ಗುಂಡ್ಲುಪೇಟೆ: ವಿಶ್ವ ಜ್ಞಾನಿಯಾಗಿ ಶೋಷಿತ ವರ್ಗಗಳಿಗೆ ಸಮಾನ ಸ್ಥಾನಮಾನ ಕೊಟ್ಟ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬದಲಾವಣೆ ಜೊತೆಗೆ ದೇಶದಲ್ಲಿ ಹಲವು ಸುಧಾರಣೆ ನಿಟ್ಟಿನಲ್ಲಿ ಕೆಲಸ ಮಾಡಿದ ಅಂಬೇಡ್ಕರ್ ಸರ್ವಕಾಲಕ್ಕೂ ನಿಜವಾದ ಭಾರತದ ರತ್ನವಾಗಿರುತ್ತಾರೆ ಎಂದು ಅಭಿಪ್ರಾಯ ಪಟ್ಟರು.
ಸಾಧನೆ ಮಾಡುವುದಿದ್ದರೆ ಅದು ಶಿಕ್ಷಣದ ಮೂಲಕವೇ ಆಗಬೇಕು ಎಂಬುದನ್ನು ಅಂಬೇಡ್ಕರ್ ಸಮಾಜಕ್ಕೆ ಸಾರಿದ್ದರು. ದೇಶದ ಎಲ್ಲಾ ಕ್ಷೇತ್ರಗಳ ಸುಧಾರಣೆ ನಿಟ್ಟಿನಲ್ಲಿ ಅವರು ಮಹತ್ವದ ಹೆಜ್ಜೆ ಇರಿಸಿದ್ದರ ಫಲ ಈಗ ಸಿಗುತ್ತಿದೆ. ಈಗ ಭಾರತ ದೇಶ ವಿಶ್ವದ ಗಮನ ಸೆಳೆಯುವ ಮಟ್ಟಕ್ಕೆ ಬೆಳೆದಿದೆ. ಇದಕ್ಕೆ ಅವರು ಹಾಕಿದ ಪರಿಶ್ರಮ, ದೂರದೃಷ್ಟಿ ಚಿಂತನೆಗಳು ಕಾರಣ. ಅಂಬೇಡ್ಕರ್ ತಮ್ಮೆಲ್ಲಾ ಶಕ್ತಿ, ಸಾಮಾಥ್ರ್ಯಗಳನ್ನು ದೇಶದ ಹಿತಕ್ಕಾಗಿ ಧಾರೆ ಎರೆದರು. ಇದೇ ಕಾರಣಕ್ಕೆ ಅವರಿಗೆ ಇಂದು ವಿಶ್ವದಾದ್ಯಂತ ಗೌರವ ಸಿಗುತ್ತಿದೆ. ಸಮಾಜದ ಎಲ್ಲಾ ವರ್ಗದ ಜನರು ಇರುವಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸುತ್ತಿರುವುದಕ್ಕೆ ಅಂಬೇಡ್ಕರ್ ಕಾರಣ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ರದ್ದತಿ ಅವರ ಆಶಯವಾಗಿತ್ತು. ಕೇಂದ್ರ ಸರ್ಕಾರ ಅದನ್ನು ಸಾಕಾರಗೊಳಿಸಿದೆ ಎಂದರು.
ಮುಖ್ಯ ಭಾಷಣಕಾರರಾದ ಡಾ.ಪಿ.ದೇವರಾಜು ಮಾತನಾಡಿ, ವಿದೇಶಗಳಲ್ಲಿ 44, ದೇಶದಲ್ಲಿ 550 ಅಧ್ಯಯನ ಪೀಠಗಳಲ್ಲಿ ಅಂಬೇಡ್ಕರ್ ಕುರಿತ ನಿರಂತರವಾಗಿ ಅಧ್ಯಯನ ನಡೆಯುತ್ತಿದೆ. ಮೈಸೂರು ವಿವಿವೊಂದರಲ್ಲೇ ಅಂಬೇಡ್ಕರ್ ಕುರಿತು 150 ಪ್ರಬಂಧಗಳು ಮಂಡನೆಯಾಗಿವೆ. ಇದರಿಂದ ಅಂಬೇಡ್ಕರ್‍ರ ಸಮಾಜಕ್ಕೆ ನೀಡಿದ ಕೊಡುಗೆ ಏನೆಂಬುದು ತಿಳಿಯುತ್ತದೆ. ದೇಶದ ಜನರು ಶಾಂತಿ, ಸಂಯಮ, ಅಖಂಡತೆಯಿಂದ ಬದುಕಲು ಅಂಬೇಡ್ಕರ್ ಕಾರಣರಾಗಿರುವುದಕ್ಕೆ ಇಂದು ಹಳ್ಳಿಯಿಂದ ವಿಶ್ವಸಂಸ್ಥೆವರೆಗೆ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದರು.
ಅಂಬೇಡ್ಕರ್ ಪ್ರಜಾಪ್ರಭುತ್ವದ ಸಂಸ್ಥಾಪಕರಾಗಿದ್ದು, ಯಾವುದೇ ತಾರತಮ್ಯ ಇಲ್ಲದೇ ಎಲ್ಲರೂ ಸಮಾನ ಅವಕಾಶ ನೀಡಿದ್ದರು. ಎಲ್ಲಾ ವರ್ಗದ ಜನರಿಗೆ ಅವಕಾಶ ಕೊಡಿಸುವ ಪ್ರಯತ್ನ ಮಾಡಿದರು. ಆದರೆ ಅಂತವರನ್ನು ಅಸ್ಪø್ಪಶ್ಯರ ನಾಯಕ ಎಂದು ಬಿಂಬಿಸುವುದು ಸರಿಯಲ್ಲ. ಅವರ ಜೀವನ ಅರ್ಥ ಮಾಡಿಕೊಳ್ಳದೇ ಆಚರಿಸುವ ಜಯಂತಿಗೆ ಅರ್ಥ ಬರುವುದಿಲ್ಲ ಎಂದರು.
ಸಂವಿಧಾನ ಯಥಾವತ್ತಾಗಿ ಅನುμÁ್ಠನ ಆಗಬೇಕು ಎಂದು ಅಂಬೇಡ್ಕರ್ ಬಯಸಿದ್ದರು. ಇಲ್ಲದಿದ್ದರೆ ಅಸಮಾನತೆ ಅನುಭವಿಸಿದ ಜನ ನಿಮ್ಮ ವಿರುದ್ದ ತಿರುಗಿ ಬೀಳೋ ಸನ್ನಿವೇಶ ನಿರ್ಮಾಣ ಆಗುತ್ತದೆ. ಇದಕ್ಕೆ ನಾನು ಮುಂದಾಳಾಗುತ್ತೇನೆ ಎಂದು ಎಚ್ಚರಿಸಿದ್ದರು. ವಿಶ್ವಗುರು ಬಸವಣ್ಣ ಸಮ ಸಮಾಜದ ಸಲುವಾಗಿ ಅನುಭವ ಮಂಟಪ ನಿರ್ಮಾಣ ಮಾಡಿದ್ದರು. ಇದು ಸಾಧ್ಯವಾಗದಕ್ಕೆ ಬೇಸರಗೊಂಡು ಅಧಿಕಾರವನ್ನೇ ತ್ಯಜಿಸಿದ್ದರು ಎಂದರು ತಿಳಿಸಿದರು.
ವಕೀಲ ಕಾಂತರಾಜು ಆಕ್ಷೇಪ: ಕಾರ್ಯಕ್ರಮದ ವೇಳೆ ಅಂಬೇಡ್ಕರ್ ರಾಜ್ಯಸಭೆಗೆ ಆಯ್ಕೆಯಾಗಲು ಸಂಘ ಪರಿವಾರ ಕಾರಣ ಎಂಬ ಎಸ್ಸಿ, ಎಸ್ಟಿ ಜಾಗೃತಿ ಸಮಿತಿ ಸದಸ್ಯ ಅಗತಗೌಡನಹಳ್ಳಿ ಬಸವರಾಜು ಮಾತಿಗೆ ವಕೀಲ ಕಾಂತರಾಜು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರಕ್ಕೆ ಸ್ಪಷ್ಟನೆ ಕೊಡುವ ವಿಷಯಕ್ಕೆ ಗೊಂದಲ ಉಂಟಾಗಿತ್ತು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಕುರಿತು ಅಂಬೇಡ್ಕರ್ ವೇಷಧಾರಿ ಪುಟಾಣಿ ಬಾಲಕ ತೇಜಸ್ ಹರಳು ಸಿಡಿದಂತೆ ಮಾಡಿದ ಭಾಷಣ ಎಲ್ಲರ ಗಮನ ಸೆಳೆಯಿತು. ಇದರಿಂದ ಖುಷಿಗೊಂಡು ಶಾಸಕ ಸಿ.ಎಸ್.ನಿರಂಜನ್‍ಕುಮಾರ್ ಬಾಲಕನಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಸದಸ್ಯರಾದ ನಾಗೇಶ್, ರಾಜಗೋಪಾಲ್, ಅಣ್ಣಯ್ಯಸ್ವಾಮಿ, ತಹಸೀಲ್ದಾರ್ ಸಿ.ಜಿ.ರವಿಶಂಕರ್, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜಾಗೃತಿ ಸಮಿತಿ ಅಧ್ಯಕ್ಷ ಬಸವರಾಜು, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎನ್.ಮಲ್ಲೇಶ್, ತಾಪಂ ಇಒ ಶ್ರೀಕಂಠರಾಜೇ ಅರಸ್, ಬಿಇಒ ಎಸ್.ಸಿ.ಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಆರ್.ಹೇಮಂತರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡೇಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ವರಿದ: ಬಸವರಾಜು ಎಸ್.ಹಂಗಳ