ಚಾಮರಾಜನಗರ : ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹೆಡಿಯಾಲ ಉಪ ವಿಭಾಗ ವ್ಯಾಪ್ತಿಯ ಮೊಳೆಯೂರು ವಲಯದಲ್ಲಿ ಕೆರೆಯ ಕೆಸರಿನಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಆನೆಮರಿಯನ್ನು ಅರಣ್ಯಾಧಿಕಾರಿಗಳು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಡಿಯಾಲ ಉಪ ವಿಭಾಗದ ಮೊಳೆಯೂರು ವಲಯದಲ್ಲಿರುವ ಮೀನುಕಟ್ಟೆ ಕೆರೆಯ ಕೆಸರಿನಲ್ಲಿ ಶನಿವಾರ ಸಂಜೆಯ ವೇಳೆಗೆ ಆನೆಮರಿಯೊಂದು ಸಿಲುಕಿ ಜೀವನ್ಮರಣ ಜೊತೆ ಹೋರಾಟ ನಡೆಸುತ್ತಿತ್ತು. ಕೆರೆಯ ಕೆಸರಿನಲ್ಲಿ ಆನೆ ಮರಿ ಸಿಲುಕಿರುವ ಮಾಹಿತಿ ಪಡೆದ ಹೆಡಿಯಾಲ ಉಪ ವಿಭಾಗದ ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ ಜೆ.ಸಿಬಿ ಯಂತ್ರದಿಂದ ಕೆರೆಯ ಕೆಸರಿನಲ್ಲಿ ಸಿಲುಕಿದ್ದ ಆನೆಮರಿಯನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿನೊಳಗೆ ಬಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಆರ್.ನಟೇಶ್, ವಲಯ ಅರಣ್ಯಾಧಿಕಾರಿ ಶಶಿಧರ್, ಸಚಿನ್, ಪುಟ್ಟರಾಜು ಹಾಗೂ ಇತರರು ಇದ್ದರು.