ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಮಹದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರಕ್ಕೆ ಮನವಿ

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯ ಮಾಹದೇಶ್ವರ ಮಠದ ಕೊಪ್ಪಲು ಗ್ರಾಮದಲ್ಲಿ ಶ್ರೀ ಮಹದೇಶ್ವರ ದೇವಾಲಯದಲ್ಲಿ ಕಡೇ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನಡೆಯಿತು.ಇಂದು ಮುಂಜಾನೆಯಿಂದ ಶ್ರೀ ಮಹದೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ, ಅಲಂಕಾರ ಪೂಜೆ ,ಮಹಾಮಂಗಳಾರತಿ ,ನಡೆಯಿತು.ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಭಕ್ತಾದಿಗಳು ದೇವರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು. ಬಂದಂತಹ ಭಕ್ತಾಧಿಗಳಿಗೆ ದೇವಾಲಯದ ಸಮಿತಿಯ ವತಿಯಿಂದ ಪ್ರಸಾದ ವಿತರಿಸಲಾಯಿತು.

ಹಾಸನದ ಉದ್ಯಮಿ ಬಿ ಲೋಕೇಶ್ ಮಾತನಾಡಿ ಇಲ್ಲಿನ ದೇವಾಲಯಕ್ಕೆ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆಯಲು ಬರುವುದರಿಂದ ಸರ್ಕಾರವು ರಸ್ತೆ ಅಭಿವೃದ್ಧಿಪಡಿಸಬೇಕು , ದೇವಾಲಯಕ್ಕೆ ಕಾಂಪೌಡ್ ನಿರ್ಮಾಣ ಹಾಗೂ ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕು ಹಾಗೂ ಕಲ್ಯಾಣಿಯನ್ನು ಅಭಿವೃದ್ಧಿಪಡಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀಮಹದೆಶ್ವರ ದೇವಾಲಯ ಸಮಿತಿ ಅಧ್ಯಕ್ಷ ವಿರೂಪಾಕ್ಷ, ಕಾರ್ಯದರ್ಶಿ ಮಹಾಲಿಂಗಪ್ಪ ಅರ್ಚಕರಾದ ಜಗದೀಶ್, ಎಂ ಪಿ ಮಹದೇವಯ್ಯ ,ಸಮಿತಿ ನಿರ್ದೇಶಕರಾದ ಸುಂದರ್, ಪ್ರಸನ್ನ ,ಗ್ರಾಪಂ ಮಾಜಿ ಸದಸ್ಯ ಸ್ವಾಮಿಗೌಡ ,ಮುಖಂಡರಾದ ಚಂದ್ರಶೇಖರ್’ ಬ್ರಹ್ಮಚಾರ್,ಮಣಿಯಮ್ಮ ಶಿವಪ್ಪ , ವಿವಿಧ ಜಿಲ್ಲೆಗಳಿಂದ ಬಂದಂಥ ಭಕ್ತಾದಿಗಳು ಹಾಜರಿದ್ದರು.

ಮಾಗಳಿ ರಾಮೇಗೌಡ ವರದಿಗಾರರು ಪಿರಿಯಾಪಟ್ಟಣ

By admin