ಗುಂಡ್ಲುಪೇಟೆ: ರೈತ ಸಂಘದ ರಾಜ್ಯ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅಮ್ಮನಪುರ ಮಲ್ಲೇಶ್ ಈ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಾಲ್ಲೂಕು ರೈತ ಸಂಘದ ವತಿಯಿಂದ ಎಚ್ಚರಿಕೆ ನೀಡಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಸಂಚಾಲಕ ಕಡಬೂರು ಮಂಜುನಾಥ್, ಅಮ್ಮನಪುರ ಮಲ್ಲೇಶ್ ಈ ಹಿಂದೆ ರಾಜ್ಯ ರೈತ ಸಂಘದಿಂದ ಬೆಳೆದು ಬಂದು ಈಗ ರೈತ ಸಂಘದ ಬಗ್ಗೆ ನೀಚ ಮಾತುಗಳನ್ನು ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲೇಶ್ ಅವರು ಈಗ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಕೆಲಸವನ್ನು ಮಾಡಿಕೊಂಡು, ವರ್ಗಾವಣೆಯ ದಂಧೆಯಲ್ಲಿ ತೊಡಗಿಕೊಂಡು ಭ್ರಷ್ಟತೆಯಲ್ಲಿ ಮುಳುಗಿದ್ದಾರೆ. ಭಾರತೀಯ ಜನತಾ ಪಾರ್ಟಿಯಿಂದ ಈ ಕೂಡಲೇ ಅವರನ್ನು ಉಚ್ಛಾಟಿಸಬೇಕು. ಜೊತೆಗೆ ಮುಂದಿನ‌ ದಿನಗಳಲ್ಲಿ ಇಂಥ ಹೇಳಿಕೆ ನೀಡದಂತೆ ಮಲ್ಲೇಶ್ ಸಂಸ್ಕಾರ ಕಲಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಡ್ರಳ್ಳಿ ಮಹದೇವಪ್ಪ, ಹೊಸೂರು ಮಹೇಶ್, ಆಲಳ್ಳಿ ಮಹೇಶ್, ದಡದಳ್ಳಿ ಮಹೇಶ್, ಕುಣಗಳ್ಳಿ ನಾಗರಾಜ್, ಕಂದೇಗಾಲ ವೃಷಭೇಂದ್ರ, ಕೆರೆ ಕಣವಿ ಹುಲುಗನಾಯಕರು ಸೇರಿದಂತೆ ಇತರರು ಹಾಜರಿದ್ದರು.

By admin