ಹೊಸ ಕೆಸಿಇಟಿ ಕೋರ್ಸ್‌ಗಳು ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜುಗಳಿಗೆ ತಯಾರಿ ನಡೆಸುತ್ತಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆಕಾಶ್ +ಬೈಜೂಸ್ ದೂರದೃಷ್ಟಿಯ ಒಂದು ಭಾಗವಾಗಿದೆ.
ಘಿI ತರಗತಿಗಾಗಿ ಪ್ರತ್ಯೇಕ ಬ್ಯಾಚ್‌ಗಳನ್ನು ರಚಿಸಲಾಗುತ್ತದೆ.ಆಕಾಶ್ ಬೈಜೂಸ್ ಎರಡು ಕೋರ್ಸ್‌ಗಳನ್ನು ನೀಡುತಿದೆ; ಇಂಟಿಗ್ರೇಟೆಡ್ ಜೆಇಇ+ಕೆಸಿಈಟಿ ಮತ್ತು ಕೋರ್ಸ್ ಕೆಸಿಈಟಿ ಆಕಾಂಕ್ಷಿಗಳಿಗೆ ಮಾತ್ರ. ಮೈಸೂರು, ಮಾರ್ಚ್ ೨೯, ೨೦೨೨: ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಜೆಇಇ ಮೇನ್ ಗಳಿಗೆ ಪ್ರಾದೇಶಿಕ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಬಯಸುವ ಘಿI ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳಲ್ಲಿ ಭಾರತದ ಮಂಚೂಣಿಯಲ್ಲಿರುವ ಆಕಾಶ್ +ಬೈಜೂಸ್ ಕರ್ನಾಟಕದಲ್ಲಿ ಅಇಖಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಕೋರ್ಸ್‌ಗಳನ್ನು ಪರಿಚಯಿಸಿದೆ. ಆಕಾಶ್ +ಬೈಜೂಸ್ ರಾಜ್ಯ ಮಂಡಳಿ(ಸ್ಟೇಟ್‌ಬೋರ್ಡ್)ಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ಕೋರ್ಸ್‌ಗಳನ್ನು ನೀಡಲಿದೆ ಮತ್ತು ಬೋರ್ಡ್ ಪರೀಕ್ಷೆಗಳು ನಡೆದ ನಂತರ ಈ ಕೋರ್ಸ್‌ಗಳು ಪ್ರಾರಂಭವಾಗಲಿದೆ.ಈ ಹೊಸ ಕೆಸಿಇಟಿ ಕೋರ್ಸ್ ಗಳು ಸಿಬಿಎಸ್‌ಇ ಸಂಯೋಜಿತ ಶಾಲಾ ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಪಠ್ಯಕ್ರಮದ ಹೊರತಾಗಿ ಸ್ಥಳೀಯ ಮಾರುಕಟ್ಟೆಯನ್ನು ತಲುಪಲು ಹಾಗೂ ರಾಜ್ಯ ಮಂಡಳಿಗಳ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಆಕಾಶ್ + ಬೈಜೂಸ್‌ನ ದೂರದೃಷ್ಟಿಯ ಒಂದು ಭಾಗವಾಗಿದೆ. ಇದು ಎಂಜಿನಿಯರಿಂಗ್ ಕಾಲೇಜು ಹಾಗೂ ಜೆಇಇ ಮೇನ್ಸ್ ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಮಗ್ರ ಕಲಿಕೆಗೆ ಅವಕಾಶ ನೀಡಲಿದೆ.
ನಿರ್ದೇಶಕರಾದ ಆಕಾಶ್ ಚೌಧರಿ, ‘ನಮ್ಮ ‘ವಿದ್ಯಾರ್ಥಿಗಳು ಮೊದಲು’ಮುಂದಾಳತ್ವದಲ್ಲಿ ಪ್ರಾದೇಶಿಕ ಹಾಗೂ ಮುಖ್ಯವಾಹಿನಿಯ ವಿದ್ಯಾರ್ಥಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದರ ಕುರಿತು ಗಮನ ನೀಡಲಾಗುತ್ತಿದೆ. ನಮ್ಮ ಇಂಟಿಗ್ರೇಟೆಡ್ ಸಿಇಟಿ ಕೋರ್ಸ್ ಮೂಲಕ ಹೆಚ್ಚಿನ ಶೇಖಡಾವಾರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ತಲುಪುವ ಗುರಿಯನ್ನು ನಾವು ಹೊಂದಿದ್ದೇವೆ ಹಾಗೂ ಅವರನ್ನು ಕೆಸಿಇಟಿ ಮಾತ್ರವಲ್ಲದೇ, ಜೆಇಇ ಮೇನ್ಸ್ ಹಾಗೂ ಅಡ್ವಾನ್ಸ್‌ಗೆ ಸಹ ಸಿದ್ಧಪಡಿಸುತ್ತೇವೆ. ನಮ್ಮ ತರಬೇತಿ ತಜ್ಞರು ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಗುಣಮಟ್ಟದ ಮಾರ್ಗದರ್ಶನವನ್ನು ನೀಡುತ್ತಾರೆ.ಎಂದು ಹೇಳಿದರು.
ಬಳಿಕ ಮಾತನಾಡಿದ ಹರೀಶ್ ಅಸಿಸ್ಟೆಂಟ್ ಮ್ಯಾನೆಜರ್ ಮಾತನಾಡಿ ಎಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರವೇಶಾತಿ ಪರೀಕ್ಷೆಗೆ ಪೂರ್ವತಯಾರಿ ಮಾಡುತ್ತಾ ಇದ್ದೇವೆ. ಈಗ ಮೈಸೂರು ತಾಲೂಕು ಮತ್ತು ಗ್ರಾಮಾಂತರ ಮಟ್ಟದಲ್ಲಿ ನೋಡಿದ್ರೆ ಭಾಗಷಃ ವಿದ್ಯಾರ್ಥಿಗಳು ತಯಾರಿಗೊಳ್ಳುವುದು ಕರ್ನಾಟಕ ಸಿ.ಇಟಿ ಪರೀಕ್ಷೆಗೆ. ಹಾಗೆ ನೋಡೋದಾದ್ರೆ ಕರ್ನಾಟಕದಲ್ಲಿರುವ ಸುಮಾರು ೨೫೦೦ ಕ್ಕೂ ಸರ್ಕಾರಿ ಮತ್ತು ಅರೆಸರ್ಕಾರಿ ಕಾಲೇಜುಗಳಲ್ಲಿ ಸೀಟು ತೆಗೆದುಕೊಳ್ಳಬೇಕೆಂದರೆ ಕರ್ನಾಟಕ ಸಿ.ಇಟಿ ಬರೆಯಬೇಕು. ಆ ನಿಟ್ಟಿನಲ್ಲಿ ಗ್ರಾಮಾಂತರ ಮತ್ತು ತಾಲೂಕು ಮಟ್ಟದ ವಿದ್ಯಾರ್ಥಿಗಳಿಗೆ ಉಪಯೋಗ ಆಗಲಿ ಅಂತ ಈ ಕೋರ್ಸನ್ನು ಪ್ರತ್ಯೇಕವಾಗಿ ಆರಂಭಿಸಿದ್ದೇವೆ. ಕರ್ನಾಟಕದಾದ್ಯಂತ ಆರಂಭಿಸಿದ್ದೇವೆ ಇದರ ಫಲಾನುಭವಿಗಳಾಗಿ ಮೈಸೂರಿನವರು ಚೆನ್ನಾಗಿ ಬಳಸಿಕೊಳ್ಳಬಹುದು. ಒಂದು ಕರ್ನಾಟಕ ಸಿ.ಇಟಿ ತಯಾರಿ ಇನ್ನೊಂದು ರಾಷ್ಟ್ರೀಯ ಕರ್ನಾಟಕ ಸಿ.ಇಟಿ ತಯಾರಿ ಎರಡಕ್ಕೂ ನಮ್ಮಲ್ಲಿ ತರಬೇತಿ ನೀಡಲಾಗುತ್ತದೆ.ಎಂದು ತಿಳಿಸಿದರು.