ಚಾಮರಾಜನಗರ: ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ವರ್ತಕರ ಕ್ಷೇತ್ರದಿಂದ ಸ್ಪರ್ಧಿಸಿರುವ ವೆಂಕಟರಾವ್(ಎಸ್,ಎನ್.ಪಿ) ಅವರು ಇಂದು ಚಾಮರಾಜನಗರದ ಎಪಿಎಂಸಿ ಮಂಡಿಯಲ್ಲಿ ವರ್ತಕ ಕ್ಷೇತ್ರದ ಮತದಾರರಲ್ಲಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರ ಏ.೧೭ ರಂದು ನಡೆಯಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ವರ್ತಕರ ಕ್ಷೇತ್ರದಿಂದ ಸ್ಪರ್ಧಿಸಿದ್ದು ವರ್ತಕರ ಪರವಾಗಿ ಕೆಲಸ ಮಾಡುವ ಇಚ್ಛೆಯುಳ್ಳವನಾಗಿದ್ದು ಎಪಿಎಂಸಿಯಲ್ಲಿ ವರ್ತಕರ ಪರವಾದ ಅಭಿವೃದ್ದಿ ಕೆಲಸಗಳನ್ನು ಮಾಡಲು ಬದ್ದನಾಗಿದ್ದೇನೆ, ಹೀಗಾಗಿ ಈ ಬಾರಿ ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಂಜುಂಡಸ್ವಾಮಿ, ತಪ್ರೇಜ್, ಫೈರೋಜ್, ರವಿ,ಬಾಬಣ್ಣ, ತರಕಾರಿ ಮಹೇಶ್, ಚಾಂದು, ಜಮೀಲ್,ಸೋಮು, ಸೇರಿದಂತೆ ಇತರರು ಹಾಜರಿದ್ದರು.
