ತಿ.ನರಸೀಪುರ ಕ್ಷೇತ್ರದ :ಹಿರಿಯ ರಾಜಕಾರಿಣಿ,ದಲಿತ ಪ್ರಭಾವಿ ನಾಯಕ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರ ಸಂಪುಟದಲ್ಲಿ ಸಚಿವ ಸ್ಥಾನ ದೊರೆಕಿರುವದು ಹೆಚ್ಚು ಅರ್ಥಪೂರ್ಣವೂ ಸದ್ಯದ ತಳಸಮುದಾಯಗಳ ಪರಿಸ್ಥಿತಿಗೆ ಅತ್ಯಗತ್ಯ ವೂ ಆಗಿದೆ.. ಒಬ್ಬ ಬುದ್ದಿಜೀವಿ ಪ್ರಬುದ್ಧ ,ಮುತ್ಸದ್ಧಿ, ಸಂಯಮ , ಸ್ಥಿತಪ್ರಜ್ಞ ನಡೆನುಡಿ ವ್ಯಕ್ತಿತ್ವದ ನಾಯಕತ್ವ ಕ್ಕೆ ಇಂಬುಕೊಟ್ಟಂತೆಯೂ ಆಗಿದೆ

ಸಂವಿಧಾನದ ಮೂಲ ಆಶೋತ್ತರಗಳ ಈಡೇರಿಕೆಗಾಗಿ ಸದಾ ಸಿದ್ಧರಿರುವ ಅಭಿವೃದ್ಧಿ ಹರಿಕಾರ ಮತ್ತು ರಸ್ತೆಗಳ ರಾಜ ಎಂದು ಪ್ರಖ್ಯಾತರಾದ ಡಾ. ಹೆಚ್ ಸಿ ಮಹದೇವಪ್ಪರಿಗೆ ತಮ್ಮ ಬಹುಕಾಲದ ಆತ್ಮೀಯತೆ ಯ ಪ್ರತೀಕವಾಗಿ ಶ್ರೀ ಸಿದ್ದರಾಮಯ್ಯ ಅವರು ತಮ್ಮ ಸಂಪುಟದಲ್ಲಿ ಸಚಿವ ಸ್ಥಾನ ದೊರಕಲು ಕಾರಣಕರ್ತ ರಾಗಿದ್ದಾರೆ ಎಂಬುದು ಎಷ್ಟು ಪ್ರಚಲಿತ ವಿಚಾರವೋ
..ಡಾ.ಎಚ್ ಸಿ ಎಂ ಕೂಡ ತಾವು ಮುಖ್ಯ ಮಂತ್ರಿ ಸ್ತಾನಕ್ಕೆ ಎಲ್ಲಾ ಅರ್ಹ ತೆಗಳನ್ನು ಹೊಂದಿದ್ದರೂ ಸ್ಪರ್ದೆ ತೋರದೆ ಸಿದ್ದರಾಮ ಯ್ಯರವರಿಗೇ ಬೆಂಬಲವಾಗಿ ನಿಂತು ಸ್ನೇಹಾಭಿಮಾನ ಮತ್ತು ಗೌರವ ತೋರಿರುವುದೂ ಅಷ್ಟೇ ಖಚಿತ ವಿಚಾರವೇ ಹೌದು
.
ಮಹದೇವಪ್ಪರಿಗೆ ನಾಲ್ಕು ದಶಕಗಳಿಗೂ ಹೆಚ್ಚು ರಾಜಕೀಯ ಅನುಭವವಿದ್ದು,ಅವರು ಬುದ್ದ,ಬಸವ,ಅಂಬೇಡ್ಕರ್ ರ ತತ್ತ್ವ ಸಿದ್ಧಾಂತಗಳ ನಿರಂತರ ಅಧ್ಯಯನದಿಂದ ಶಿಸ್ತು, ಸಂಯಮದ ವ್ಯಕ್ತಿ ತ್ವ ದವರಾಗಿ ರೂಪುಗೊಂಡಿರುವುದಲ್ಲದೆ ಜ್ಞಾನಶೀಲ,ದೂರದೃಷ್ಟಿಯ ರಾಜಕಾರಿಣಿಯೂ ಆಗಿದ್ದಾರೆ ..
ಅವರು ಬಹುಕಾಲದಿಂದಲೂ ದಲಿತ ಚಳವಳಿ ,ರೈತ ಚಳುವಳಿ, ಅಹಿಂದ ಹೋರಾಟಗಳಿಗೆ ಬೆನ್ನೆಲುಬ ಆಗಿದ್ದು,ದಲಿತ ಮತ್ತು ತಳ ಸಮುದಾಯಗಳ ಏಳಿಗೆಗೆ ಶ್ರಮಿಸುತ್ತಾ ಜನಾನುರಾಗಿ ಮತ್ತು ಚಾಲಕ ಶಕ್ತಿಯಾಗಿರುವ ಅವರು ಆರು ಚುನಾವಣೆಗಳಲ್ಲಿ ಗೆದ್ದು ನಾಲ್ಕನೇ ಬಾರಿಗೆ ಸಚಿವರಾಗಿದ್ದು,ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಲೋಕೊಪಯೋಗಿ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಅವರು ಭವಿಷ್ಯದ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಅರ್ಹತೆ ಮತ್ತು ಸಾಮರ್ಥ್ಯವನ್ನು ಪಡೆದಿರುವುದು ಗುಟ್ಟು ವಿಚಾರವೇನಲ್ಲ..ಆದರೆ ಮಾನ್ಯ ಶ್ರೀ ಸಿ ಎಂ ಸಿದ್ದರಾಮಯ್ಯರವರು ಮತ್ತು ಡಾ.ಹೆಚ್ ಸಿ ಮಹಾದೇವಪ್ಪ ಇಬ್ಬರೂ ಒಂದೇ ಜಿಲ್ಲೆಯ ವರಾದ ಕಾರಣಕ್ಕೆ ಎಲ್ಲಾ ಅವಕಾಶಗಳೂ ಮೊದಲಿಗೆ ಸಿ ಎಂ ಸಾಹೇಬ ರಿಗೇ ದೊರಕುತ್ತಿದೆ . ಹೆಚ್ ಸಿ ಎಂ ಅವರ ಹಿರಿತನ,ಪಕ್ಷನಿಷ್ಠೆಯನ್ನು ಪರಿಗಣಿಸಿ ಪ್ರಸ್ತುತ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನಾದರೂ ನೀಡಬೇಕಿತ್ತು ಆದರೆ ಒಂದೇ ಜಿಲ್ಲೆಗೆ ಮುಖ್ಯ ಮಂತ್ರಿ ಉಪಮುಖ್ಯಮಂತ್ರಿ ಎರಡೂ ಎರಡೂ ಸ್ಥಾನ ಗಳೂ ಒಟ್ಟಿಗೇ ಲಭಿಸಲಾಗದು , ಇಲ್ಲೂ ಹೆಚ್ ಸಿ ಎಂ ವಂಚಿತರೇ .
ದಲಿತ ರಾಜಕಾರಣಿಗಳಲ್ಲಿ ಕೆಲವರಿಗೆ ಜನಾಂಗೀಯ ಕಾಳಜಿ, ಬದ್ದತೆ ಮತ್ತು ವರ್ಚಸ್ಸು ಇಳಿಮುಖವಾದರೆ ಮಹದೇವ ಪ್ಪರ ವರ್ಚಸ್ಸು ಬದ್ದತೆ ಏರುಮುಖ ಕಾಣುತ್ತಿದೆ ..ಇದನ್ನೆಲ್ಲಾ ಪರಿಗಣಿಸಿ ಮುಂದಿನ ದಿನಗಳಲ್ಲಿ ಮಹದೇವಪ್ಪ ಅವರಿಗೆ ಅರ್ಹತೆಗೆ ತಕ್ಕುದಾದ ಉನ್ನತ ಹುದ್ದೆ ಯನ್ನು ರಾಷ್ಟ್ರೀಯ ಕಾಂಗ್ರೆಸ್ ನಾಯಕರು ನೀಡಬೇಕು ಇಲ್ಲದಿರೆ ದಲಿತರಿಗೆ ದಲಿತರಿಗೆ ಮಾಡುವ ವಿದ್ರೋಹ ಹೆಚ್ಚಾಗುತ್ತಲೇ ಹೋಗುತ್ತದೆ