ಗುಂಡ್ಲುಪೇಟೆ: ಎಪಿಎಂಸಿ ಚುನಾವಣೆಯಲ್ಲಿ ಕನ್ನೆಗಾಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಮಾದಶೆಟ್ಟಿ ಪರ ಹುಲಸಗುಂದಿ ಗ್ರಾಮದಲ್ಲಿ ಭೀಮನಬೀಡು ಗ್ರಾಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭೀಮನಬೀಡು ಗ್ರಾಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್, ಕನ್ನೆಗಾಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಹೆಚ್ಚಿನ ಒಲವಿದೆ. ಹೋದ ಕಡೆಗಳಲೆಲ್ಲ ಉತ್ತಮ ಬೆಂಬಲ ಸಿಗುತ್ತಿದ್ದು, ಈ ಬಾರಿಯ ಎಂಪಿಎಂಸಿ ಚುನಾವಣೆಯಲ್ಲಿ ಮಾದಶೆಟ್ಟಿ ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಮುಖಂಡರಾದ ಎ.ಮಹದೇವಶೆಟ್ಟಿ, ಗೋಕುಲಶೆಟ್ಟಿ, ಹುಲಸಗುಂದಿ ರಮೇಶ್, ಮಾದೇವೇಗೌಡ, ಪುಟ್ಟಸ್ವಾಮಿಗೌಡ, ರಾಜೇಗೌಡ ಸೇರಿದಂತೆ ಇತರರು ಇದ್ದರು.

ವರದಿ: ಬಸವರಾಜು ಎಸ್.ಹಂಗಳ