ಚಾಮರಾಜನಗರ: ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಬದನಗುಪ್ಪೆ ಕ್ಷೇತ್ರದ ಅಭ್ಯರ್ಥಿ ಎಂ.ಬಿ.ಗುರುಸ್ವಾಮಿ ಅವರ ಪರ ತಾಲ್ಲೂಕಿನ ಕೆಲ್ಲಂಬಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರು ಮತಯಾಚಿಸಿದರು.
ರಾಜ್ಯಎಸ್ಟಿ ಮೋರ್ಚಾ ಪ್ರಧಾನಕಾರ್ಯದರ್ಶಿ ಪು.ಶ್ರೀನಿವಾಸ ಮಾತನಾಡಿ,
ಶಾಸಕರು ಏ.೧೭ ರಂದು ನಡೆಯಲಿರುವ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ನಿರ್ದೇಶಕಸ್ಥಾನಕ್ಕೆ ಸ್ಪರ್ಧಿಸಿರುವ ಎಂ.ಬಿ.ಗುರುಸ್ವಾಮಿ ರೈತರಾಗಿದ್ದು, ರೈತರ ಕಷ್ಟಕಾರ್ಪಣ್ಯಗಳನ್ನು ಬಲ್ಲವರಾಗಿದ್ದಾರೆ ಅವರನ್ನು ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸುವಂತೆ ರೈತ ಮುಖಂಡರಲ್ಲಿ ಮನವಿ ಮಾಡಿದರು.
ಮುಖಂಡರಾದ ಬಿ.ಪಿ.ನಾಗರಾಜಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಡಿ.ನಾಗೇಂದ್ರ, ಗ್ರಾಪಂ ಸದಸ್ಯ ಡಿ.ಮಂಜುಮುತ್ತಿಗೆ, ದುಂಡಯ್ಯ, ಮಹದೇವಯ್ಯ, ರಾಜಣ್ಣ, ಬೆಂಜಮಿನ್, ಮುತ್ತಿಗೆದೊರೆ, ರಮೇಶ್, ಸುಗಂಧರಾಜ್, ನಾರಾಯಣನಾಯ್ಕ, ಮಹದೇವನಾಯ್ಕ, ಮಧುಆಚಾರ್, ನಾಗರಾಜು, ಮಲ್ಲೇಶ್ ಗೌಡ, ರಂಗಸ್ವಾಮಿ, ಸೇರಿದಂತೆ ಇತರರು ಹಾಜರಿದ್ದರು.