ಸರಗೂರು ತಾಲ್ಲೂಕು ಬಿ.ಮಟಕೆರೆ ಗ್ರಾಮ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಕುರ್ಣೆಗಾಲ ಬೆಟ್ಟಸ್ವಾಮಿ ನೇತೃತ್ವದಲ್ಲಿ ನಡೆದ ವಿಶ್ವ ಜ್ಞಾನಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಬಿ.ಆರ್.ಅಂಬೇಡ್ಕರ ಅವರ ೧೩೧ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಭೀಮ್ ರಾವ್ ಅವರ ಭಾವಚಿತ್ರಕ್ಕೆ ಬೆಟ್ಟ ಸ್ವಾಮಿ ಅವರು ಪುಷ್ಪಾರ್ಚನೆ ಸಲ್ಲಿಸಿದರು.


ನಂತರ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಅಭಿವೃದ್ಧಿ ಹರಿಕಾರಕರಾದ ಅಂಬೇಡ್ಕರ ಅವರು ಸಮಾನತೆಗಾಗಿ ಜೀವನ ವೀಡಿ ದುಡಿದರು. ಇಂಥ ಮಹಾನಾಯಕರು ಭಾರತೀಯರಿಗೆ ಆದರ್ಶಪ್ರಾಯವಾಗಲಿದ್ದಾರೆ ಎಂದು ಗುಣಗಾನ ಮಾಡಿದರು.


ದಲಿತ ಮುಖಂಡ ಗ್ರಾಮೀಣ ಮಹೇಶ್ ಮಾತನಾಡಿದರು. ಚಲುವಕೃಷ್ಣ, ಚಂದ್ರು ಹಾದನೂರು. ದಾಸೇಗೌಡ, ಅನಿಲ್, ರಂಗರಾಜು ಹಾಜರಿದ್ದರು.