ಚಾಮರಾಜನಗರ: ಜಿಲ್ಲಾ ಪರಿಶಿಷ್ಟ ಪಂಗಡದ ವಿವಿದೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ನಗರದ ಸಂಘಧ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಮಹದೇವನಾಯಕ೨೦೨೧-೨೨ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.
ನಂತರ ೯ನೇವರ್ಷದ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮತನಾಡಿದ ಸಂಘದ ಅಧ್ಯಕ್ಷ ಮಹದೇವನಾಯಕ ಅವರು ನಮ್ಮ ಸಹಕಾರ ಸಂಘವು ಉತ್ತಮವಾಗಿ ನಡೆದುಕೂಂಡು ಬರುತ್ತಿದ್ದು ಸಂಘದಲ್ಲಿ ಸುಮಾರು ೪೩೦ ಷೇರುದಾರರನ್ನು ಹೊಂದಿದ್ದು ನಿಶ್ಚಿತ ಠೇವಣಿ ೧,೫೦,೦೦೦-ರೂ ಸಂಗ್ರಹಿಸಲಾಗಿದ್ದು ಸಂಘವು ೩೦,೦೦೦ರೂ.ಗಳ ನಿವ್ವಳ ಲಾಭ ಗಳಿಸಿದೆ.
ಪ,ಪಂಗಡದ ಸಹಕಾರ ಸಂಘವು ಗ್ರಾಮೀಣ ಪ್ರದೇಶದ ಜನರಿಗೆ,ಬೀದಿಬದಿ ವ್ಯಾಪಾರಿಗಳು,ತಳ್ಳು ಗಾಡಿ ವ್ಯಾಪಾರಿಗಳು ,ಸಣ್ಣ ಉದ್ಯಮ ನಡೆಸುವಂತಹವರುಗಳ ಆರ್ಥಿಕ ಬಲವರ್ಧನೆಗೆ ೩೦ಲಕ್ಷರೂ ಆರ್ಥಿಕವಾಗಿ ಸಾಲಸೌಲಭ್ಯ ನೀಡಿ ಸಹಕಾರ ತತ್ವದಡಿ ಸಂಘವು ಸರ್ವಸದಸ್ಯರ ಸಲಹೆ ಸಹಕಾರದಿಂದ ೯ನೇ ವರ್ಷಪೂರ್ಣಗೊಳಿಸಿದೆ.
ಮುಂದಿನ ದಿನಗಳಲ್ಲಿ ನಡೆಸಿ ಎಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಮತ್ತೆಷ್ಟು ಸಾಲಸೌಲಭ್ಯ ವಿತರಿಸಿ ಸರ್ವರನ್ನು ಮುಖ್ಯ ವಾಹಿನಿಗೆ ತರುವಂತಹ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಅಲ್ಲದೆ ಇತ್ತೀಚೆಗೆ ಸರ್ಕಾರದ ಆದೇಶದ ಮೇರೆಗೆ ಅಕ್ಟೋಬರ್ ೨ರಂದು ಯಶಸ್ವಿನಿ ಯೋಕನೆ ಜಾರಿಗೊಳಿಸಿರುವ ಪ್ರಯುಕ್ತ ಅನಾರೋಗ್ಯಪೀಡಿತರಿಗೆ ಶಸ್ತ್ರಚಿಕಿತ್ಸೆಗೆ ಸುಮಾರು ೫ ಲಕ್ಷದವರೆಗೆ ಉಚಿತವಾಗಿ ನೆರವನೀಡಿರುವುದನ್ನು ಸದಸ್ಯರುಗಳು ಸದುಪಯೋಗಪಡಿಸಿಲೊಳ್ಳಬೇಕೆಂದು ತಿಳಿಸಿದರು.
ಸಂಘದ ಆರ್ಥಿಕ ಬಲವರ್ಧನೆಗಾಗಿ ಸಾಲಸೌಲಭ್ಯವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ೨ಕೋಟಿ.ರೂ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್. ರಾಘವೇಂದ್ರ, ವೆಂಕಟರಾಮಣ್ಣನಾಯಕ ರವಿ, ಎ.ಮಹದೇವನಾಯಕ,ಕಂದಹಳ್ಳಿ ಕಿರಣ್ ಸೇರಿದಂತೆ ಸಂಘದ ನಿರ್ದೇಶಕರುಗಳು ಇದ್ದರು.