ಚಾಮರಾಜನಗರ: ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಬೂದಿತಿಟ್ಟು ಸಿದ್ದರಾಜ ಪಿ. ಪರ ಶಾಸಕ ಸಿ.ಪುಟ್ಟರಂಗಶೆಟ್ಟಿ ತಾಲೂಕಿನ ಬ್ಯಾಡಮೂಡ್ಲು ಗ್ರಾಮದಲ್ಲಿ ರೈತಮುಖಂಡರನ್ನು ಭೇಟಿ ಮಾಡಿ, ಮತಯಾಚನೆ ಮಾಡಿದರು.
ನಂತರ ಅವರು ಮಾತನಾಡಿ, ಏ.೧೭ ರಂದು ನಡೆಯಲಿರುವ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ನಿರ್ದೇಶಕಸ್ಥಾನಕ್ಕೆ ಸ್ಪರ್ಧಿಸಿರುವ ಬೂದಿತಿಟ್ಟು ಸಿದ್ದರಾಜು ಅವರನ್ನು ಗೆಲ್ಲಿಸುವ ಮೂಲಕ ನಿಮ್ಮಗಳ ಸೇವೆಮಾಡಲು ಅವರಿಗೆ ಒಂದು ಅವಕಾಶ ನೀಡಬೇಕು ಎಂದು ರೈತಮುಖಂಡರಲ್ಲಿ ಮನವಿ ಮಾಡಿದರು.
ನಂತರ ಕಾಂಗ್ರೆಸ್ ಕಾರ್ಯಕರ್ತರು, ಚಿಕ್ಕಮೋಳೆ, ದೊಡ್ಡಮೋಳೆ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ಬ್ಯಾಡಮೂಡ್ಲು ನಾಗರಾಜು, ತಾಪಂ ಮಾಜಿಸದಸ್ಯ ಪುಟ್ಟಸ್ವಾಮಿ, ದೊಡ್ಡಸ್ವಾಮಿ, ಗ್ರಾಪಂ ಸದಸ್ಯ ರಾಜಣ್ಣ, ಉಪಾಧ್ಯಕ್ಷೆ ವನಜಾಕ್ಷಿ ಮರಿಸ್ವಾಮಿ, ರತ್ನಮ್ಮ, ಮಹದೇವಶೆಟ್ಟಿ, ಮಹೇಶ್, ಲಿಂಗರಾಜು ಪಿ ಸೇರಿದಂತೆ ಇತರರು ಹಾಜರಿದ್ದರು.