ಮೈಸೂರು, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿ ಉಳಿದಿರುವ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಿದೆ.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ನೇರವಾಗಿ ಪ್ರವೇಶ ಮಾಡಿಕೊಳ್ಳಲಾಗುವುದು. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರುವ ಆಸಕ್ತ ಅಭ್ಯರ್ಥಿಗಳು ಜನವರಿ 5ರಿಂದ 16ರವರೆಗೆ ನೇರವಾಗಿ ಕಚೇರಿಯಿಂದ ಅರ್ಜಿ ಪಡೆದು ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಎರಡು ವರ್ಷದ ಅವಧಿಗೆ ವಿದ್ಯುತ್‌ಕರ್ಮಿ(1ಹುದ್ದೆ), ಫಿಟ್ಟರ್(2), ಐ.ಸಿ.ಟಿ.ಎಸ್.ಎಂ(17), ಮಷಿನಿಸ್ಟ್(12), ಮಷಿನಿಸ್ಟ್ ಗ್ರೆöÊಂಡರ್(15), ಟಿ.ಆರ್.ಎ.ಸಿ. (01), ಟರ್ನರ್(8)ಹುದ್ದೆಗಳು ಹಾಗೂ ಒಂದು ವರ್ಷದ ಅವಧಿಗೆ ಕೋಪಾ(28 ಹುದ್ದೆಗಳು), ಎಂ.ಎ.ಬಿ.ಆರ್ (16), ಮೈಕ್ಯಾನಿಕ್ ಡೀಸೆಲ್ (05), ಸೆಕ್ರೆಟರಿಯಲ್ ಪ್ರಾಕ್ಟೀಸ್(34), ವೆಲ್ಡರ್(58) ಸೇರಿ ಬಟ್ಟು 197 ಹುದ್ದೆಗಳು ಖಾಲಿಯಿದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ನೇರವಾಗಿ ಅಥವಾ ಮೊಬೈಲ್ ಸಂ: 9845767004, 99452652 ಮತ್ತು 9980883030ಗೆ ಸಂಪರ್ಕಿಸಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.