ಮೈಸೂರು- ಜ೨೪ ಮೈಸೂರು ನೇರ, ನಿಷ್ಠುರ, ನಡೆ, ನುಡಿಗಳಿಂದ ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಯನ್ನು ಹೊಗಲಾಡಿಸಲು ಶ್ರಮಿಸಿದ ಮಹಾನ್ ವಚನಗಾರ ನಿಜಶರಣ ಅಂಬಿಗರ ಚೌಡಯ್ಯ ಎಂದು ಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ್ ಅಭಿಪ್ರಾಯಪಟ್ಟರು.ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪರ್ಚಾನೆ ಸಲ್ಲಿಸಿ ಅವರು ಮಾತನಾಡಿದರು. ‘ಚೌಡಯ್ಯ ಜಾತ್ಯತೀತ, ಧರ್ಮಾತೀತ, ಮತಾತೀತ ಸಮಾಜ ನಿರ್ಮಾಣದ ಆಶಯ ಹೊಂದಿದ್ದವರು. ಅನಿಷ್ಟ ಪದ್ಧತಿಗಳ ವಿರುದ್ಧ ದನಿ ಎತ್ತಿದವರು. ಯಾವ ಕಾಯಕವೂ ಮೇಲಲ್ಲ; ಯಾವುದೂ ಕೀಳಲ್ಲ. ಎಲ್ಲವೂ ಸಮಾನವಾದುದು ಎಂಬ ವೃತ್ತಿ ಗೌರವ ಎತ್ತಿ ಹಿಡಿದವರು’ ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಗೋಪಣ್ಣ, ಅಶ್ವಥ್, ದಾಸಪ್ಪ,ಬಸವರಾಜು ರಿಯಲ್ ಎಸ್ಟೇಟ್, ಜೋಗಪ್ಪ, ಲೋಕೆಶ್ ಜಯಸಿಂಹ, ಗಂಗು ಲೋಕೇಶ್ ಮುಂತಾದವರು ಹಾಜರಿದ್ದರು.