ಮೈಸೂರು.4 ರಾಜ್ಯದ ಎಲ್ಲಾ ಶೋಷಿತರ ಪರವಾಗಿ ಹೋರಾಟ ಮಾಡಲು ಹಾಗೂ ನಾಡಿನ ಮುನ್ನಡೆಗಾಗಿ ಯುವ ಜನರನ್ನು ಸಂಘಟಿತರನ್ನಾಗಿಸುವ ಉದ್ದೇಶದಿಂದ ‘ಯುವಜನರಿಗೆ ಮನದಟ್ಟುಮಾಡಿ ಅವರನ್ನು ಸರಿ ದಾರಿಗೆ ಕರೆತರುವ ಕೆಲಸ ಆಗಬೇಕಿದೆ. 

ಈ ದೃಷ್ಟಿಯಿಂದ ಯುವಕರಲ್ಲಿ ಜಾಗೃತಿ ಮೂಡಿಸಿ, ಸಂಘಟಿತರನ್ನಾಗಿಸುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಕ್ರಿಯಾಶೀಲರನ್ನಾಗಿಸಲು ಯುವ ಅಹಿಂದ ವೇದಿಕೆ ಕಾರ್ಯನಿರ್ವಹಿಸಲಿದೆ.ಅಹಿಂದ’ ವೇದಿಕೆಯನ್ನು ಮತ್ತೆ ಚುರುಕುಗೊಳಿಸುತ್ತೇವೆ ಎಂದು ಅಹಿಂದ ಮೈಸೂರು ನಗರಾಧ್ಯಕ್ಷ ಎಸ್. ಮಂಜುನಾಥ್ ತಿಳಿಸಿದರು.

ಸಂಘಟನಾ ಕಾರ್ಯದರ್ಶಿ ನಂಜುಂಡಸ್ವಾಮಿ ಮತ್ತು ಜಿಲ್ಲಾಧ್ಯಕ್ಷ ಮಹಾದೇವಸ್ವಾಮಿ ಹಾಗೂ ಮೈಸೂರು ನಗರ ಅಹಿಂದ ಅಧ್ಯಕ್ಷ ಎಸ್ ಮಂಜುನಾಥ್ (ಮಂಜು ಶಿವರಾಮ್) ಚಿತ್ರದಲ್ಲಿ ಕಾಣಬಹುದು.