ಹಾಸನ: ರಾಜ್ಯಾದ್ಯಂತ ಕೊರೋನಾ ವೈರಸ್ ಪ್ರಕರಣಗಳು 2 ನೇ ಅಲೆಯಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೋವಿಡ್-19 ಪ್ರಕರಣಗಳು ಸಮರ್ಪಕವಾಗಿ ನಿರ್ವಹಿಸಲು ಡಿ.ಸಿ.ಹೆಚ್.ಸಿ ಮತ್ತು ಸಿ.ಸಿ.ಸಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು ಗರಿಷ್ಠ 5 ತಿಂಗಳ ಅವಧಿಗೆ ಗೌರವಧನ ಆಧಾರದ ಮೇಲೆ ನೇಮಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ತಜ್ಞ ವೈದ್ಯರು(ಫಿಜಿಷಿಯನ್) ಎಂ.ಬಿ.ಬಿ.ಎಸ್, ಎಂ.ಡಿ 1 ಹುದ್ದೆ, ತಜ್ಞ ವೈದ್ಯರು(ಅರವಳಿಕೆ) ಎಂ.ಬಿ.ಬಿ.ಎಸ್, ಅನಸ್ತೇಷಿಯಾ 1 ಹುದ್ದೆ, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಎಂ.ಬಿ.ಬಿ.ಎಸ್ 17 ಹುದ್ದೆ, ಶುಶ್ರೂಷಕಾಧಿಕಾರಿಗಳು ಬಿ.ಎಸ್ಸಿ/ಡಿಪ್ಲಮೋ ನರ್ಸಿಂಗ್ 32 ಹುದ್ದೆ, ಓ.ಟಿ ಟೆಕ್ನಿಷಿಯನ್ ಓ.ಟಿ ಟೆಕ್ನಿಷಿಯನ್ ಡಿಪ್ಲಮೋ 20 ಹುದ್ದೆ, ಪ್ರಯೋಗಶಾಲಾ ತಂತ್ರಜ್ಞರು, ಬಿ.ಎಸ್ಸಿ, ಡಿಪ್ಲಮೋ ಲ್ಯಾಬ್ 17 ಹುದ್ದೆ ಗ್ರೂಪ್ ಡಿ ಎಸ್.ಎಸ್.ಎಲ್.ಸಿ 38 ಹುದ್ದೆಗಳಿಗೆ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು ಬಯೋಡೇಟಾ ಮತ್ತು ವಿದ್ಯಾರ್ಹತೆಗೆ ಸಂಬAಧಿಸಿದ ಮೂಲ ದಾಖಲೆ ಮತ್ತು ಜೆರಾಕ್ಸ್ ಪ್ರತಿಗಳೊಂದಿಗೆ ಮೇ 11 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ಹಾಜರಾಗಲು ತಿಳಿಸಲಾಗಿದೆ.

By admin