ಮೈಸೂರು, – ಎಚ ಡಿ ಬಿ ಬ್ಯಾಂಕೊಂದರ ಎದುರು ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಸೋಮವಾರ ಸಂಜೆ ನಗರದ ಸುಣ್ಣದಕೇರಿಯ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನಡೆದಿದೆ.
ಇಲ್ಲಿನ ಹೆಚ್‌ಡಿಬಿ ಫೈನಾನ್ಸಿಯಲ್ ಸರ್ವೀಸಸ್ ಬ್ಯಾಂಕ್ ಎದುರು ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿದ್ದು, ಗಣರಾಜ್ಯೋತ್ಸವದ ಹಿನ್ನೆಲೆ ಯಾರಾದರೂ ಬಾಂಬ್ ಇಟ್ಟಿರಬಹುದು ಎಂಬ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ ೬ ಗಂಟೆಯಲ್ಲಿ ಬ್ಯಾಂಕ್ ಎದುರಿನಲ್ಲಿ ಅನುಮಾನಸ್ಪದ ಬ್ಯಾಗ್ ಬಿದ್ದಿರುವುದನ್ನು ಕಂಡು ಭಯಬೀತರಾದ ಸ್ಥಳಿಯ ನಿವಾಸಿಗಳು ಕೂಡಲೇ ಕೆ.ಆರ್. ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಮಿಸಿದ ಕೆ.ಆರ್.ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಬಾಂಬ್ ಪತ್ತೆ ದಳ ಹಾಗೂ ಶ್ವಾನದಳಕ್ಕೆ ಮಾಹಿತಿ ರವಾನಿಸಿದ್ದಾರೆ.ನಂತರ ಬಂದ ಶ್ವಾನದಳ, ಬಾಂಬ್ ಪತ್ತೆ ದಳ ಸಿಬ್ಬಂದಿ ಅನುಮಾನಸ್ಪದವಾಗಿ ಬಿದ್ದಿದ್ದ ಬ್ಯಾಗ್‌ನ್ನು ಪರೀಶಿಲನೆ ಮಾಡಿದಾಗ ಬ್ಯಾಗ್‌ನಲ್ಲಿ ಯಾವುದೆ ಸ್ಫೋಟಕ ವಸ್ತುಇರಲ್ಲಿಲ್ಲ ಬ್ಯಾಗ್ ನಲ್ಲಿ ಬಲ್ಬ್ ಹಳೆ ವೇಸ್ಟ್ ಬಟ್ಟೆ ಪೀಸ್
ಇರುವದು ಗೊತ್ತಾಗಿದೆ
. ಗಣರಾಜ್ಯೋತ್ಸವ ಹಿನ್ನೆಲೆ ಅನುಮಾನಸ್ಪದ ಬ್ಯಾಗ್ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರನ್ನು ಹತ್ತಿರ ಹೋಗದಂತೆ ಸೂಚಿಸಲಾಗಿತ್ತು. ಬ್ಯಾಗ್‌ನಲ್ಲಿ ಬಲ್ಬ್ ಹೊರತು ಮತ್ತೇನೂ ಇರಲಿಲ್ಲ ಎಂದು ಡಿಸಿಪಿ ಪ್ರಕಾಶ್‌ಗೌಡ ತಿಳಿಸಿದರು.