ಮೈಸೂರು: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ಸಿಲುಕಿರುವ ರಂಗಭೂಮಿ ಕಲಾವಿದರಿಗೆ ಮತ್ತು ಆರ್ಕೆಸ್ಟ್ರಾ ಕಲಾವಿದರಿಗೆ ದಿನನಿತ್ಯ ಬಳಕೆಯ ದಿನಸಿ ಕಿಟ್ ಗಳನ್ನು ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ವಿತರಿಸಲಾಯಿತು .
ಈ ವೇಳೆ ಮಾತನಾಡಿದ ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ.ಲೋಹಿತ್ ಅವರು, ಕಲಾವಿದರಿಗೆ ಲಾಕ್ ಡೌನ್ ವೇಳೆ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ದಿನಗೂಲಿ ಕಾರ್ಮಿಕರು ಲಾಕ್ ಡೌನ್ ಸಂದರ್ಭದಲ್ಲೂ ಕೆಲವು ಕಡೆ ಜೀವನ ಸಾಗಿಸಲು ಕೆಲಸಮಾಡಿ ಸಂಪಾದಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ಕಲಾವಿದರು ಜೀವನ ಸಾಗಿಸಬೇಕಾದರೆ ಕಲೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾತ್ರಾ ಮಹೋತ್ಸವಗಳು, ಮದುವೆ ಶುಭ ಸಮಾರಂಭಗಳು ಹಾಗೂ ಭಜನೆ ಕಾರ್ಯಕ್ರಮಗಳು ನಡೆಯಬೇಕು ಆದರೆ ಅದ್ಯಾವುದು ನಡೆಯುತ್ತಿಲ್ಲ. ಹೀಗಾಗಿ ಜೀವನ ನಡೆಸಲು ಕಷ್ಟವಾಗುತ್ತಿಲ್ಲ.
ಈ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ರಂಗಭೂಮಿ ಕಲಾವಿದರಿಗೆ ಮತ್ತು ಆರ್ಕೇಸ್ಟ್ರಾ ಕಲಾವಿದರನ್ನು ಗುರುತಿಸಿ ದಿನಸಿ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಕಲಾವಿದರು ಚೆನ್ನಾಗಿರಬೇಕು ಏಕೆಂದರೆ ಪ್ರತಿಯೊಬ್ಬರನ್ನೂ ರಂಜಿಸುವ ಕಲಾವಿದರಿಗೆ ನಾವು ನೆರವಾಗಲೇಬೇಕು. ಕಷ್ಟಕ್ಕೆ ಸ್ಪಂದಿಸುವ ಮಾನವೀಯತೆ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ನರಸಿಂಹ ರಾಜ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ವೇಲು ಮಾತನಾಡಿ ಯುವಮೋರ್ಚಾ ತಂಡ ಕಲಾವಿದರಿಗೆ ಮಾಡುತ್ತಿರುವ ಸೇವೆ ಶ್ಲಾಘನೀಯ, ದಿನದ ಒಂದು ಹೊತ್ತು ಊಟ ಕೊಡುವುದರ ಬದಲು ತಿಂಗಳ ಮಟ್ಟಿಗೆ ಆಗುವಂತಹ ಜೀವನಕ್ಕೆ ದಿನಸಿ ಪದಾರ್ಥ ಕೊಡುವುದು ಅತ್ಯಂತ ಅವಶ್ಯಕವಾದಂತಹ ಕೆಲಸ. ಹೀಗೆ ಇವರ ಕೆಲಸ ಮುಂದುವರಿಯಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮೈಸೂರು ನಗರ ಕಾರ್ಯಕಾರಣಿ ಸದಸ್ಯರಾದ ಕೃಷ್ಣಮೂರ್ತಿ ರಾವತ್ (ಡಾನ್) ಕ್ಷೇತ್ರದ ಕಾರ್ಯದರ್ಶಿ ಸ್ಮಾರ್ಟ್ ಮಂಜು, ಮೈಸೂರು ನಗರ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಆನಂದ, ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ, ಧನರಾಜ್, ಮತ್ತು ಬ್ರಾಹ್ಮಣ ಸಂಘದ ಯುವ ಬಳಗದ ನಿರ್ದೇಶಕರಾದ ಸುಚೀಂದ್ರ,ಕಲಾವಿದರಾದ ಹೊಸಕೋಟೆ ಶಿವಮಲ್ಲು, ಕ್ಷೇತ್ರದ ಯುವ ಮೋರ್ಚಾ ಕಾರ್ಯದರ್ಶಿ ರಾಜು ಮುಂತಾದವರು ಉಪಸ್ಥಿತರಿದ್ದರು.