
ಮೈಸೂರು, ಜನವರಿ 28 – ತಿ.ನರಸಿಪುರ ಪುರಸಭೆ ವ್ಯಾಪ್ತಿಯಲ್ಲಿ ಸ್ವಂತ ನೀವೆಶನ ಹೊಂದಿ ವಸತಿ ರಹಿತರಾಗಿರುವ ಜನರಿಗೆ ಡಾ. ಬಿ.ಅರ್. ಅಂಬೆಡ್ಕರ್ ನಗರ ವಸತಿ ಯೋಜನೆಯಡಿ ಅಂಗವಿಕಲರಿಗೆ, ಹಿರಿಯನಾಗರಿಕರಿಗೆ, ವಿಧುರರು, ವಿಧವೆಯರಿಗೆ ನಿವೇಶನ ಕಲ್ಪಿಸಲು ಗುರಿ ನಿಗಧಿಪಡಿಸಲಾಗಿದ್ದು ಅರ್ಹ ಪಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಪುರಸಭೆ ಯೋಜನೆಯಡಿ ಪರಿಶಿಷ್ಟ ಜಾತಿಯವರಿಗೆ 13 ಮನೆಗಳು.ಪರಿಶಿಷ್ಟ ಪಂಗಡದವರಿಗೆ 5 ಮನೆಗಳು ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿ ಅಲ್ಪಸಂಖ್ಯಾತರಿಗೆ 8 ಮನೆಗಳು,ಸಾಮಾನ್ಯ ವರ್ಗದವರಿಗೆ 49 ಮನೆಗಳು ಒಟ್ಟು 57 ಮನೆಗಳನ್ನು ನಿರ್ಮಿಸಿಕೊಡಲಾಗುವುದು.
ಆಸಕ್ತರು 2022 ಫೆಬ್ರವರಿ 5 ರೊಳಗಾಗಿ ನಿಗಧಿತ ನಮೂನೆಯಲ್ಲಿ ದ್ರಡೀಕ್ರತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪುರಸಭಾ ಕಾರ್ಯಾಲಂiÀiದ ವಸತಿ ಶಾಲೆಯಲ್ಲಿ ಸಂಪರ್ಕಿಸುವAತೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ