಿ ಒಳಾಂಣಗಣ ಕ್ರೀಡಾಂಗಣದಲ್ಲಿ ನೆಡೆದ ೪೪ ನೇ ನ್ಯಾಷನಲ್ ಅರ್ಮ್ ರೆಸ್ಲಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮೈಸೂರಿನ ೯೫ ಕೆಜಿ.ಯ ಬಲಗೈ ಹಾಗೂ ಎಡಗೈ ವಿಭಾಗದಲ್ಲಿ ಎಂ.ರಾಜು, ಚಿನ್ನದ ಪದಕ ಗೆದ್ದಿದ್ದಾರೆ. ಚಿಕ್ಕಂದಿನಲ್ಲಿ ಉಂಟಾದ ಅಪಘಾತದಿಂದ ವಾಕ್ ಮತ್ತು ಶ್ರವಣದ ಸಮಸ್ಯೆಗೆ ಒಳಗಾಗಿದ್ದ ರಾಜು, ಇದೆಲ್ಲವನ್ನೂ ಮೆಟ್ಟಿ ನಿಂತು ವಿಶ್ವ ಆರ್ಮ್ ರೆಸ್ಲಿಂಗ್ ಚಾಂಪಿಯನ್‌ಶಿಪ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ಪದಕ ತರುವಲ್ಲಿ ಯಶಸ್ವಿಯಾಗಿದ್ದಾರೆ.
ದೇಹದಾಢ್ರ್ಯತೆ ಸ್ಪರ್ಧೆಯಲ್ಲೂ ತೊಡಗಿಸಿಕೊಂಡಿದ್ದರು.ಕಳೆದ ಕೆಲ ವರ್ಷಗಳಿಂದ ಆರ್ಮ್ ರೆಸ್ಲಿಂಗ್ನಲ್ಲಿ ಪೂರ್ಣ ಪ್ರಮಾಣದಲ್ಲಿತೊಡಗಿಸಿಕೊಂಡಿದ್ದೇನೆ. ಹಾಗು ಕೆ ವಿಶ್ವನಾಥ್ ರವರ ತರಬೇತಿ ಪಡೆದು ಕೊಂಡು ಮುಂದೆ ಸಾಗುತ್ತಿದ್ದು ಈಗ ನಾನು ಜಿಮ್.ತರಬೇತುದಾರರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.ಪ್ರತಿಭಾವಂತ ಕ್ರೀಡಾಪಟು ಎಂ.ರಾಜು ಮುಂಬರುವ ವರ್ಲ್ಡ್ ಚಾಂಪಿಯನ್’ಶಿಪ್ ಟರ್ಕಿಗೆ ಇವರು ಆಯ್ಕೆಯಾಗಿದ್ದಾರೆ.