ಚಾಮರಾಜನಗರ:ಕೃಷಿ ಉತ್ಪಾದಕತೆಯ ಹೆಚ್ಚಳ, ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರ ಕಡಿಮೆ ಮಾಡಲು ಪ್ರತಿ ಎಕರೆಗೆ ೨೫೦ ರೂ. ಗಳಂತೆ ಗರಿ? ಐದು ಎಕರೆಗೆ ಡಿ.ಬಿ.ಟಿ ಮೂಲಕ ಡೀಸೆಲ್‌ಗೆ ಸಹಾಯಧನ ನೀಡುವ "ರೈತ ಶಕ್ತಿ" ಯೋಜನೆ ಪ್ರಯೋಜನಕ್ಕೆ ರೈತರು ಫ್ರೂಟ್ಸ್ ಪೋರ್ಟಲ್ ನಲ್ಲಿ ಎಲ್ಲಾ ಭೂ ಹಿಡುವಳಿ ವಿವರಗಳನ್ನು ಕಡ್ಡಾಯವಾಗಿ ನೊಂದಣಿ, ಅಪ್ ಡೇಟ್ ಮಾಡಿಕೊಳ್ಳಲು ಕೃಷಿ ಇಲಾಖೆ ಮನವಿ ಮಾಡಿದೆ.
ಯೋಜನೆಯಡಿ ಸೌಲಭ್ಯ ಪಡೆಯಲು ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ರೈತರು ಹೊಂದಿರುವ ಹಿಡುವಳಿಯ ಆಧಾರದ ಮೇಲೆ ಪ್ರತಿ ರೈತರಿಗೆ ಪ್ರತಿ ಎಕರೆಗೆ ೨೫೦ ರೂ. ರಂತೆ ಗರಿ? ಐದು ಎಕರೆಗೆ ೧೨೫೦ ರೂ. ವರೆಗೆ ಡೀಸೆಲ್ ಸಹಾಯಧನವನ್ನು ಒದಗಿಸಬೇಕಾಗಿರುತ್ತದೆ. 
ಆದರೆ ಫ್ರೂಟ್ಸ್ ಪೋರ್ಟಲ್ ನಲ್ಲಿ ಇಲ್ಲಿಯವರೆಗೆ ಎಲಾ ಲ್ಯಾಂಡ್ ಪಾಸೆಸಲ್ಸ್‌ಗಳು ನೋಂದಾವಣಿಯಾಗಿರುವುದಿಲ್ಲ. ಆದ ಕಾರಣ ಪ್ರತಿಯೊಬ್ಬ ರೈತರು ಫ್ರೂಟ್ಸ್ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು. ಫ್ರೂಟ್ಸ್ ಪೋರ್ಟಲ್ ನಲ್ಲಿ ನಮೂದಿಸಿರುವ ಭೂ ಹಿಡುವಳಿಯ ಆಧಾರದ ಮೇಲೆ ಎಕರೆಗೆ ೨೫೦ ರೂ. ರಂತೆ ಗರಿ? ಐದು ಎಕರೆಗೆ ೧೨೫೦ ರೂ. ರವರೆಗೆ ಡೀಸೆಲ್ ಸಹಾಯಧನವನ್ನು ನೀಡಲಾಗುವುದು. 
ಫೂಟ್ಸ್ ಪೋರ್ಟಲ್‌ನಲ್ಲಿ ಎಲ್ಲಾ ರೈತರು ಹೊಂದಿರುವ ಎಲ್ಲಾ ಭೂ ಹಿಡುವಳಿಗಳನ್ನು ನೋಂದಾಯಿಸಿಕೊಳ್ಳಲು ಹಾಗೂ ಜಿಲ್ಲೆಯ ಎಲಾ ಲ್ಯಾಂಡ್ ಪಾರ್ಸೆಸಲ್ಸ್ ಗಳನ್ನು ಬರುವಂತೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೈತರು ಆಯಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಎಲ್ಲಾ ಭೂ ಹಿಡುವಳ ವಿವರಗಳನ್ನು ಕಡ್ಡಾಯವಾಗಿ ಫೂಟ್ಸ್ ಪೋರ್ಟಲ್ ನಲ್ಲಿ ನೋಂದಣಿ, ಅಪಡೇಟ್ ಮಾಡಿಸಿಕೊಳ್ಳಬೇಕೆಂದು ಚಾಮರಾಜನಗರ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.