ತನ್ನ  ವಿಭಿನ್ನ ಕಾರ್ಯಕ್ರಮಗಳ‌ ಮೂಲಕವೇ ಗುರುತಿಸಿಕೊಂಡಿರುವ ಜೀ ಕನ್ನಡ ವಾಹಿನಿಯಲ್ಲಿ ಮತ್ತೊಂದು ನೂತನ ಧಾರಾವಾಹಿ  ಅಮೃತಧಾರೆ  ಮೇ 29 ರಿಂದ ಸಂಜೆ  7ಕ್ಕೆ ಪ್ರಸಾರವಾಗುತ್ತಿದೆ. 

ಸರಿಗಮಪ, ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಗಳ ಜೊತೆಗೆ ದೈನಂದಿನ ಧಾರವಾಹಿಗಳಾದ ಗಟ್ಟಿಮೇಳ, ಪಾರು, ಪುಟ್ಟಕ್ಕನ ಮಕ್ಕಳ, ಹಿಟ್ಲರ್ ಕಲ್ಯಾಣಂಥ ವಿಭಿನ್ನ ಪ್ರಯತ್ನಗಳ ಮೂಲಕ ಜನಮನ ಗೆದ್ದಿರುವ ಜೀ಼ ಕನ್ನಡ ವಾಹಿನಿ ಇದೀಗ ಮೇ.೨೯ರಿಂದ ಅಮೃತಧಾರೆ ಎಂಬ ಹೊಸ ಕಥೆಯನ್ನು ತನ್ನ ವೀಕ್ಷಕರ ಮುಂದಿಡುತ್ತಿದೆ.
ಎರಡು ಜೀವಗಳನ್ನ ಬೆಸೆಯೋ ಮದುವೆ ಎನ್ನುವುದು ಆಗೋ ವಯಸ್ಸಲ್ಲೇ ಆಗಬೇಕು ಅನ್ನೋದು ಸಮಾಜದ ನಿಲುವು‌
45 ವರ್ಷದ ಗೌತಮ್ ದಿವಾನ್ ಒಬ್ಬ ಉದ್ಯಮಿ ಮತ್ತು 35 ವರ್ಷದ ಭೂಮಿಕಾ ಮದ್ಯಮ ವರ್ಗದ ವಿದ್ಯಾವಂತ ಮಹಿಳೆ. ಇವರಿಬ್ಬರೂ ತಮ್ಮ ಕುಟುಂಬಕ್ಕೋಸ್ಕರ ಸರ್ವಸ್ವವನ್ನೇ ತ್ಯಾಗ ಮಾಡಲು ಸಿದ್ದರಾಗಿದ್ದಾರೆ. ಈ ಒಂಟಿ ಜೀವಗಳೆರಡು ಒಂದಾದರೆ ಅದೇ ಒಲವಿನ ಅಮೃತಧಾರೆ. ಅನ್ನೋದು ಈ ಧಾರವಾಹಿಯ ಕಾನ್ಸೆಪ್ಟ್. ಪ್ರೊಮೋದಲ್ಲಿ ನಾಯಕ ನಾಯಕಿಯ ಕೋಳಿ ಜಗಳ ವೀಕ್ಷಕರಲ್ಲಿ ಕೌತುಕ ಸೃಷ್ಟಿಸಿದೆ. ಇಬ್ಬರೂ ಹೊಂದಿಕೊಂಡಿದ್ದರೆ ಅದೊಂದು ಬೊಂಬಾಟ್ ಕಥೆ.. ಅದೇ ಇಬ್ರು ಕಿತ್ತಾಡಿಕೊಂಡಿದ್ದರೆ ಅದು ಬೇರೇನೆ ಕಥೆ. ಹೀಗೆ ಸದಾ ಹಾವು ಮುಂಗುಸಿ ಥರ ಕಿತ್ತಾಡ್ತಿರೋ ನಾಯಕ, ನಾಯಕಿ ಒಲವಿನ ಸುಳಿಯಲ್ಲಿ ಸಿಕ್ಕಿ ಬೀಳ್ತಾರಾ.. ಇವರಿಬ್ರೂ ಒಂದಾಗುತ್ತಾರಾ ಎನ್ನುವ ಕುತೂಹಲವನ್ನು ವೀಕ್ಷಕರಲ್ಲಿ ಹುಟ್ಟಿಸಿರುವ ಈ ಸೀರಿಯಲ್ ಜೀ ಕನ್ನಡದ ಮತ್ತೊಂದು ಅದ್ದೂರಿ ಧಾರಾವಾಹಿಯಾಗಲಿದೆ.
ಹೆಸರಾಂತ ನಟ ರಾಜೇಶ್ ನಟರಂಗ ನಾಯಕರಾಗಿ ಮತ್ತು ನಟಿ ಛಾಯಾಸಿಂಗ್ ನಾಯಕಿಯಾಗಿ ನಟಿಸುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಚಿತ್ರಾ ಶೆಣೈ, ಸಿಹಿ ಕಹಿ ಚಂದ್ರು, ವನಿತಾ ವಾಸು, ಅಮೃತ ನಾಯಕ್, ಶಶಿ ಹೆಗ್ಡೆ ಮತ್ತು ಕಿರುತೆರೆಯಲ್ಲಿ ಮಿಂಚಿದ ಸಾರಾ ಅಣ್ಣಯ್ಯ ಮುಂತಾದ ಹಿರಿ, ಕಿರಿಯ ಕಲಾವಿದರು ಅಭಿನಯಿಸುತ್ತಿದ್ದಾರೆ.
ಈ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿಯನ್ನು ಕೀರ್ತಿ ಅಕ್ಷಯ್ ಸಂಸ್ಥೆ ಹೊತ್ತಿದ್ದು. ಬೆಳ್ಳಿತೆರೆಯಲ್ಲಿ ರಾಕಿ ಭಾಯ್ ಗೆ ಆಕ್ಷನ್ ಕಟ್ ಹೇಳಿದ ಮಹೇಶ್ ರಾವ್ ಈ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಉತ್ತಮ್ ಮಧು ನಿರ್ದೇಶಿಸಲಿದ್ದಾರೆ. ಕಿರುತೆರೆಯ ಹಲವಾರು ಹಿಟ್ ಸಾಂಗ್‌ಗಳನ್ನ ನೀಡಿರೋ ಸುನಾದ್ ಗೌತಮ್ ಶೀರ್ಷಿಕೆ ಗೀತೆಗೆ ಸಂಗೀತ ನೀಡಿದ್ದು, ಸುಧೀಂದ್ರ ಭಾರದ್ವಾಜ್, ಚೇತನ್ ಸೊಲಗಿ ಸಾಹಿತ್ಯ ರಚಿಸಿದ್ದಾರೆ.