ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಅಲ್ಲ ಸಚಿವರುಗಳು ಭಾಗಿಯಾಗಿದ್ದರು. ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಆರ್ ಅಶೋಕ್, ಸಾರಿಗೆ ಬಸ್ ಗಳಲ್ಲಿ ಸಿಟ್ಟಿಂಗ್ ಕೆಪಾಸಿಟಿ ಮುಂದುವರಿಸಲಾಗುತ್ತದೆ. ಪಬ್, ಹೊಟೇಲ್ ಗಳು ಶೇ.೧೦೦ ರಷ್ಟು ಒಪನ್ ಇರುತ್ತವೆ. ಸಿನಿಮಾ, ಮಲ್ಟಿಪ್ಲೆಕ್ಸ್ ಗಳಲ್ಲಿ ಶೇ.೫೦ ರಷ್ಟು ಮಾತ್ರ ಅವಕಾಶ ನೀಡಲಾಗಿದೆ. ಹಾಗೆ ಮದುವೆಗೆ ೩೦೦ ಜನರಿಗೆ ಅವಕಾಶ ನೀಡಲಾಗಿದೆ ಎಂದರು.

: ಸಭೆಯ ನಂತರ ಮಾತನಾಡಿದ ಸಚಿವ ಆರ್. ಅಶೋಕ್ ರಾಜ್ಯದಲ್ಲಿ ೪ ಲಕ್ಷ ಎರಡು ಸಾವಿರ ಕೊರೋನಾ ಕೇಸ್ ಗಳಿವೆ. ಇದರಲ್ಲಿ ೧೧ ಸಾವಿರ ೩೧೮ ಮಕ್ಕಳ ಕೇಸ್ ಗಳಿವೆ. ರಾಜ್ಯದಲ್ಲಿ ಶೇ.೫.೫ ರಷ್ಟು ಕೇಸ್ ಇದ್ದು. ಮಕ್ಕಳ ಕೇಸ್ ಪ್ರಮಾಣ ಶೇ.೦.೧೬ ರಷ್ಟು ಇವೆ. ಸದ್ಯ ಶೇ.೨೦ ರಷ್ಟು ಕೇಸ್ ಗಳಿವೆ, ಹೀಗಾಗಿ ಸಧ್ಯ ರಾಜ್ಯದಲ್ಲಿ ಜಾರಿಯಲ್ಲಿರುವ ನೈಟ್ ಕರ್ಪ್ಯೂ ಅನ್ನು ಜನೆವರಿ ೩೧ ರಿಂದ ತೆರವು ಮಾಡಲಾಗುತ್ತಿದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳು

ಹೋಟೆಲ್, ಬಾರ್, ಕ್ಲಬ್ ಪೂರ್ಣ ಪ್ರಮಾಣದಲ್ಲಿ ಓಪನ್.

ಜಾತ್ರೆ, ಮಹೋತ್ಸವ, ಮೆರವಣಿಗೆ ಹಿಂದಿನಂತೆ ನಿಷೇಧ ಮುಂದುವರಿಕೆ,

ಕ್ರೀಡೆ ೫೦:೫೦ ಮುಂದುವರಿಕೆ, ಸ್ಟೆಡಿಯಂನಲ್ಲಿ ೫೦:೫೦ ಮುಂದುವರಿಕೆ,

ಸ್ವಿಮ್ಮಿಂಗ್ ಪೂಲ್ ೫೦:೫೦ ಮುಂದುವರಿಕೆ.

ಜನವರಿ ೩೧ ರಿಂದ ರಾತ್ರಿ ಕರ್ಫ್ಯೂ ರದ್ದು.

ಬೆಂಗಳೂರು ನಗರದಲ್ಲಿ ಜನವರಿ ೩೧ ರಿಂದ ಶಾಲೆ, ಕಾಲೇಜುಗಳು ಓಪನ್.

ಮೆಟ್ರೋ ರೈಲು ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ತಮ್ಮ ಆಸನ ಸಾಮರ್ಥ್ಯದಷ್ಟೇ ಪ್ರಯಾಣಿಕರೊಂದಿಗೆ ಕಾರ್ಯಾಚರಣೆ ನಡೆಸಬಹುದು.

ವಿವಾಹ ಸಮಾರಂಭಗಳಿಗೆ ತೆರೆದ ಸ್ಥಳದಲ್ಲಿ ೩೦೦ ಜನರಿಗೆ ಹಾಗೂ ಮುಚ್ಚಿದ ಸ್ಥಳಗಳಲ್ಲಿ ೨೦೦ ಜನರಿಗೆ ಅವಕಾಶ.

ಸರ್ಕಾರದ ಸಚಿವಾಲಯದಲ್ಲಿ ಶೇ. ನೂರರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸಬಹುದು.

ಧಾರ್ಮಿಕ ಸ್ಥಳಗಳಲ್ಲಿ ದರ್ಶನ ಹಾಗೂ ಸೇವೆಗೆ ಅವಕಾಶ ನೀಡಲಾಗುವುದು. ಶೇ. ೫೦ರ ಸಾಮರ್ಥ್ಯದಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗುವುದು.

ಕೇರಳ, ಮಹಾರಾಷ್ಟ್ರ, ಗೋವಾ ಗಡಿಗಳಲ್ಲಿ ತೀವ್ರ ನಿಗಾ ವಹಿಸಲು ಸೂಚಿಸಲಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಶೇ. ೨೫ ರಷ್ಟು ಹಾಸಿಗೆಗಳನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ.

ಕೋವಿಡ್ ಹೊರತು ಪಡಿಸಿ, ಇತರ ಚಿಕಿತ್ಸೆಗಳನ್ನು ಸಮರ್ಪಕವಾಗಿ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

ಇನ್ನು ತಜ್ಞರ ವರದಿ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ರಿಕವರಿ ರೇಟ್ ಹೆಚ್ಚಾಗಿದೆ. ಆದರೆ, ಸೋಂಕಿನ ತೀವ್ರತೆ ಹೆಚ್ಚಿಲ್ಲ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೂಡ ಕಡಿಮೆಯಿದೆ. ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ. ೨ಕ್ಕೆ ಇಳಿದಿದೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.