ಕಾಣೆಯಾಗಿದ್ದಾರೆ
ಮೈಸೂರು, ಮೈಸೂರಿನ ಮಂಚೇಗೌಡನ ಕೊಪ್ಪಲಿನ ಪ್ರೇಮ ಕೋಂ ಪ್ರಕಾಶ ಎಂಬುವವರ ಮಗ ದಿಲೀಪ್.ಪಿ. ಡಿಸೆಂಬರ್ 25 ರಂದು ಬೆಳಿಗ್ಗೆ 8 ಗಂಟೆಗೆ ತಮ್ಮ ದೊಡ್ಡಮ್ಮ ಅವರ ಮನೆಗೆ ಹೋದವರು ಕಾಣೆಯಾಗಿದ್ದಾರೆ. ಕಾಣೆಯಾಗಿರುವ ಮಗನ ಪತ್ತೆಗಾಗಿ ತಂದೆ-ತಾಯಿ ಪ್ರೇಮ
ಮತ್ತು ಪ್ರಕಾಶ ಅವರು ಮೈಸೂರು ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಇಂತಿದೆ: ವಯಸ್ಸು 25, ನೀಲಿ ಜೀನ್ಸ್ ಪ್ಯಾಂಟ್ ಮತ್ತು ಗ್ರೇ
ಕಲರ್ ಆಫ್ ಟೀಶರ್ಟ್ ಧರಿಸಿದ್ದು, ಬಲಗೈ ರಟ್ಟೆಯಲ್ಲಿ ಪ್ರೇಮ ಪ್ರಕಾಶ ಎಂಬ ಹಚ್ಚೆ
ಇರುತ್ತದೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ನಗರ ಕಂಟ್ರೋಲ್
ರೂಂ 0821-2418339 ಅಥವಾ ಹೆಬ್ಬಾಳ್ ಪೊಲೀಸ್ ಠಾಣೆ 0821-2418318 ಸಂಪರ್ಕಿಸುವಂತೆ ಹೆಬ್ಬಾಳ್ ಪೊಲೀಸ್ ಠಾಣೆ ಉಪ ನಿರೀಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

– ಮೈಸೂರಿನ ಮಂಚೇಗೌಡನ ಕೊಪ್ಪಲಿನ ಯಲ್ಲಪ್ಪ ಬಿನ್ ನೀಲಪ್ಪ ಎಂಬುವವರ ಮಗಳು ಶ್ರೀಮತಿ ಪ್ರತಿಭಾ ಹರಿಹರ ಆಗಸ್ಟ್ 13 ರಂದು ಸಂಜೆ 6.30 ಗಂಟೆಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ಬೀಗ ಹಾಕಿಕೊಂಡು ಹೋದವರು ಕಾಣೆಯಾಗಿದ್ದಾರೆ. ಕಾಣೆಯಾಗಿರುವ ಮಗಳ ಪತ್ತೆಗಾಗಿ ತಂದೆ ಯಲ್ಲಪ್ಪ ಬೀನ್ ನೀಲಪ್ಪ ಅವರು ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.

ಕಾಣೆಯಾದ ಹುಡುಗಿಯ ಚಹರೆ ಇಂತಿದೆ: ವಯಸ್ಸು 19, ಹಳದಿ ಮತ್ತು ಕಪ್ಪು ಬಣ್ಣದ ಚೂಡಿದಾರ್ ಧರಿಸಿದ್ದು, ಪಿಆರ್‍ವಿ ಎಂಬ ಹಚ್ಚೆ ಇರುತ್ತದೆ. ಕಾಣೆಯಾದ ಹುಡುಗಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ನಗರ ಕಂಟ್ರೋಲ್ ರೂಂ 0821-2418339, ಹೆಬ್ಬಾಳ್ ಪೊಲೀಸ್ ಠಾಣೆ 0821-2418318 ಸಂಪರ್ಕಿಸುವಂತೆ ಹೆಬ್ಬಾಳ್ ಪೊಲೀಸ್ ಠಾಣೆ ಉಪ ನಿರೀಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

By admin