
ಮೈಸೂರು, ಜನವರಿ 31 :- ತಿ.ನರಸಿಪುರ ಪುರಸಭೆ ವ್ಯಾಪ್ತಿಯಲ್ಲಿ ಸ್ವಂತ ನೀವೆಶನ ಹೊಂದಿ ವಸತಿ ರಹಿತರಾಗಿರುವ ಜನರಿಗೆ ಡಾ. ಬಿ.ಅರ್. ಅಂಬೆಡ್ಕರ್ ನಗರ ವಸತಿ ಯೋಜನೆಯಡಿ ಅಂಗವಿಕಲರಿಗೆ, ಹಿರಿಯನಾಗರಿಕರಿಗೆ, ವಿಧುರರು, ವಿಧವೆಯರಿಗೆ ನಿವೇಶನ ಕಲ್ಪಿಸಲು ಗುರಿ ನಿಗಧಿಪಡಿಸಲಾಗಿದ್ದು ಅರ್ಹ ಪಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಪುರಸಭೆ ಯೋಜನೆಯಡಿ ಪರಿಶಿಷ್ಟ ಜಾತಿಯವರಿಗೆ 13 ಮನೆಗಳು.ಪರಿಶಿಷ್ಟ ಪಂಗಡದವರಿಗೆ 5 ಮನೆಗಳು ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿ ಅಲ್ಪಸಂಖ್ಯಾತರಿಗೆ 8 ಮನೆಗಳು, ಸಾಮಾನ್ಯ ವರ್ಗÀದವರಿಗೆ 49 ಮನೆಗಳನ್ನು ನಿರ್ಮಿಸಿಕೊಡಲಾಗುವುದು.
ಆಸಕ್ತರು ಅರ್ಜಿಯೊಂದಿಗೆ ಸ್ವಂತ ನಿವೇಶನಕ್ಕೆ ಸಂಬಧಿಸಿದ ಖಾತಾ ನಕಲು (ಹಕ್ಕು ಪತ್ರ/ ಈ-ಸ್ವತ್ತು), ಪ್ರತಿ ಬಿಪಿಎಲ್ ಪಡಿತರ ಚೀಟಿ ಪ್ರತಿ, ಆಧಾರ್ ಕಾರ್ಡ್ ಪ್ರತಿ, ಮತದಾರರ ಗುರುತಿನ ಚೀಟಿ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, 100 ರೂ ಬಾಂಡ್ ಪೇಪರ್‌ನಲ್ಲಿ ಕುಟುಂಬದ ಸದಸ್ಯರ ಹೆಸರಿನಲ್ಲಿ ಭಾರತದ ಯಾವುದೇ ಭಾಗದಲ್ಲಿ ಸರ್ಕಾರದ ಯೋಜನೆಯಲ್ಲಿ ಮನೆ ಕಟ್ಟಲು ಸಹಾಯಧನ ಪಡೆದಿರುವುದಿಲ್ಲ ಮತ್ತು ವಾಸಯೋಗ್ಯವಾದ ಸ್ವಂತಮನೆ ಇರುವುದಿಲ್ಲ ಎಂಬ ಕುರಿತು ನೋಟರಿಯವರಿಂದ ಪಡೆದ ಪ್ರಮಾಣ ಪತ್ರ, ವಾಸಸ್ಥಳ ಪತ್ರವನ್ನು ಸಲ್ಲಿಸಬೇಕು.
ಅರ್ಜಿಯನ್ನು ಸಲ್ಲಿಸುವ ಆಸಕ್ತರು 2022 ಫೆಬ್ರವರಿ 5 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪುರಸಭಾ ಕಾರ್ಯಾಲಯದ ವಸತಿ ಶಾಖೆಯನ್ನು ಸಂಪರ್ಕಿಸುವAತೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.