ಬೆಟ್ಟದಪುರ: ಪಿರಿಯಾಪಟ್ಟಣ ತಾಲ್ಲೂಕಿನ ಎನ್. ಶಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು.ಈ ಹಿಂದೆ ಉಪಾಧ್ಯಕ್ಷರಾಗಿದ್ದ ಜ್ಯೋತಿ ರಾಜೀನಾಮೆ ನೀಡಿದ್ದರಿಂದ
ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ನಂದಿಪುರದ ಗ್ರಾಮದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಾವಿತ್ರಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಮಹೇಶ್ ರವರು ಮಾಡಿದರು.
. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎನ್. ಎಂ . ಮಂಜುನಾಥ್ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜು ,ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ, ಪಲ್ಲವಿ, ಜವರಮ್ಮ ,ಕಲ್ಪನಾ .ಕೆ ಪಿ , ಎನ್ ಜಿ ಗೌಡಯ್ಯ ಬಸವರಾಜು ಎನ್. ಪಿ. ಶಿಲ್ಪಾ ,ಜ್ಯೋತಿ ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಜಶೇಖರ್,ಕರವಸೂಲಿಗಾರ ದೊಡ್ಡೇಗೌಡ , ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಸ್ ಎಸ್ ಚಂದ್ರೇಗೌಡ , ಕಾಂಗ್ರೆಸ್ ಮುಖಂಡರಾದ ನಂದೀಪುರ ದಿನೇಶ್ , ಸಣ್ಣ ಮೊಗೇಗೌಡ ,ವಿಜಯ್ ಕುಮಾರ್ , ಸತೀಶ್, ಮಲ್ಲೇಶ್ ,ಶಿವಣ್ಣ,ತುಳಸಿ ರಾಮೇಗೌಡ, ವಾಸು ಹಾಜರಿದ್ದರು.