ಮೈಸೂರು, ಫೆಬ್ರವರಿ 08:- ಕೃಷಿ ಇಲಾಖೆಯ ವತಿಯಿಂದ 2021-22ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಡಿಯಲ್ಲಿ ಮೈಸೂರು ತಾಲ್ಲೂಕಿನ ಕಸಬಾ, ವರುಣಾ, ಜಯಪುರ ಮತ್ತು ಇಲವಾಲ ಹೋಬಳಿಗಳಲ್ಲಿ ರೈತರಿಗೆ ಟಾರ್ಪಲಿನ್ಗಳನ್ನು ವಿತರಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.


ಆಸಕ್ತ ರೈತರು ತಮ್ಮ ವ್ಯಾಪ್ತಿಗೆ ಬರುವ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಅರ್ಜಿಯನ್ನು 2022ರ ಫೆಬ್ರವರಿ 15ರೊಳಗಾಗಿ ರೈತರು ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿಗಳು ಬಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸ್ವೀಕೃತವಾದರೆ, ಲಾಟರಿ ಮುಖಾಂತರ ಅರ್ಹ ಫಲಾನುಭವಿಯನ್ನು ಆಯ್ಕೆ ಮಾಡಲಾಗುವುದು.ರೈತರು ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಾದ ಜಯಪುರದ ಕೃಷಿ ಅಧಿಕಾರಿ ಸಿ.ಎಂ.ಕಾರ್ತಿಕ್ ಅವರ ಮೊ.ಸಂ.8277933163, ಇಲವಾಲದ ಕೃಷಿ ಅಧಿಕಾರಿ ಎಂ.ಬಿ.ಮAಜುಳ ಅವರ ಮೊ.ಸಂ. 8277399155, ಕಸಬಾದ ಕೃಷಿ ಅಧಿಕಾರಿ ಪಿ.ಎನ್.ಜೀವನ್ ಅವರ ಮೊ.ಸಂ. 8277933173, ವರುಣ ಕೃಷಿ ಅಧಿಕಾರಿ ಸಿ.ಎಂ.ಕಾರ್ತಿಕ್ ಅವರ ಮೊ.ಸಂ. 8277933163 ಅನ್ನು ಸಂಪರ್ಕಿಸಲು ಮೈಸೂರು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಹೆಚ್.ಬಿ. ಮಧುಲತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.